ಕದ್ದ ಕಾರುಗಳಿಗೆ ಅಪಘಾತವಾದ ಕಾರುಗಳ ಚಾರ್ಸಿ ನಂಬರುಗಳ ಟ್ಯಾಂಪರಿಂಗ್-ಪೊಲೀಸರಿಂದ ಮೂವರು ಆರೋಪಿಗಳ ಬಂಧನ

ಬೆಂಗಳೂರು, ಅ.2- ಅಪಘಾತವಾದ ಕಾರುಗಳ ಇಂಜಿನ್ ಮತ್ತು ಚಾರ್ಸಿ ನಂಬರ್‍ಗಳನ್ನು ಕಳವು ಕಾರುಗಳಿಗೆ ಟ್ಯಾಂಪರಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಪತ್ತೆಹಚ್ಚಿರುವ ಬಾಗಲಗುಂಟೆ ಪೆÇಲೀಸರು ಮೂವರು ಆರೋಪಿಗಳನ್ನು ಬಂಧಿಸಿ 40 ಲಕ್ಷ ರೂ. ಮೌಲ್ಯದ 9 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿನಿಮಿಯ ರೀತಿಯಲ್ಲಿ ದಂಧೆ ಮಾಡುತ್ತಿದ್ದ ಈ ಆರೋಪಿಗಳು ಕೊನೆಗೂ ಪೆÇಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.ಕಳವು ಮಾಡಿ ಮಾರಾಟ ಮಾಡಿ ಬಂದ ಹಣವನ್ನು ಆರೋಪಿಗಳು ಮದ್ಯಪಾನ ಮತ್ತು ವೇಶ್ಯವಾಟಿಕೆಯಂತಹ ದುಶ್ಚಟಗಳಿಗೆ ಬಳಸುತ್ತಿದದ್ದು ಅಚ್ಚರಿಕೆ ಕಾರಣವಾಗಿದೆ.
ಪ್ರಕರಣ ಹಿನ್ನೆಲೆ:
ಬಾಗಲಗುಂಟೆ ಪೆÇಲೀಸ್ ಠಾಣೆ ವ್ಯಾಪ್ತಿಯ ವಿನಾಯಕನಗರದ ರವಿಕುಮಾರ್ ಅವರ ಮನೆ ಬಳಿ ನಿಲ್ಲಿಸಿದ್ದ ಮಾರುತಿ 800 ಕಾರು ಆ.29ರ ರಾತ್ರಿ 10.30ರ ಸುಮಾರಿನಲ್ಲಿ ಕಳ್ಳತನವಾಗಿದೆ ಎಂದು ದೂರು ನೀಡಲಾಗಿತ್ತು.
ಪ್ರಕರಣದ ಬೆನ್ನುಹತ್ತಿದ ಪೆÇಲೀಸರಿಗೆ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆ ಮಣಪಲ್ಲಿಯ ದಿಲೀಶ್ (38), ವೈನಾಡು ಜಿಲ್ಲೆಯ ಸುಲ್ತಾನ್‍ಬಥೇರಿಯ ಕೊಲ್ಲಗಪ್ಪರದ ನಿವಾಸಿ ಶಾಜಿಕೇಶವನ್ ಅಲಿಯಾಸ್ ಶಾಜಿ (47) ಮತ್ತು ಕಳವು ಕಾರುಗಳನ್ನು ಖರೀದಿಸುತ್ತಿದ್ದ ಮಂಗಳೂರಿನ ಕೋಯಿಕೋಡ್‍ನ ಆಲಿಅಹಮ್ಮದ್ (39) ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕುತೂಹಲಕಾರಿ ಮಾಹಿತಿಗಳು ಹೊರ ಬಂದಿವೆ. ಆಲಿ ಅಹಮ್ಮದ್ ಮಂಗಳೂರಿನ ಸೂತ್ಕಲ್‍ನಲ್ಲಿ ಕಾರ್ ಗ್ಯಾರೇಜ್ ಇಟ್ಟುಕೊಂಡಿದ್ದಾನೆ.

ತನ್ನ ಗ್ಯಾರೇಜಿಗೆ ರಿಪೇರಿಗಾಗಿ ಬರುವ ಗುಜರಿ ಮತ್ತು ಅಪಘಾತವಾದ ಕಾರುಗಳ ದಾಖಲಾತಿಗಳನ್ನು ಸಂಗ್ರಹಿಸಿಕೊಳ್ಳುತ್ತಿದ್ದ. ಆರೋಪಿಗಳಾದ ದಿಲೀಶ್ ಮತ್ತು ಶಾಜಿಗೆ ತಮ್ಮ ಬಳಿ ಇರುವ ಕಾರುಗಳ ಮಾಡಲ್ ಮತ್ತು ಬಣ್ಣ ತಿಳಿಸಿ ಅದೇ ಮಾದರಿಯ ಕಾರುಗಳನ್ನು ಕಳ್ಳತನ ಮಾಡಲು ಸೂಚಿಸುತ್ತಿದ್ದ.
ಆರೋಪಿಗಳಿಬ್ಬರು ಬೆಂಗಳೂರಿನ ಎಲ್ಲಾ ಕಡೆ ಹಗಲು ವೇಳೆ ಓಡಾಡಿಕೊಂಡು ಅದೇ ಮಾದರಿಯ ಕಾರುಗಳನ್ನು ಗುರುತಿಸಿಕೊಳ್ಳುತ್ತಿದ್ದರು.ರಾತ್ರಿ ವೇಳೆ ಹೋಗಿ ಕೀ ಆಪರೇಟಿಂಗ್ ಪೆÇ್ರೀ ಬಳಸಿ ನಕಲಿ ಕೀ ಮತ್ತು ಚಿಪ್‍ಅನ್ನು ಬಳಸಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದರು.

ಹೆದ್ದಾರಿಯಲ್ಲಿ ಮಂಗಳೂರಿಗೆ ಅವುಗಳನ್ನು ತೆಗೆದುಕೊಂಡು ಹೋದರೆ ಟೋಲ್‍ಗಳ ಸಿಸಿ ಕ್ಯಾಮೆರಾಗಳಲ್ಲಿ ಸಿಕ್ಕಿ ಬೀಳುತ್ತೇವೆ ಎಂಬ ಭಯದಿಂದ ಅಡ್ಡರಸ್ತೆಯಲ್ಲಿ ಪ್ರಯಾಣ ಮಾಡಿ ಆಲಿ ಅಹಮ್ಮದ್‍ನ ಗ್ಯಾರೇಜ್‍ಗೆ ತಲುಪಿಸುತ್ತಿದ್ದರು. ಆತ ಇವರಿಗೆ ಒಂದಿಷ್ಟು ಹಣ ಕೊಟ್ಟು ಕಳುಹಿಸುತ್ತಿದ್ದ.

ನಂತರ ತನ್ನ ಗ್ಯಾರೇಜ್‍ಗೆ ಬಂದಿದ್ದ ಅಪಘಾತ ಅಥವಾ ಉಪಯೋಗಕ್ಕೆ ಬಾರದ ಗುಜರಿ ಕಾರುಗಳ ದಾಖಲಾತಿಗಳನ್ನು ಹೊಂದಿಸಿಕೊಂಡು ಅವುಗಳ ಇಂಜಿನ್ ಮತ್ತು ಚಾರ್ಸಿ ನಂಬರ್‍ಗಳನ್ನು ಕಳವು ಕಾರುಗಳಿಗೆ ಟ್ಯಾಂಪರಿಂಗ್ ಮಾಡಿ ಅಸಲಿ ಕಾರುಗಳೆಂದು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ.

ಕಳವು ಮಾಡುತ್ತಿದ್ದ ಆರೋಪಿಗಳು ತಮಗೆ ಸಿಕ್ಕ ಹಣದಲ್ಲಿ ಮದ್ಯಪಾನ, ವೇಶ್ಯವಾಟಿಕೆಯಂತಹ ಚಟುವಟಿಕೆಗಳಿಗೆ ಬಳಕೆ ಮಾಡಿ ಮೋಜು ಮಾಡುತ್ತಿದ್ದರು.
ಈ ತಂಡದ ಬಂಧನದಿಂದ ಬಾಗಲಗುಂಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ 4, ಮಹಾಲಕ್ಷ್ಮಿಲೇಔಟ್‍ನಲ್ಲಿ 1, ಅನ್ನಪೂರ್ಣೇಶ್ವರಿ ನಗರದಲ್ಲಿ 1 ಸೇರಿ ಒಟ್ಟು 9 ಕಾರು ಕಳವು ಪ್ರಕರಣಗಳು ಪತ್ತೆಯಾಗಿವೆ.

ಯಶವಂತಪುರದ ಎಸಿಪಿ ಎನ್.ಟಿ.ಶ್ರೀನಿವಾಸ್‍ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ವೆಂಕಟೇಗೌಡ, ಪಿಎಸ್‍ಗಳಾದ ಸಿ.ಬಿ.ಶಿವಸ್ವಾಮಿ, ಕುಮಾರ್, ಕೆ.ಎಲ್.ಧನುಷ್‍ಚಂದ್, ಲೋಕೇಶ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ