ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ದಾಳಿಗೆ ಉಗ್ರರ ಸಂಚು; ಹೈ ಅಲರ್ಟ್

ಶ್ರೀನಗರ: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ ನಡೆಸಲು ಯೋಜಿಸುತ್ತಿರುವ ಭಯೋತ್ಪಾದಕರ “ಇತ್ತೀಚಿನ ತಂತ್ರ” ದ ಬಗ್ಗೆ ಗುಪ್ತಚರ ಸಂಸ್ಥೆಗಳು ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸರಿಗೆ ಎಚ್ಚರಿಕೆ ನೀಡಿವೆ. ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ವಾಹನಗಳ ಸಂಚಾರದ ಬಗ್ಗೆ ಕಟ್ಟುನಿಟ್ಟಿನ ಜಾಗರೂಕತೆ ವಹಿಸಿವೆ.

ಸುದ್ದಿ ಸಂಸ್ಥೆ ಎಎನ್ಐ ಇನ್ಪುಟ್ ಪ್ರಕಾರ, ಭಯೋತ್ಪಾದಕರು ಭದ್ರತಾ ಪಡೆಗಳನ್ನು ಗುರಿಯಾಗಿಸಲು ಕಾರ್ ಬಾಂಬ್‌ಗಳನ್ನು ಬಳಸಬಹುದು. “ಭದ್ರತಾ ಪಡೆಗಳನ್ನು ಗುರಿಯಾಗಿಸುವ ಭಯೋತ್ಪಾದಕರ ಇತ್ತೀಚಿನ ತಂತ್ರವೆಂದರೆ ಕಾರ್ ಬಾಂಬ್ ಮತ್ತು ಐಇಡಿ. ಪುಲ್ವಾಮಾ ಭಯೋತ್ಪಾದಕ ದಾಳಿಯ ಮಾರ್ಗಗಳಲ್ಲಿ ದಾಳಿ ನಡೆಸಲು ಸ್ಥಳೀಯ ಪರಿಣತರ ಸಹಾಯ ಪಡೆಯಬಹುದು” ಎಂಬ ಮಾಹಿತಿ ಲಭ್ಯವಾಗಿದೆ.

ಏಜೆನ್ಸಿಗಳ ಪ್ರಕಾರ, ಶ್ರೀನಗರವನ್ನು ಜಮ್ಮುವಿನೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ (ಎನ್ಎಚ್)ಯಲ್ಲಿ ದಾಳಿಯ ಯೋಜನೆಗೆ ಸಂಬಂಧಿಸಿದಂತೆ ಅನೇಕ ಮಾಹಿತಿಗಳು ಬಂದಿವೆ. ಪಾಕಿಸ್ತಾನದ ಬೆಂಬಲದೊಂದಿಗೆ ಭಯೋತ್ಪಾದಕ ಗುಂಪುಗಳು ರಾಷ್ಟ್ರೀಯ ಹೆದ್ದಾರಿಯ ಮೇಲೆ ದಾಳಿ ನಡೆಸಲು ಯೋಜಿಸುವ ಕೆಲಸವನ್ನು ಲಷ್ಕರ್-ಎ-ತೈಬಾ (ಎಲ್‌ಇಟಿ) ಗೆ ನೀಡಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ