ಜೆಡಿಎಸ್ ಯುವ ಮುಖಂಡರೊಬ್ಬರ ಮೇಲೆ ದೌರ್ಜನ್ಯ-ಸಬ್‍ಇನ್‍ಸ್ಪೆಕ್ಟರ್ ಅವರನ್ನು ಅಮಾನತಿನಲ್ಲಿಡಬೇಕು-ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು,ಅ.25- ಜೆಡಿಎಸ್ ಯುವ ಮುಖಂಡರೊಬ್ಬರ ಮೇಲೆ ದೌರ್ಜನ್ಯ ವೆಸಗಿರುವ ಆರೋಪಕ್ಕೆ ಒಳಗಾಗಿರುವ ಯಾದಗಿರಿ ನಗರ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ಅವರನ್ನು ಅಮಾನತಿನಲ್ಲಿಡಬೇಕೆಂದು ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಗೌಡರು, ಕಾನೂನಿಗೆ ಗೌರವ ಮತ್ತು ಅಮಾಯಕ ವ್ಯಕ್ತಿಗಳಿಗೆ ಸಹಜ ನ್ಯಾಯ ಸಿಗುವ ನಿರ್ಧಾರವನ್ನು ಕೈಗೊಳ್ಳಬೇಕೆಂದು ಕೋರುತ್ತಾ ನೋವಿನಿಂದ ಪತ್ರ ಬರೆದಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜಕೀಯ ದುರದ್ದೇಶಗಳಿಗಾಗಿ ಯಾವುದೇ ಪಕ್ಷದ  ಕಾರ್ಯಕರ್ತರನ್ನು ಪೆÇಲೀಸರ ಮೂಲಕ ಹಿಂಸಿಸುವುದು ಖಂಡಿತ ಅಮಾನುಷ ಮತ್ತು ಅಮಾನವೀಯವಾಗಿದೆ. ನಾಳೆ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದಾಗ ಮತ್ತೊಬ್ಬ ಕಾರ್ಯಕರ್ತರಿಗೆ ಇಂತಹ ಪ್ರಸಂಗ ಎದುರಾಗಬಾರದು.ನೀವು ನ್ಯಾಯಪರವಾಗಿ ತೀರ್ಮಾನ ಕೈಗೊಳ್ಳುತ್ತೀರಿ ಎಂದು ಭಾವಿಸಿ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಯಾದಗಿರಿಗೆ ಭೇಟಿ ನೀಡಿದ  ಸಂದರ್ಭದಲ್ಲಿ  ಅವರ ಕಾರನ್ನು ತಡೆಯಲು ಯತ್ನಿಸಿದ ಆರೋಪದ ಮೇಲೆ ಜೆಡಿಎಸ್ ಯುವ ಘಟಕದ ಮುಖಂಡ ಮಾರ್ಕಂಡಪ್ಪ ಮನೆಗಾರ್ ಎಂಬುವರನ್ನು ಗ್ರಾಮದಿಂದ ಯಾದಗಿರಿ ನಗರ ಪೆÇಲೀಸ್ ಠಾಣೆಗೆ ಕರೆತಂದು ಸಬ್‍ಇನ್‍ಸ್ಪೆಕ್ಟರ್ ಬಾಪುಗೌಡ ಅವರು ಅಮಾನುಷವಾಗಿ ಹಿಂಸಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳು ಯಾದಗಿರಿಗೆ ಬಂದಾಗ ಪ್ರತಿಭಟನೆ ಮಾಡುವಂತೆ ಹೇಳಿದ್ದು ಶಾಸಕರ ಪುತ್ರ ಶರಣಗೌಡ ಕಂದಕೂರು ಎಂಬುದಾಗಿ ಲಿಖಿತವಾಗಿ ಬರೆದುಕೊಡುವಂತೆ ಬೆದರಿಕೆ ಹಾಕಿದ್ದಾರೆ.ಅಲ್ಲದೆ ಬಾಯಲ್ಲಿ ಪಿಸ್ತೂಲ್ ಇಟ್ಟು ಎನ್‍ಕೌಂಟರ್ ಮಾಡುವ ಬೆದರಿಕೆ ಹಾಕಿದ್ದಾರೆ.ಶರಣಗೌಡ ಕಂದಕೂರು ಹೆಸರನ್ನು ಹೇಗಾದರೂ ಮಾಡಿ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶವಿದೆ ಎಂದು ಆರೋಪಿಸಿದರು.

ಸಬ್‍ಇನ್‍ಸ್ಪೆಕ್ಟರ್ ಅವರನ್ನು ಅಮಾನತು ಮಾಡುವಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಯಾದಗಿರಿಯಲ್ಲಿ ಪ್ರತಿಭಟನೆ ಮಾಡುವಾಗ ತಾವು ಬೆಂಗಳೂರಿನಿಂದ ಯಾದಗಿರಿಗೆ ತಲುಪುವುದರೊಳಗೆ ನಿಷೇಧಾಜ್ಞೆಯನ್ನು ವಿಧಿಸಲಾಗಿತ್ತು.ಆದರೂ ನಾಲ್ಕೇ ಜನ ಪ್ರತಿಭಟನೆ ನಡೆಸಿದೆವು.ಜೆಡಿಎಸ್ ಮುಖಂಡನ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ರಾಜ್ಯ ಪೆÇಲೀಸ್ ಮಹನಿರ್ದೇಶಕರ ಗಮನಕ್ಕೆ ತಂದರೂ ಪ್ರಯೋಜನವಾಗದ ಇರುವ ಹಿನ್ನೆಲೆಯಲ್ಲಿ ಸಿಎಂಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಮಾರ್ಕಂಡಪ್ಪ ಮಾನೆಗರ್ ಅವರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಬರೆದಿರುವ ದೂರಿನ ಪ್ರತಿಯನ್ನು ಸಿಎಂಗೆ ಬರೆದಿರುವ ಪತ್ರದ ಜೊತೆ ಲಗತ್ತಿಸಿರುವುದಾಗಿ ಗೌಡರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ