ಚೊಚ್ಚಲ ದ್ವಿಶತಕ ಸಿಡಿಸಿದ ರೋಹಿತ್ ಶರ್ಮಾ

ರಾಂಚಿ: ಟೀಮ್ ಇಂಡಿಯಾ ಹಿಟ್ಮ್ಯಾನ್ ರೋಹಿತ್ ಶರ್ಮಾ ಅಂದುಕೊಂಡಿದ್ದನ್ನ ಕೊನೆಗೂ ಸಾಧಿಸಿ ತೋರಿಸಿದ್ದಾರೆ. ಧೋನಿ ತವರೂರು ರಾಂಚಿಯಲ್ಲಿ ನಿನ್ನೆ ರೋಹಿತ್ ಭರಾಟೆ ಜೋರಾಗಿತ್ತು.
ಮೊನ್ನೆ ಹರಿಣಗಳ ವಿರುದ್ಧದ ವೈಜಾಗ್ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಅವಕಾಶದಿಂದ ವಂಚಿತನಾಗಿದ್ರು. ವೈಜಾಗ್ ಅಂಗಳದಲ್ಲಿ ಕೈ ಜಾರಿದ್ದ ದ್ವಿಶತಕವನ್ನ ರೋಹಿತ್ ರಾಂಚಿ ಅಂಗಳದಲ್ಲಿ ಸಿಡಿಸಿ ತಮ್ಮ ಕನಸನ್ನ ನಸನು ಮಾಡಿಕೊಂಡ್ರು. ಬನ್ನಿ ಹಾಗಾದ್ರೆ ರೋಹಿತ್ ಬ್ಯಾಟಿಂಗ್ ವೈಭವ ಹೇಗಿತ್ತು ಅನ್ನೋದನ್ನ ತೋರಿಸ್ತೀವಿ ನೋಡಿ.
ಮೊದಲ ದಿನ ತಾಳ್ಮೆ ಮತ್ತು ಚಾಣಾಕ್ಷತನದಿಂದ ಶತಕ ಸಿಡಿಸಿ ಅಬ್ಬರಿಸಿದ್ದ ರೋಹಿತ್ ದ್ವಿಶತಕ ಸಿಡಿಸೋದಕ್ಕೆ ಕ್ರೀಸ್ಗೆ ನೆಲ ಕಚ್ಚಿ ನಿಂತಿದ್ರು. ಎರಡನೇ ದಿನದಾಟದ ಪಂದ್ಯದ್ಲಲೂ ಅಬ್ಬರಿಸಿದ್ರು. ರಹಾನೆ ಜೊತೆ ಇನ್ನಿಂಗ್ಸ್ ಮುಂದುವರೆಸಿದ ರೋಹಿತ್ ಆರಂಭದಲ್ಲೆ ಹರಿಣಗಳನ್ನ ಚೆಂಡಾಡಿದ್ರು.
ರಹಾನೆ ಜೊತೆ ರೋಹಿತ್ ದಾಖಲೆ ಜೊತೆಯಾಟ
ರಹಾನೆ ಜೊತೆ ಮೊದಲೆರಡು ದಿನ crucial ಇನ್ನಿಂಗ್ಸ್ ಕಟ್ಟಿದ ರೋಹಿತ್ ದಾಖಲೆಯ ಜೊತೆಯಾಟ ನೀಡಿದ್ರು. ನಾಲ್ಕನೆ ವಿಕೆಟ್ಗೆ 180 ರನ್ಗಳ ಜೊತೆಯಾಟ ನೀಡುವ ಮೂಲಕ ಸೌತ್ ಆಫ್ರಿಕಾ ವಿರುದ್ಧ ಅತಿ ಹೆಚ್ಚು ಜೊತೆಯಾಟ ನೀಡಿದ ಜೋಡಿ ಎಂಬ ಗೌರವಕ್ಕೆ ಪಾತ್ರವಾಯಿತು.
199 ಎಸೆತದಲ್ಲಿ 150 ರನ್ ಸಿಡಿಸಿದ್ರು. ಇದರೊಂದಿಗೆ ಒಂದೇ ಸರಣಿಯಲ್ಲಿ 150ಕ್ಕು ಹೆಚ್ಚು ರನ್ ಸಿಡಿಸಿದ ತಂಡದ ಮೊದಲ ಭಾರತೀಯ ಆಟಗಾರ ಎಂಬ ರೋಹಿತ್ ಪಾತ್ರರಾದ್ರು.
ಚೊಚ್ಚಲ ದ್ವಿಶತಕ ಸಿಡಿಸಿದ ರೋಹಿತ್ ಶರ್ಮಾ
ಬೌಂಡರಿಗಳ ಸುರಿಮಳೆಗೈದ ಡ್ಯಾಶಿಂಗ್ ಓಪನರ್ ದ್ವಿ ಶತಕ ಸಿಡಿಸಲು ಭೋಜನ ವಿರಾಮದವರೆಗೂ ಕಾಯಬೇಕಾಯಿತು. ನಂತರ ಲುಂಗ ಗಿಡಿ ಅವರ ಮೊದಲ ಎಸೆತವನ್ನ ಸಿಕ್ಸರ್ಗೆ ಅಟ್ಟು ಮೂಲಕ ರೋಹಿತ್ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ರು. ಇದರೊಂಡಿದಿಗೆ ರೊಹಿತ್ ಚೊಚ್ಚಲ ದ್ವಿ ಶತಕ ಸಿಡಿಸಿದ ಸಾಧನೆ ಮಾಡಿದ್ರು.
ದ್ವಿಶತಕ ಸಿಡಿಸಿದ ರೋಹಿತ್ ಶರ್ಮಾ
255 ಎಸೆತ ಎದುರಿಸಿದ ರೋಹಿತ್ ಶರ್ಮಾ ಒಟ್ಟು 212 ರನ್ ಕೆಲ ಹಾಕಿದ್ರು. ಇದರಲ್ಲಿ 28 ಬೌಂಡರಿ ಹಾಗೂ 6 ಸಿಕ್ಸರ್ ಒಳಗೊಂಡಿತ್ತು.
ಡಾನ್ ಬ್ರಾಡ್ಮನ್ ಅವರ 71 ವರ್ಷದ ಪುಡಿಗಟ್ಟಿದ ಹಿಟ್ಮ್ಯಾನ್
ದ್ವಿಶತಕ ಸಿಡಿಸುವ ಮೂಲಕ ರೋಹಿತ್ 71 ವರ್ಷದ ಹಳೆ ದಾಖಲೆಯನ್ನ ಅಳಿಸಿಹಾಕಿದ್ದಾರೆ. ಕ್ರಿಕೆಟ್ ಲೆಜೆಂಡ್ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ತವರಿನಲ್ಲಿ ಟೆಸ್ಟ್ ಸರಣಿ ಆಡುವಾಗ 98.22 ಎವರೇಜ್ ಹೊಂದಿದ್ರು. ಇದೀಗ ಹಿಟ್ಮ್ಯಾನ್ ರೋಹಿತ್ 99.84 ಎವರೇಜ್ ಪಡೆದು ಬ್ರಾಡ್ಮನ್ ದಾಖಲೆಯನ್ನ ಅಳಿಸಿ ಹಾಕಿದ್ದಾರೆ.
ಎಲೈಟ್ ಕ್ಲಬ್ ಸೇರಿದ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಕ್ರಿಕೆಟ್ ದೇವರು ಸಚಿನ್ ಅವರ ಎಲೈಟ್ ಕ್ಲಬ್ ಸೇರಿದ್ದಾರೆ. ವೈಟ್ ಜೆರ್ಸಿಯಲ್ಲಿ ದ್ವಿಶತಕ ಸಿಡಿಸುವ ಮೂಲಕ ಏಕದಿನ ಮತ್ತು ಟೆಸ್ಟ್ನಲ್ಲಿ ದ್ವಿಶತಕ ಸಿಡಿಸಿದ ವಿಶ್ವ ಕ್ರಿಕೆಟ್ನ ನಾಲ್ಕನೆ ಬ್ಯಾಟ್ಸ್ಮನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್, ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಮತ್ತು ಕೆರೆಬಿಯನ್ ಕಿಂಗ್ ಕ್ರಿಸ್ ಗೇಲ್ ಈ ಸಾಧನೆ ಮಾಡಿದ್ದಾರೆ.
ಒಟ್ಟು 212 ರನ್ ಕಲೆ ಹಾಕಿದ ಹಿಟ್ ಮ್ಯಾನ್ ರೋಹಿತ್ ಒಂದೇ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ತಂಡದ ಐದನೇ ಬ್ಯಾಟ್ಸ್ಮನ್ ಎನಿಸಿದ್ರು. ರೋಹಿತ್ ಮೂರು ಟೆಸ್ಟ್ ಪಂದ್ಯಗಳಿಂದ ಒಟ್ಟು 568 ರನ್ ಕಲೆ ಹಾಕಿದ್ದು ಸರಣಿಯಲ್ಲಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ್ದಾರೆ.
ಒಟ್ಟಾರೆ ಕಮ್ಬ್ಯಾಕ್ ಮಾಡಿದ ಟೆಸ್ಟ್ ಸರಣಿಯಲ್ಲಿ ವಿಶ್ವ ದಾಖಲೆಗಳನ್ನ ಬರೆಯುವ ಜೊತೆಗೆ ರನ್ ಮಳೆ ಸುರಿಸಿ ಸರಣಿಯನ್ನ ಅವಿಸ್ಮರಣಿಯವಾಗಿರಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ