ಪ್ರಾಮಾಣಿಕತೆ ಮೆರೆದ ವಿಧಾನಸಭೆಯ ಸಚಿವಾಲಯದ ನೌಕರ ಮುನಾವರ್ ಬೇಗ್

Varta Mitra News

ಬೆಂಗಳೂರು, ಅ.25- ಆಟೋರಿಕ್ಷಾದಲ್ಲಿ  ಮರೆತು ಬಿಟ್ಟು ಹೋಗಿದ್ದ ಐಪ್ಯಾಡನ್ನು ವಿಧಾನಸಭೆಯ ನೌಕರರೊಬ್ಬರು ಗಮನಿಸಿ ಆಯುಕ್ತರ ಕಚೇರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ವಿಧಾನಸಭೆಯ ಸಚಿವಾಲಯದ ನೌಕರರಾದ ಮುನಾವರ್ ಬೇಗ್ ಎಂಬುವರು ನಿನ್ನೆ ಮಧ್ಯಾಹ್ನ ಶಾಸಕರ ಭವನದಿಂದ ಸ್ವಂತ ಕೆಲಸದ ನಿಮಿತ್ತ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಆಟೋದಲ್ಲಿ ಐಪ್ಯಾಡ್ ಇರುವುದು ಗಮನಿಸಿದ್ದಾರೆ.

ಈ ಬಗ್ಗೆ ಆಟೋ ಚಾಲಕನನ್ನು ಬೇಗ್ ಅವರು ವಿಚಾರಿಸಿದಾಗ ಯಾರೋ ಪ್ರಯಾಣಿಕರು ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಐಪ್ಯಾಡನ್ನು ಬೇಗ್ ಅವರು ತೆಗೆದುಕೊಂಡು ವಿಧಾನಸೌಧ ಪೆÇಲೀಸ್ ಠಾಣೆಗೆ ಬಂದಿದ್ದು, ಠಾಣಾಧಿಕಾರಿಯ ನಿರ್ದೇಶನದ ಮೇರೆಗೆ ಪೆÇಲೀಸ್ ಆಯುಕ್ತರ ಕಚೇರಿಯ ಪಿಆರ್‍ಒ ವಿಭಾಗಕ್ಕೆ ತಂದು ಒಪ್ಪಿಸಿದ್ದಾರೆ.

ಈ ವಿಚಾರವನ್ನು ಪಿಆರ್‍ಒ ಕಚೇರಿ ಸಿಬ್ಬಂದಿ  ನಿಯಂತ್ರಣ ಕೊಠಡಿಯ ಮುಖಾಂತರ ಎಲ್ಲಾ ಪೆÇಲೀಸ್ ಠಾಣೆಗಳಿಗೆ ವೈರ್‍ಲೆಸ್ ಮೂಲಕ ಮಾಹಿತಿ ರವಾನಿಸಿದ್ದಾರೆ.

ತದನಂತರ ಡಯಲ್ 100 ಸಿಬ್ಬಂದಿಯವರು ಪಿಆರ್‍ಒ ಕಚೇರಿಯನ್ನು ಸಂಪರ್ಕಿಸಿ  ಐಪ್ಯಾಡ್ ಕಳೆದುಕೊಂಡ ವ್ಯಕ್ತಿಯ ವಿವರ ನೀಡಿದ್ದು, ಆ ವ್ಯಕ್ತಿಯ ವಿವರ ಪರಿಶೀಲಿಸಿ ನಂತರ ನಗರ ಪೆÇಲೀಸ್ ಆಯುಕ್ತರು ವಾರಸುದಾರರಿಗೆ ಒಪಿಸಿದ್ದಾರೆ.

ವಿಧಾನಸಭೆಯ ಸಚಿವಾಲಯದ ನೌಕರರಾದ ಮುನಾವರ್ ಬೇಗ್ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿ ನಗರ ಪೆÇಲೀಸ್ ಆಯುಕ್ತರಾದ ಭಾಸ್ಕರ್‍ರಾವ್ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ