ಡೀಸೆಲ್ ಬೆಲೆ, ಟೋಲ್ ಸಂಗ್ರಹದಲ್ಲಿ ಹೆಚ್ಚಳ

ಬೆಂಗಳೂರು, ಅ.7- ಏರುತ್ತಿರುವ ಡೀಸೆಲ್ ಬೆಲೆ, ಟೋಲ್ ಸಂಗ್ರಹದಲ್ಲಿ ಹೆಚ್ಚಳ, ಸಿಗದ ಬಾಡಿಗೆಯಿಂದ ಶೇ.60ರಷ್ಟು ಲಾರಿಗಳು ನಿಂತಲ್ಲೇ ನಿಂತಿವೆ. ಲಾರಿ ಮಾಲೀಕರಿಗೆ, ಚಾಲಕರಿಗೆ ದಸರಾ ಸಂಭ್ರಮ ಇಲ್ಲ. ಕಳೆದ ಎರಡು ತಿಂಗಳಿನಿಂದಲೂ ಸಂಕಷ್ಟ ಅನುಭವಿಸುತ್ತಿದ್ದಾರೆ.
ಸಾಲ ಮಾಡಿ ಲಾರಿಯನ್ನು ಖರೀದಿಸಿದವರು ಸಾಲ ಕಟ್ಟಲಾರದೆ ಫಜೀತಿ ಅನುಭವಿಸುತ್ತಿದ್ದಾರೆ.ಟಿವಿಎಸ್ ಕಂಪೆನಿ, ಶ್ರೀರಾಮ ಫೈನಾನ್ಸ್‍ನವರ ಕಿರುಕುಳ ಹೆಚ್ಚಾಗಿದೆ. ತಿಂಗಳಿಗೆ ಕನಿಷ್ಟ 40 ಸಾವಿರ ಫೈನಾನ್ಸ್‍ಗೇ ಕಟ್ಟಬೇಕು. ಇತ್ತ ಬಾಡಿಗೆ ಸಿಗುತ್ತಿಲ್ಲ. ಬಾಡಿಗೆ ಸಿಕ್ಕರೂ ವರ್ಕೌಟ್ ಆಗುತ್ತಿಲ್ಲ. ಡೀಸೆಲ್ ಬೆಲೆ ದಿನೇ ದಿನೇ ಏರುಮುಖವಾಗುತ್ತಿದೆ.ಮುಂಬೈಗೆ ಒಂದು ಟ್ರಿಪ್ ಹೋಗಿಬರಬೇಕಾದರೆ ಸಾವಿರಾರು ರೂಪಾಯಿ ಟೋಲ್ ಕಟ್ಟಬೇಕಾಗಿದೆ. ಇಷ್ಟೆಲ್ಲ ಕಟ್ಟಿ ನಮಗೆ ಕನಿಷ್ಟ ಸಾವಿರ, ಎರಡು ಸಾವಿರ ರೂಪಾಯಿಗಳು ಉಳಿಯುವುದಿಲ್ಲ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಗಾಡಿ ಓಡಿಸುವುದಾದರೂ ಏಕೆ ಎಂದು ಮನೆ ಮುಂದೆ ಗಾಡಿ ನಿಲ್ಲಿಸಿಕೊಂಡಿದ್ದೇವೆ ಎಂದು ಲಾರಿ ಮಾಲೀಕರು ಹಾಗೂ ಚಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಹೇಳಿದರು.
ಈ ವರ್ಷ ನಮ್ಮ ಪಾಲಿಗೆ ದಸರಾ, ದೀಪಾವಳಿ ಯಾವುದೂ ಇಲ್ಲದಂತಾಗಿದೆ.ಸೆಂಟ್ರಲ್ ಹೈವೆ ಟೋಲ್ ಒಂದೆಡೆಯಾದರೆ ಸ್ಟೇಟ್ ಹೈವೆ ಟೋಲ್ ಮತ್ತೊಂದೆಡೆ.ಡೀಸೆಲ್ ಬೆಲೆ ಹೆಚ್ಚಳ ಒಂದೆಡೆಯಾದರೆ ತೆರಿಗೆ ಮತ್ತೊಂದೆಡೆ.ಇನ್ನು ಪೆÇಲೀಸರ ಕಿರುಕುಳ ಬೇರೆ.ಇವೆಲ್ಲವನ್ನೂ ಸಹಿಸಿಕೊಂಡು ದುಡಿಮೆ ಮಾಡುವುದು ಹೇಗೆ?ನಮ್ಮ ಲಾರಿ ಉದ್ಯಮ ಸಂಪೂರ್ಣ ಕುಸಿದು ಹೋಗಿದೆ.ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಯಾವ ಮನವಿಯನ್ನೂ ಪರಿಗಣಿಸಿಲ್ಲ.ಇದೇ 15ರಂದು ಒಕ್ಕೂಟಗಳ ಸ`É ಕರೆದಿದ್ದು, ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 6 ಲಕ್ಷ ಲಾರಿಗಳಿವೆ. ಇದನ್ನು ಅವಲಂಬಿತ 24 ಲಕ್ಷ ಜನರಿದ್ದಾರೆ. ಉದ್ಯೋಗ ಕುಸಿದು ಬಿದ್ದ ಪರಿಣಾಮ ಲಕ್ಷಾಂತರ ಜನ ಅತಂತ್ರರಾಗಿದ್ದಾರೆ.ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ಷಣ್ಮುಗಪ್ಪ ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ