ಹರಿಯಣ ವಿಧಾನಸಭಾ ಚುನಾವಣೆಯಲ್ಲಿ ಹಾವು, ಏಣಿ ಆಟ

ಹರಿಯಾಣ:ಹರಿಯಾಣ:ಹರಿಯಾಣ ಫಲಿತಾಂಶದಲ್ಲಿ ಹಾವು ಏಣಿ ಆಟದಂತಾಗಿದೆ. ಭಾರೀ ನಿರೀಕ್ಷ ಹುಟ್ಟಿಸಿದ್ದ ಬಿಜೆಪಿ ಮಕಾಡೆ ಮಲುಗುತ್ತಾ ಸಾಗಿದೆ.ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬರುತ್ತದೆ ಎಂದು ಕಾಂಗ್ರೆಸ್ ನಾಯಕ  ಭೂಪೆಂದರ್ ಸಿಂಗ್ ಹೂಡ ಹೇಳಿದ್ದಾರೆ.

ಹರಿಯಣದಲ್ಲಿ ಗರಿಗೆದರಿದೆ ರಾಜಕೀಯ ಚಟುವಟಿಕೆ

ಹರಿಯಾಣದಲ್ಲಿ ರಾಜಕೀಯ ಗರಿಗೆದರಿದೆ.  ಯಾವ ಪಕ್ಷಗಳಿಗೂ ಸ್ಪಷ್ಟ ಬಹುಮತ ಸಿಕ್ಕಿಲ್ಲ ಅಧಿಕಾರದ ಕೀಲಿ ಕೈ ನನ್ನ ಬಳಿ ಇದೆ  ಎಂದು ಜೆಜೆಪಿ ನಾಯಕ  ದುಶ್ಯಂತ್ ಚೌಟೆಲಾ ಕಿಂಗ್  ಮೇಕರ್ ಸಾಧ್ಯತೆ ದಟ್ಟವಾಗಿದೆ. ಜನನಾಯಕ  ಜನತಾ ಪಕ್ಷದ ನಾಯಕ ದುಶ್ಯಂತ್ ಚೌಟೆಲಾ  45 ಸ್ಥಾನಕ್ಕಿಂತ ಜಾಸ್ತಿ ಸ್ಥಾನಗಳು ಪಕ್ಷಕ್ಕೆ ಬರುವುದಿಲ್ಲ.ಹರಿಯಾಣ ವಿಧಾನಸಭಾ ಮತ ಎಣಿಕೆಯಲ್ಲಿ ಬಿಜೆಪಿ ಆರಂಭದಲ್ಲಿ 50 ಸ್ಥಾನಗಳಲ್ಲಿ  ಮುನ್ನಡೆ ಪಡೆದಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಹರಿಯಣ ಐದು ಬಿಜೆಪಿ ನಾಯಕರು  ಹಿನ್ನಡೆ ಅನುಭವಿಸಿದ್ದರಿಂದ ಬಿಜೆಪಿ ಹಿನ್ನಡೆ ಅನುಭವಿಸಿತು. ಒಟ್ಟು ಬಿಜೆಪಿ 10 ಸ್ಥಾನ ಗಳಲ್ಲಿ ಹಿನ್ನಡೆ ಅನುಭವಿಸಿದೆ.

ಜೆಜೆಪಿ ಮೈತ್ರಿಗೆ ಬಿಜೆಪಿ ಪ್ಲಾನ್ : ಮ್ಯಾಜಿಕ್ ನಂಬರ್  ಪಡೆಯುವಲ್ಲಿ  ವಿಫಲವಾಗಿರುವ ಬಿಜೆಪಿ ಶತಯಗತಾಯ ಅಧಿಕಾರ ಹಿಡಿಯಲು ಮುಂದಾಗಿದೆ. ಇದಕ್ಕಾಗಿ ಮಿತ್ರ ಪಕ್ಷ ಅಕಾಲಿದಳದ ಸಹಾಯದೊಂದಿಗೆ ಜೆಜೆಪಿ ಜೊತೆ ಸರ್ಕಾರ ರಚಿಸಲು ಚಿಂತನೆ ನಡೆಸಿದೆ. ಆದರೆ ಜೆಜೆಪಿ ನಾಯಕ ದುಶ್ಯಂತ್ ಚೌಟೆಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ