ಇತಿಹಾಸದಲ್ಲಿ ಟಿಪ್ಪುವನ್ನು ಹೀರೋ ಆಗಿ ಬಿಂಬಿಸಲಾಗಿದೆ-ಸಚಿವ ಆರ್.ಅಶೋಕ್

ಬೆಂಗಳೂರು, ಅ.31- ಟಿಪ್ಪು ಒಬ್ಬ ಮತಾಂಧ.ಇತಿಹಾಸದಲ್ಲಿ ಟಿಪ್ಪುವನ್ನು ಹೀರೋ ಆಗಿ ಬಿಂಬಿಸಲಾಗಿದೆ. ಇದು ತಪ್ಪು. ಪಠ್ಯದಲ್ಲಿ ಆತನ ಇತಿಹಾಸವನ್ನು ವಿದ್ಯಾರ್ಥಿಗಳು ಓದಬಾರದು. ಆತ ಹಿಂದೂಗಳ ಮೇಲೆ ನಡೆಸಿದ ದಬ್ಬಾಳಿಕೆಯನ್ನು ಇಂದಿನ ಪೀಳಿಗೆಗೆ ತಲುಪಿಸುವ ಅವಶ್ಯಕತೆ ಇದೆ ಎಂದು ಕಂದಾಯ, ಸಂಸದ ತೇಜಸ್ವಿ ಸೂರ್ಯ ಇಂದಿಲ್ಲಿ ಅಭಿಪ್ರಾಯಪಟ್ಟರು.

ಬೇಂಗಳೂರಿನ ಯಡಿಯೂರು ವಾರ್ಡ್‍ನಲ್ಲಿ ನಿರ್ಮಿಸಿರುವ ಪ್ರಕೃತಿ ವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆರ್.ಆಶೋಕ್ ಮಾತನಾಡಿ, ಟಿಪ್ಪು ಸುಲ್ತಾನ್ ಒಬ್ಬ ಮತಾಂಧ. 3000 ಹಿಂದೂಗಳನ್ನು ಹತ್ಯೆ ಮಾಡಿದ್ದಾನೆ. ತನ್ನ ಕತ್ತಿಯ ಮೇಲೆ ಪರ್ಷಿಯನ್ ಭಾಷೆಯಲ್ಲಿ ಹಿಂದೂಗಳನ್ನು ಕೊಲ್ಲಿ ಎಂದು ಬರೆದುಕೊಂಡಿದ್ದಾನೆ. ಅಂತಹವನ ಇತಿಹಾಸವನ್ನು ಮಕ್ಕಳು ಪಠ್ಯದಲ್ಲಿ ಓದುವ ಅಗತ್ಯವಿಲ್ಲ.

ಸಿದ್ದರಾಮಯ್ಯ ಟಿಪ್ಪು ಅಭಿಮಾನಿ.ಅಂಧಾಭಿಮಾನಕ್ಕೆ ಕಟ್ಟುಬಿದ್ದು ಏನೇನೋ ಮಾತನಾಡುತ್ತಾರೆ.ಇದಕ್ಕೆ ಬೆಲೆ ಕೊಡಬಾರದು ಎಂದರು.

ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಮೊದಲು ಜಿಲ್ಲಾ ಕೇಂದ್ರಗಳಿಗೆ ಆದ್ಯತೆ ಕೊಡಬೇಕು.ನಮ್ಮ ಸರ್ಕಾರ ರಚನೆಯಾದ ನಂತರ ಜಿಲ್ಲಾ ಕೇಂದ್ರಗಳಿಗೆ ಮೆಡಿಕಲ್ ಕಾಲೇಜು ಕೊಡುವುದಾಗಿ ಘೋಷಿಸಿದ್ದೆವು. ಹಾಗಾಗಿ ಚಿಕ್ಕಬಳ್ಳಾಪುರಕ್ಕೆ ಕೊಡುತ್ತಿದ್ದೇವೆ. ಜಿಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ಕಾಲೇಜು ಕೊಟ್ಟ ಬಳಿಕ ತಾಲ್ಲೂಕು ಕೇಂದ್ರಗಳಲ್ಲೂ ತೆರೆಯಲು ಯೋಚಿಸುತ್ತೇವೆ. ಇದರಲ್ಲಿ ಯಾವುದೇ ದ್ವೇಷದ ರಾಜಕಾರಣ ಇಲ್ಲ. ಕಾನೂನು ಪ್ರಕಾರ ಏನೇನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳುವ ಮೂಲಕ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ತೆರೆಯುವ ಬಗ್ಗೆ ಅಶೋಕ್ ಸಮರ್ಥಿಸಿಕೊಂಡರು.

ಸಿದ್ದರಾಮಯ್ಯ ಅವರ ಸರ್ಕಾರದ ಹಾಗೆ ನಮ್ಮದು ನಿದ್ದೆ ಮಾಡುವ ಸರ್ಕಾರ ಅಲ್ಲ. ನಾವು ನುಡಿದಂತೆ ನಡೆಯುತ್ತೇವೆ ಎಂದು ಟಾಂಗ್ ನೀಡಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಇತಿಹಾಸದಲ್ಲಿ ಟಿಪ್ಪುವನ್ನು ಹೋರಾಟಗಾರನಂತೆ ಬಿಂಬಿಸಿದ್ದಾರೆ. ಆತ ಹಿಂದೂಗಳ ಮೇಲೆ ನಡೆಸಿದ ಕ್ರೌರ್ಯ ಮುಚ್ಚಿಹೋಗಿದೆ.ಶ್ರೀರಂಗಪಟ್ಟಣ ಸುತ್ತಮುತ್ತಲಿನ ದೇವಸ್ಥಾನಗಳು ಹಾಳಾಗಲು ಆತನೇ ಕಾರಣ.ಆತ ನಡೆಸಿದ ದಬ್ಬಾಳಿಕೆ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ