ದಸರಾ ಕ್ರೀಡೆಯಲ್ಲಿ ಕೊಳ್ಳುರ್ ವಿದ್ಯಾರ್ಥಿನಿ ರಾಜ್ಯಕ್ಕೆ ದ್ವಿತೀಯ

ಬೀದರ್: ರಾಜ್ಯಮಟ್ಟದ ದಸರಾ ಕ್ರೀಡಾಕೂಟದ ಎತ್ತರ ಜಿಗಿತದಲ್ಲಿ ಉತ್ತಪ ಪ್ರದರ್ಶನ ನೀಡುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಔರಾದ್ ತಾಲೂಕಿನ ಕೊಳ್ಳುರ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ಸಾವಿತ್ರಿಬಾಯಿ ರಘುನಾಥ ಪಡೆದಿದ್ದಾರೆ. 9ನೇ ತರಗತಿಯ ಸಾವಿತ್ರಿಬಾಯಿ ಚಿತ್ರಕಲೆ ಶಿಕ್ಷಕ ವಿಠಲ ಪಕಾಲಿ ಮಾರ್ಗದರ್ಶನದಲ್ಲಿ ಸ್ಪರ್ಧೆಯಲ್ಲಿ ಭಾವಹಿಸಿ ಉತ್ತಮ ಪ್ರದರ್ಶನ ಮಾಡಿದ್ದಾರೆ.

ವಿದ್ಯಾರ್ಥಿನಿ ಸಾಧನೆಗೆ ಯುವ ಮುಖಂಡ ಸುಧಾಕಾರ ಕೊಳ್ಳುರ್, ಪ್ರಮುಖರಾದ ವಿಜಯಕುಮಾರ ಮಜಗೆ, ಸೂರ್ಯಕಾಂತ ಮಜಗೆ, ರಾಜಕುಮಾರ ದೆಗಲವಾಡೆ, ವಿಜಯಕುಮಾರ, ದತ್ತಾತ್ರಿ ಬಾಪುರೆ, ಆಕಾಶ, ಫಯಜ್ ಮುಲ್ಲಾ, ಪ್ರಕಾಶ, ಸಂದೀಪ ಪಾಟೀಲ್, ಬಸವರಾಜ ಕೌಡಗಾಂವೆ, ರಾಜಕುಮಾರ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ