ಮಂಕಿ ಕ್ಯಾಪ್ ಧರಿಸಿ ಟಾಂಗಾ ಗಾಡಿಯಲ್ಲಿ ಒಬ್ಬರೇ ಸುತ್ತಾಡಿದ ಜಗ್ಗೇಶ್

ಮೈಸೂರು, ಸೆ.19- ಖ್ಯಾತ ನಟ ಜಗ್ಗೇಶ್ ಅವರು ಮಂಕಿ ಕ್ಯಾಪ್ ಧರಿಸಿ ಜಟಕಾಬಂಡಿ ಏರಿ ನಗರದೆಲ್ಲೆಡೆ ಸುತ್ತಾಡಿ ಸಂಭ್ರಮಿಸಿದರು.

ಸಾರ್ವಜನಿಕರಿಗೆ ಗೊತ್ತಾಗದಿರಲಿ ಎಂದು ಜಗ್ಗೇಶ್ ಮಂಕಿ ಕ್ಯಾಪ್ ಧರಿಸಿ ಟಾಂಗಾ ಗಾಡಿಯಲ್ಲಿ ಒಬ್ಬರೇ ಸುತ್ತಾಡಿದ್ದಾರೆ.

ಕೆ.ಆರ್.ವೃತ್ತದಲ್ಲಿ ಟಾಂಗಾ ಹತ್ತಿದ ಜಗ್ಗೇಶ್ ಅಲ್ಲಿಂದ ಜಯಚಾಮರಾಜೇಂದ್ರ ವೃತ್ತಕ್ಕೆ ಬಂದು ಅರಮನೆ ಸುತ್ತಾ ಸಂಚರಿಸಿ ನಂತರ ಇದೇ ವೃತ್ತದ ಸಮೀಪ ಗಾಡಿಯಿಂದ ಇಳಿದು ಕಾಲ್ನಡಿಗೆಯಲ್ಲಿ ಅಡ್ಡಾಡಿದರು.

ಮಂಕಿ ಕ್ಯಾಪ್ ಧರಿಸಿದ್ದರಿಂದ ಯಾರಿಗೂ ಅವರ ಗುರುತು ಸಿಕ್ಕಿಲ್ಲ. ಇದಾದ ನಂತರ ಫೇಸ್‍ಬುಕ್‍ನಲ್ಲಿ ಈ ಮಾಹಿತಿಯನ್ನು ಅಪ್‍ಲೋಡ್ ಮಾಡಿ ಹಿಂದೆ ನಾನು ರಾಜಣ್ಣನವರ ಚಿತ್ರಗಳನ್ನು ನೋಡಲು ಬರುತ್ತಿದ್ದೆ ಎಂದು ಮೆಲುಕು ಹಾಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ