ತಮ್ಮ ಮೊಬೈಲ್‍ಗಳ ಬಗ್ಗೆ ತಾವೇ ಜಾಗೃತರಾಗುವುದು ಅತಿಮುಖ್ಯ-ಪೆÇಲೀಸ್ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು,ಅ.3- ಸಾರ್ವಜನಿಕರು ದುಬಾರಿ ಹಣದಿಂದ ಖರೀದಿಸುವ ಮೊಬೈಲ್‍ಗಳನ್ನು ತಾವೇ ಜೋಪಾನ ಮಾಡಿಕೊಳ್ಳುವುದರ ಮೂಲಕ ಮೊಬೈಲ್ ಕಳ್ಳತನ ಪ್ರಕರಣಗಳನ್ನು ಸಾಧ್ಯವಾದಷ್ಟು ತಪ್ಪಿಸಬಹುದಾಗಿದೆ ಎಂದು ನಗರ  ಪೆÇಲೀಸ್ ಆಯುಕ್ತ ಭಾಸ್ಕರ್ ರಾವ್ ಇಂದಿಲ್ಲಿ ಕಿವಿಮಾತು ಹೇಳಿದರು.

ಕೇಂದ್ರ ವಿಭಾಗದ ಪೆÇಲೀಸರು ಪತ್ತೆಹಚ್ಚಿರುವ ಮೊಬೈಲ್ ಕಳವು-ಸುಲಿಗೆ ಜಾಲದ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನಗರದಲ್ಲಿ ಪ್ರತಿನಿತ್ಯ ಮೊಬೈಲ್ ಸುಲಿಗೆ ಹಾಗೂ ಕಳ್ಳತನದ ದೂರುಗಳು ದಾಖಲಾಗುತ್ತಿವೆ. ತಮ್ಮ, ತಮ್ಮ ಮೊಬೈಲ್‍ಗಳ ಬಗ್ಗೆ ತಾವೇ ಜಾಗೃತರಾಗುವುದು ಅತಿಮುಖ್ಯ ಎಂದರು.

ಕನ್ನಡಕಗಳನ್ನು ಜೋಪಾನ ಮಾಡಿಕೊಳ್ಳಲು ಚೈನ್‍ಗಳನ್ನು ಅಳವಡಿಸಿಕೊಳ್ಳುತ್ತಾರೆ. ಅದರಂತೆ ಮೊಬೈಲ್‍ಗಳನ್ನು ಸಹ ಕಳವಾಗದಂತೆ  ಕಾಪಾಡಿಕೊಳ್ಳಲು ತಾವೇ ಜಾಗೃತಿ ವಹಿಸಬೇಕೆಂದು ಕಿವಿಮಾತು ಹೇಳಿದರು.

ಒಂದು ವೇಳೆ ನಿಮ್ಮ ಮೊಬೈಲ್ ಕಳ್ಳತನವಾಗಿ ಅವುಗಳ ಸಿಮ್‍ಗಳು ದುರ್ಬಳಕೆಯಾದಲ್ಲಿ ಯಾರ ಹೆಸರಿನಲ್ಲಿ ಸಿಮ್ ಖರೀದಿಯಾಗಿರುತ್ತದೆಯೋ   ಅವರೇ ಹೊಣೆಗಾರರಾಗುತ್ತಾರೆ.ಆದಕಾರಣ ತಮ್ಮ ಮೊಬೈಲ್‍ಗಳ ಬಗ್ಗೆ ನಿಗಾವಹಿಸುವುದು ಮುಖ್ಯ ಎಂದರು.

ಸದ್ಯದಲ್ಲೇ ಮೊಬೈಲ್ ಮಾರಾಟಗಾರರ ಸಂಘದ ಜೊತೆ ಮಾತುಕತೆ ನಡೆಸಿ ಮೊಬೈಲ್ ಕಳ್ಳತನವನ್ನು ಯಾವ ರೀತಿ ತಡೆಗಟ್ಟಬಹುದು ಎಂಬುದರ ಬಗ್ಗೆ ಚರ್ಚಿಸಲಾಗುವುದು ಎಂದರು.

ವೋಲಾ ಕ್ಯಾಬ್ ಚಾಲಕರ ಬಗ್ಗೆಯೂ ನಿಗಾವಹಿಸಲಾಗಿದೆ.ಅವರುಗಳ ಪೂರ್ಣ ವಿವರಗಳನ್ನು ಕ್ಯಾಬ್ ಸಂಸ್ಥೆಗಳಿಂದ ಪಡೆದುಕೊಳ್ಳಲಾಗುತ್ತಿದೆ. ಪ್ರಯಾಣಿಕರು ಹೇಳುವ ಜಾಗಕ್ಕೆ ಕರೆದುಕೊಂಡು ಹೋಗದೆ ಬೇರೆ ಮಾರ್ಗದಲ್ಲಿ ಹೋಗುವುದು ಅಥವಾ ಅವರಿಗೆ ಕಿರುಕುಳ ನೀಡುವುದು, ಇಲ್ಲವೇ ದುಬಾರಿ ಹಣ ಕೇಳುವುದು, ದುವರ್ತನೆ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಚಾಲಕರಿಗೆ ಇದೇ ವೇಳೆ  ಪೆÇಲೀಸ್ ಆಯುಕ್ತರು ಎಚ್ಚರಿಕೆ ನೀಡಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ