ಇನ್‍ಸ್ಟ್ರಾಗ್ರಾಮ್ ಜಾಲತಾಣದಲ್ಲಿ ನಕಲಿ ಖಾತೆ-ಸ್ನೇಹಿತೆಗೆ ಕಿರುಕುಳ ನೀಡುತ್ತಿದ್ದ ಆರೋಪಿಯ ಬಂದನ

 

ಬೆಂಗಳೂರು, ಅ.18-ಇನ್‍ಸ್ಟ್ರಾಗ್ರಾಮ್ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಸ್ನೇಹಿತೆಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಬೆಂಗಳೂರು ನಗರ ಸೈಬರ್ ಕ್ರೈಂ ಪೆÇಲೀಸರು ಬಂಧಿಸಿದ್ದಾರೆ.

ಮೂಲತಃ ಉತ್ತರ ಕನ್ನಡದ ಹೊನ್ನಾವರ ತಾಲ್ಲೂಕಿನ ಕೊಂಡಾಕುಳಿ  ಸೆಲ್‍ಕೋಡ್ ಗ್ರಾಮದ,  ಹಾಲಿ ಬೆಂಗಳೂರಿನ ಬೆಳ್ಳಂದೂರಿನಲ್ಲಿ ವಾಸವಿದ್ದ ನಿತಿನ್ ಆಚಾರಿ(25) ಬಂಧಿತ ಆರೋಪಿಯಾಗಿದ್ದಾನೆ.

ಆರೋಪಿ ಈ ಹಿಂದೆ ಸಾಫ್ಟ್‍ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆಗ ಸಹೋದ್ಯೋಗಿಯೊಬ್ಬರ ಪರಿಚಯವಾಗಿ ಸ್ನೇಹವಾಗಿತ್ತು. ನಂತರ ವೈಯಕ್ತಿಕ ಕಾರಣಗಳಿಂದ ಬೇರೆ ಕಂಪನಿಗೆ ಸೇರಿಕೊಂಡಿದ್ದ .

ಆಕೆ ಬೇರೆಯವರೊಂದಿಗೆ ಇರುವುದನ್ನು ನೋಡಿದ್ದ ಆರೋಪಿ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಬೇರೆ ವ್ಯಕ್ತಿ ಹೆಸರಿನಲ್ಲಿ ಇ-ಮೇಲ್ ಖಾತೆ ತೆರೆದು ಹಂತ ಹಂತವಾಗಿ ಹೆಸರನ್ನೂ ಕೂಡ ಬದಲಾಯಿಸಿಕೊಂಡು ಅಂತಿಮವಾಗಿ ಕೂಲ್ ಗೈ 097 ಎಂಬ ಹೆಸರಿನಲ್ಲಿ ಚಾಟ್ ಮಾಡುತ್ತಿದ್ದ.

ಇನ್‍ಸ್ಟ್ರಾಗ್ರಾಮ್‍ನಲ್ಲಿ ಖಾತೆ ತೆರೆದು ಸ್ನೇಹಿತೆಯ ಫೆÇೀಟೋವನ್ನು ಡೌನ್‍ಲೋಡ್ ಮಾಡಿಕೊಂಡು ಅನ್ಯ ವ್ಯಕ್ತಿಗಳ ಜೊತೆ  ಈಕೆ ಇರುವುದನ್ನು ಚಿತ್ರದ ಜೊತೆಗೆ ಬರಹಗಳನ್ನು ಪೆÇೀಸ್ಟ್ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದ.

ಇದರಿಂದ ನೊಂದಿದ್ದ ಯುವತಿ ಕಳೆದ ಮೇ ನಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ಆತನ ಮೊಬೈಲ್ ವಾಟ್ಸಾಪ್ ಆಧರಿಸಿ ತನಿಖೆ ಕೈಗೊಂಡು ಕೊನೆಗೂ ಸೈಬರ್ ಕ್ರೈಂ ಪೆÇಲೀಸರ ನೆರವಿನೊಂದಿಗೆ ಸ್ಥಳೀಯ ಪೆÇಲೀಸರು ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ