ನಾನು ಬಿಜೆಪಿ ಸರ್ಕಾರವನ್ನ ಬೀಳಿಸಲ್ಲ:ಮಾಜಿ ಸಿಎಮ್ ಕುಮಾರಸ್ವಾಮಿ

ಚಿಕ್ಕೊಡಿ: ನಾನು ಬಿಜೆಪಿ ಸರ್ಕಾರವನ್ನ ಬೀಳಿಸಲ್ಲ ಎಂದು ಮಾಜಿ ಸಿಎಮ್ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕೊಡಿಯಲ್ಲಿ ನೆರೆಸಂತ್ರಸ್ತರನ್ನ ನೋವನ್ನ ಆಲಿಸಲು ಬಂದಿರುವ ಕುಮಾರಸ್ವಾಮಿ, ನಾನು ಹಬ್ಬ ದಿನ ಮನೆಯಲ್ಲಿ ಅರಮಾವಾಗಿ ಮನೆಯಲ್ಲಿ ಇರಬಹುದಿತ್ತು. ಆದರೆ ಮನಸ್ಸು ತಡೆಯಲಿಲ್ಲ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನಾನು ಯಾವ ಕಾರಣಕ್ಕೂ ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಬಿಜೆಪಿ ಅವರು ನಮ್ಮ ಸರ್ಕಾರ ಬೀಳಿಸಿದರು ಆದರೆ ನಾನು ಬಿಜೆಪಿ ಸರ್ಕಾರವನ್ನ ಬೀಳಿಸಲ್ಲ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ