ಹರಿಣಗಳ ಮೇಲೆ ಕೊಹ್ಲಿ ಸೈನ್ಯ ಬಿಗಿ ಹಿಡಿತ

ರಾಂಚಿ: ಹರಿಣಗಳ ವಿರುದ್ಧ ನಡೆಯುತ್ತಿರುವ ರಾಂಚಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎರಡನೇ ದಿನ ಕೂಡ ಮೇಲುಗೈ ಸಾಧಿಸಿದೆ. ಎರಡನೇ ದಿನದಾಟದ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಹರಿಣಗಳ ಮೇಲೆ ಹೇಗೆ ಸವಾರಿ ಮಾಡಿತು ಅನ್ನೋದನ್ನ ಡಿಟೇಲ್ ಆಗಿ ತೋರಿಸ್ತೀವಿ ನೋಡಿ.
ಎರಡನೇ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಹರಿಣಗಳ ಮೇಲೆ ಸವಾರಿ ಮಾಡಿದ್ರು.
ಮೊದಲ ದಿನ ಅಜೇಯ 83 ರನ್ಗಳಿಸಿದ್ದ ರಹಾನೆ ಎರಡನೇ ದಿನ ಬೌಂಡರಿಗಳ ಸುರಿಮಳೆಗೈದ್ರು. 169ನೇ ಎಸೆತದಲ್ಲಿ ಶತಕ ಸಿಡಿಸಿ ಮಿಂಚಿದ್ರು. ಅಂತಾರಾಷ್ಟ್ರೀಯ ಟೆಸ್ಟ್ ಸರಣಿಯಲ್ಲಿ ರಹಾನೆ 11ನೇ ಶತಕ ಸಿಡಿಸಿದ ಸಾಧನೆ ಮಾಡಿದ್ರು. ಜೊತೆಗೆ ಮೂರು ವರ್ಷಗಳ ಬಳಿಕ ತವರಿನಲ್ಲಿ ಶತಕ ಸಿಡಿಸಿದ್ರು. 12 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಬ್ಬರು ಮುಂಬೈ ಬ್ಯಾಟ್ಸ್ಮನ್ಗಳು ಶತಕ ಸಿಡಿಸಿದ್ದಾರೆ. 2007ರಲ್ಲಿ ಮುಂಬೈ ಬ್ಯಾಟ್ಸ್ಮನ್ಗಳಾದ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಮತ್ತು ವಾಸೀಮ್ ಜಾಫರ್ ಬಾಂಗ್ಲಾ ವಿರುದ್ಧ ಶತಕ ಸಿಡಿಸಿದ್ರು. ನಂತರ ರಹಾನೆ ಲೆಂಡೆ ಎಸೆತದಲ್ಲಿ ವಿಕೆಟ್ ಕೀಪರ್ ಕ್ಲಾಸಿನ್ಗೆ ಕ್ಯಾಚ್ ನೀಡಿ ಹೊರ ನಡೆದ್ರು.
ಶತಕ ಸಿಡಿಸಿದ ರಹಾನೆ
192 ಎಸೆತ ಎದುರಿಸಿದ ಅಜಿಂಕ್ಯ ರಹಾನೆ ಒಟ್ಟು 115 ರನ್ ಕಲೆ ಹಾಕಿದ್ರು. ಇರದಲ್ಲಿ 17 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಿತ್ತು.
ದ್ವಿ ಶತಕ ಸಿಡಿಸಿ ಅಬ್ಬರಿಸಿದ ಹಿಟ್ಮ್ಯಾನ್ ರೋಹಿತ್
ಆಲ್ರೌಂಡರ್ ರವೀಂದ್ರ ಜಡೇಜಾ ಸಾಥ್ ಪಡೆದ ರೋಹಿತ್ ಆರಂಭದಲ್ಲೆ ರಗಡ್ ಬ್ಯಾಟಿಂಗ್ ಮಾಡಿದ ರೋಹಿತ್ ಬೌಂಡರಿಗಳ ಸುರಿಮಳೆಗೈದ್ರು. ನಂತರ ವೇಗಿ ಲುಂಗಿ ಗಿಡಿ ಎಸೆತದಲ್ಲಿ ಚೆಂಡನ್ನ ಸಿಕ್ಸರ್ ಅಟ್ಟುವ ಮೂಲಕ ರೋಹಿತ್ ದ್ವಿಶತಕ ಸಿಡಿಸಿದ್ರು. 212ರನ್ ಗಳಿಸಿ ಮುನ್ನಗುತ್ತಿದ್ದ ರೋಹಿತ್ ರಬಾಡಾಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು.
ಅರ್ಧ ಶತಕ ಸಿಡಿಸಿ ಕತ್ತಿ ವರಸೆ ತೋರಿಸಿದ ಜಡ್ಡು
ರೋಹಿತ್ ಔಟ್ ಆಗುತ್ತಿದ್ದಂತೆ ತಂಡದ ಜವಾಬ್ದಾರಿ ಹೊತ್ತ ಆಲ್ರೌಂಡರ್ ರವೀಂದ್ರ ಜಡೇಜಾ ಅರ್ಧ ಶತಕ ಸಿಡಿಸಿ ತಂಡದ ಸ್ಕೋರ್ ಹೆಚ್ಚಿಸಿದ್ರು. ಜೊತೆಗೆ ಕತ್ತಿ ವರಸೆ ತೋರಿಸಿದ್ರು. ಡ್ರೆಸಿಂಗ್ ರೂಮ್ನಲ್ಲಿ ಕೊಹ್ಲಿ ಕೂಡ ಇದನ್ನ ಸಖತ್ ಎಂಜಾಯ್ ಮಾಡಿದ್ರು. ‘
ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ 497/9 ಡಿಕ್ಲೇರ್
ಕೊನೆಯಲ್ಲಿ ವೃದ್ದಿಮಾನ್ ಸಾಹ 24, ಆರ್.ಅಶ್ವಿನ್ 14, ಉಮೇಶ್ ಯಾದವ್ 31, ನದೀಮ್ ಅಜೇಯ 1, ಮೊಹ್ಮದ್ ಶಮಿ ಅಜೇಯ 10 ರನ್ ಗಳಿಸಿದ್ದಾಗ ಕ್ಯಾಪ್ಟನ್ ಕೊಹ್ಲಿ ಡಿಕ್ಲೇರ್ ಘೋಷಿಸಿದ್ರು. ಇದರೊಂದಿಗೆ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 9 ವಿಕೆಟ್ ನಷ್ಟಕ್ಕೆ 497 ರನ್ಗೆ ಟೀಮ್ ಇಂಡಿಯಾ ಡಿಕ್ಲೇರ್ ಮಾಡಿಕೊಂಡಿತು.
ದಿನದಾಟದ ಅಂತ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಡುಪ್ಲೆಸಿಸ್ ಪಡೆ ಆರಂಭಿಕ ಆಘಾತ ಅನುಭವಿಸಿತು. ಓಪನರ್ ಡೀನ್ ಎಲ್ಗಾರ್ ಶಮಿಗೆ ವಿಕೆಟ್ ಒಪ್ಪಿಸಿದ್ರೆ , ಕ್ವಿಂಟಾನ್ ಡಿ’ಕಾಕ್ ಉಮೇಶ್ ಯಾದವ್ಗೆ ಬಲಿಯಾದ್ರು. ಮಂಧ ಬೆಳಕಿನ ಕಾರಣ ಪಂದ್ಯವನ್ನ ಮೂರನೇ ದಿನಕ್ಕೆ ಮುಂದೂಡಲಾಯಿತು. ಸೌತ್ ಆಫ್ರಿಕಾ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟ್ಕಕೆ 9 ರನ್ಗಳಿಸಿ ಸಂಕಷ್ಟದಲ್ಲಿ ಸಿಲುಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ