ಉಪಚುನಾವಣೆ ಘೋಷಣೆ ಹಿನ್ನಲೆ-ಕೂಡಲೇ ನೀತಿ ಸಂಹಿತೆಯನ್ನು ಜಾರಿಗೆ ತರಬೇಕು

ಬೆಂಗಳೂರು,ಸೆ.30- ಉಪಚುನಾವಣೆಗಳಿಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವುದರಿಂದ ಕೂಡಲೇ ನೀತಿ ಸಂಹಿತೆಯನ್ನು ಜಾರಿಗೆ ತರಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

ಕಾಂಗ್ರೆಸ್ ನಿಯೋಗ ಇಂದು ರಾಜ್ಯ ಚುನಾವಣಾ ಮುಖ್ಯಾಧಿಕಾರಿಯನ್ನು ಭೇಟಿ ಮಾಡಿ ದೂರು ನೀಡಿದ್ದು, ಈ ಮೊದಲು ಅ.24ರಂದು ಚುನಾವಣೆ ನಡೆಸಲು ಆಯೋಗ ದಿನಾಂಕ ಘೋಷಣೆ ಮಾಡಿತ್ತು. ಸುಪ್ರೀಂಕೋರ್ಟ್‍ನ ವಿಚಾರಣೆಯಲ್ಲಿ ಚುನಾವಣೆಗೆ ತಡೆ ಸಿಕ್ಕಿದೆ.

ಆನಂತರ ಬದಲಿ ದಿನಾಂಕವನ್ನು ನಿಗದಿ ಮಾಡಿ ಚುನಾವಣೆ ಘೋಷಣೆ ಮಾಡಿರುವುದು ಕೂಡ ಸಾಂವಿಧಾನಿಕ . ಈವರೆಗೂ ಕೇಂದ್ರ ಚುನಾವಣಾ ಆಯೋಗದ ಮೇಲೆ ಸಾರ್ವಜನಿಕರಿಗೆ ಅಪಾರ ನಂಬಿಕೆಯಿತ್ತು. ಆದರೆ ಚುನಾವಣಾ ದಿನಾಂಕವನ್ನು ಬದಲಿಸಿರುವುದನ್ನು ನೋಡಿದರೆ ಆಯೋಗ ತನ್ನ ಸ್ವಾಯತ್ತೆಯನ್ನು ಕಳೆದುಕೊಂಡಿದೆ.
ಕೇಂದ್ರ ಮತ್ತು ಬಿಜೆಪಿಯ ಅಣತಿಯಂತೆ ನಡೆದುಕೊಳ್ಳುತ್ತಿದೆ ಎಂಬ ಅನುಮಾನ ಬಂದಿದೆ. 2ನೇ ಹಂತರದಲ್ಲಿ ಚುನಾವಣೆ ಘೋಷಣೆಯಾಗಿರುವುದರಿಂದ ರಾಜ್ಯ ಸರ್ಕಾರ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಕೂಡಲೇ ಆಯೋಗ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಜಾರಿ ಮಾಡಿ ಬಿಜೆಪಿಯ ಕಾನೂನು ಬಾಹಿರ ಕ್ರಮಗಳಿಗೆ ತಡೆ ಹಾಕಬೇಕೆಂದು ಕಾಂಗ್ರೆಸ್ ದೂರು ನೀಡಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಾಧ್ಯಕ್ಷ ಬಿ.ಎಲ್.ಶಂಕರ್, ಮಾಧ್ಯಮ ವಿಭಾಗದ ಮುಖಂಡರಾದ ವಿ.ಎಸ್.ಉಗ್ರಪ್ಪ ಮತ್ತಿತರರು ಆಯೋಗಕ್ಕೆ ನೀಡಿರುವ ದೂರಿಗೆ ಸಹಿ ಹಾಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ