ರೋಹಿತ್ ಶರ್ಮಾ ಶತಕ : ಭಾರತಕ್ಕೆ ದಿನದ ಗೌರವ

ರಾಂಚಿ: ಹರಿಣಗಳ ವಿರುದ್ದ ಟೀಮ್ ಇಂಡಿಯಾ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಪಂದ್ಯದಲ್ಲಿ ದಿನದ ಗೌರವ ಸಂಪಾದಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಕನ್ನಡಿಗ ಮಯಾಂಕ್ ಅಗರ್‍ವಾಲ್, ಚೇತೇಶ್ವರ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ನಂತರ ಜೊತೆಯಾಸ ಓಪನರ್ ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಈ ಜೋಡಿ ಬರೋಬ್ಬರಿ 166 ರನ್‍ಗಳ ಜೊತೆಯಾಟ ನೀಡಿ ತಂಡವನ್ನ ಆಪತ್ತಿನಿಂದ ಕಾಪಾಡಿದ್ರು. ಬೌಂಡರಿಮ ಸಿಕ್ಸರ್‍ಗಳ ಸುರಿಮಳೆಗೈದ ರೋಹಿತ್ ಶರ್ಮಾ 130 ಎಸೆರದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ರು. ಇದರೊಂದಿಗೆ ರೋಹಿತ್ ಟೆಸ್ಟ ನಲ್ಲಿ ಆರನೇ ಶತಕ ಸಿಡಿಸಿದ ಸಾಧನೆ ಮಾಡಿದ್ರು. ಅಜಿಂಕ್ಯ ರಹಾನೆ ಅಜೇಯ 83 ರನ್ ಕಲೆ ಹಾಕಿದ್ರು ದಿನದಾಟದ ಅಂತ್ಯದಲ್ಲಿ ಮಳೆ ಸುರಿದಿದ್ದರಿಂದ ಪಂದ್ಯವನ್ನ ಮಂದೂಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ