ಉಪಚುನಾವಣೆಗಳು ಸಮೀಪಿಸುತ್ತಿರುವ ಹಿನ್ನಲೆ-ನಿದ್ದೆಯಿಂದ ಎಚ್ಚರವಾಗುತ್ತಿರುವ ಕಾಂಗ್ರೇಸ್

ಬೆಂಗಳೂರು, ಸೆ.21-ಉಪಚುನಾವಣೆಗಳು ಸಮೀಪಿಸುತ್ತಿ ರುವಂತೆ ಕಾಂಗ್ರೆಸ್ ನಿಧಾನವಾಗಿ ಕುಂಭಕರ್ಣನ ನಿದ್ದೆಯಿಂದ ಎಚ್ಚರವಾಗುತ್ತಿದ್ದು, ಮೊದಲ ಹಂತದಲ್ಲಿ ಹೊಸಕೋಟೆಯಲ್ಲಿಂದು ಸಮಾವೇಶ ನಡೆಸಿದೆ.

ಕಾಂಗ್ರೆಸ್‍ನ 14 ಮಂದಿ, ಜೆಡಿಎಸ್ 3 ಶಾಸಕರು ರಾಜೀನಾಮೆ ನೀಡಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದರು. ಆನಂತರದ ಬೆಳವಣಿಗೆಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ.

ಈ 17 ಕ್ಷೇತ್ರಗಳಿಗೆ ಶೀಘ್ರವೇ ಚುನಾವಣೆ ನಡೆಯಲಿದ್ದು, ಅದರ ತಯಾರಿಗಾಗಿ ಬಿಜೆಪಿ, ಜೆಡಿಎಸ್ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿವೆ. ಆದರೆ ಕಾಂಗ್ರೆಸ್ ಪಾಳಯ ಮಾತ್ರ ಈಗಲೂ ಮೀನಾಮೇಷ ಎಣಿಸುತ್ತಿದೆ.

ಕಾಂಗ್ರೆಸ್‍ನ ಧೋರಣೆ ನೋಡಿದರೆ ಆಡಳಿತಾರೂಢ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ಮುಂದುವರೆಸಿಕೊಂಡು ಹೋಗಲಿ ಎಂಬಂತಿದೆ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಶ್ರಮ ಹಾಕಿ 17ಕ್ಕೆ  ಹದಿನೇಳು ಕ್ಷೇತ್ರಗಳನ್ನು ಉಪಚುನಾವಣೆಯಲ್ಲಿ ಉಳಿಸಿಕೊಂಡಿದ್ದೇ ಆದರೆ ಬಿಜೆಪಿ ಸರ್ಕಾರಕ್ಕೆ ಮತ್ತೆ ಕಂಟಕ ಎದುರಾಗುವ ಸಾಧ್ಯತೆ ಇದೆ.

ಇದರ ಸುಳಿವರಿತು ಬಿಜೆಪಿ ಇನ್ನೊಂದಷ್ಟು ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿ ಸರ್ಕಾರ ಉಳಿಸಿಕೊಳ್ಳುವ ಯೋಜನೆ ರೂಪಿಸಿದೆ. ಆದರೆ ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳೇ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತದಾರರಿಗೆ ಮತ್ತು ಪಕ್ಷಕ್ಕೆ ವಂಚನೆ ಮಾಡಿದವರನ್ನು ಸೋಲಿಸಿದ್ದಾದರೆ  ಮುಂದೆ ಮತ್

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ