ಇವಿಎಂ ಪದ್ಧತಿ ರದ್ದುಗೊಳಿಸಿ

ಬೆಂಗಳೂರು, ಅ.31- ಪಾರದರ್ಶಕ ಚುನಾವಣೆಗೆ ಇವಿಎಂ ಪದ್ಧತಿ ರದ್ದುಗೊಳಿಸಿ ಹಳೆಯ ಬ್ಯಾಲೆಟ್ ಪೇಪರ್ ಬಳಸುವಂತೆ ಒತ್ತಾಯಿಸಿ ನ.2ರಂದು ಮೌರ್ಯ ಹೋಟೆಲ್ ಎದುರು ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಡಾ.ಆರ್.ಅಶ್ವತ್ಥ ನಾರಾಯಣ ಅಂತ್ಯಜ ಮಾತನಾಡಿ, ಸುಪ್ರಿಂಕೋರ್ಟ್ 2013ರಲ್ಲಿ ಪಾರದರ್ಶಕ ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು. ಅದರೆ, ಚುನಾವಣಾ ಆಯೋಗ ಇವಿಎಂ ಮೂಲಕ ಚುನಾವಣೆ ನಡೆಸುತ್ತಿರುವುದು ಹಲವು  ಅನುಮಾನಗಳಿಗೆ ಕಾರಣವಾಗಿದೆ. ಆದ್ದರಿಂದ ಇದನ್ನು ರದ್ದುಗೊಳಿಸಿ ಹಳೆ ಪದ್ಧತಿಯನ್ನೇ ಮುಂದುವರಿಸುವಂತೆ ಒತ್ತಾಯಿಸಿದರು.

ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ.ಕೂಡಲೇ   35 ಸಾವಿರ ಕೋಟಿ ಪರಿಹಾರ ನೀಡುವಂತೆ ಡಾ.ಆರ್.ಅಶ್ವತ್ಥ ನಾರಾಯಣ ಅಂತ್ಯಜ ಒತ್ತಾಯಿಸಿದರು.

ಇಡಿ, ಸಿಬಿಐ, ಐಟಿ ಸಂಸ್ಥೆಗಳ ಮೂಲಕ ವಿರೋಧ ಪಕ್ಷಗಳ ನಾಯಕರ ಮೇಲೆ ಪಕ್ಷಪಾತ ತನಿಖೆ ನಡೆಸಲಾಗುತ್ತಿದೆ ಎಂದು ದೂರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ