ಉಪಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ನೂಕು ನುಗ್ಗಲು

ಮೈಸೂರು, ಸೆ.20- ಉಪಮುಖ್ಯಮಂತ್ರಿ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ನೂಕು ನುಗ್ಗಲು ಮಾಡಿದ್ದರಿಂದ ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದ ಪೆÇಲೀಸರು ಮತ್ತು ಬೆಂಗಾವಲು ಪಡೆಯ ನಡುವೆ ಮಾತಿನ ಚಕಮಕಿ ನಡೆದಿದೆ.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೈಸೂರಿನಲ್ಲಿ ಹೊಸ ಸಂಪ್ರದಾಯ ಆರಂಭಗೊಂಡಿದ್ದು, ಸಚಿವರು, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ, ಪಕ್ಷದ ಹಿರಿಯ ನಾಯಕರು ಸೇರಿದಂತೆ ಯಾರೇ ಗಣ್ಯರು  ಆಗಮಿಸಿದರೂ ಟೋಲ್‍ಗೇಟ್ ಬಳಿ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರ ದಂಡು ಸೇರುತ್ತಿದೆ. ಇದರಿಂದಾಗಿ ಜನದಟ್ಟಣೆ ಹೆಚ್ಚಾಗಿ ಸಂಚಾರ ವ್ಯವಸ್ಥೆ ಕೂಡ ಅಸ್ತವ್ಯಸ್ತಗೊಳ್ಳುತ್ತಿದೆ.

ಶುಕ್ರವಾರವಾದ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆಸಲ್ಲಿಸಲು ಉಪ ಮುಖ್ಯಮಂತ್ರಿ ಡಾ.ಅಶ್ವಥನಾರಾಯಣ ಅವರು ಆಗಮಿಸಿದರು.

ಅವರನ್ನು ಹಾರತುರಾಯಿ ಹಾಕಿ ಸ್ವಾಗತಿಸಲು ಜಾನಪದ ಕಲಾ ತಂಡಗಳ ಜತೆಗೆ ಬಿಜೆಪಿ ಕಾರ್ಯಕರ್ತರ ದಂಡು ಸಜ್ಜಾಗಿತ್ತು. ಈ ಹಂತದಲ್ಲಿ ಜನ ಹೆಚ್ಚಾಗಿದ್ದರಿಂದ ಸ್ವಲ್ಪ ಮುಂದೆ ಕಾರು ನಿಲ್ಲಿಸುವಂತೆ ಡಿಸಿಪಿ ಮುತ್ತುರಾಜ್ ಬೆಂಗಾವಲು ಪಡೆಗೆ ಸಲಹೆ ನೀಡಿದರು. ಆದರೆ, ಅದನ್ನು ಕೇಳದೆ ಜನ ಹೆಚ್ಚಿರುವ ಜಾಗದಲ್ಲೇ ಡಿಸಿಎಂ ಕಾರನ್ನು ನಿಲ್ಲಿಸಲಾಗಿದೆ.

ಉಪಮುಖ್ಯಮಂತ್ರಿಯವರಿಗೆ ಸ್ಥಳೀಯ ಪೆÇಲೀಸರು ಮಾನವ ಸರಪಣಿ ನಿರ್ಮಿಸಿ ರಕ್ಷಣೆ ಒದಗಿಸಿದ್ದರು. ಅದನ್ನು ಮೀರಿ ಕೆಲವು ಕಾರ್ಯಕರ್ತರು ಮುನ್ನುಗ್ಗಿ ಹೋಗಿ ಅಶ್ವಥನಾರಾಯಣ ಅವರಿಗೆ ಹಾರ ಹಾಕಿ ಸ್ವಾಗತಿಸಿದರು.

ಆ ರೀತಿ ಮುನ್ನುಗ್ಗಿ ಹೋದ ಮಹೇಶ್ ಎಂಬ ಕಾರ್ಯಕರ್ತನಿಗೆ ಡಿಸಿಪಿ ಎಚ್ಚರಿಕೆ ನೀಡಿದರು. ಕಾರ್ಯಕರ್ತರ ನೂಕುನುಗ್ಗಲು ಹೆಚ್ಚಾದಾಗ ಬೆಂಗಾವಲು ಪಡೆ ಸಿಬ್ಬಂದಿಗಳು ಸ್ಥಳೀಯ ಪೆÇಲೀಸರನ್ನು   ಕೂಡ ಹಿಂದೆ ತಳ್ಳಿದರು ಎಂದು ಹೇಳಲಾಗಿದೆ.

ಇದರಿಂದ ಸಿಟ್ಟಾದ ಹಿರಿಯ ಅಧಿಕಾರಿಗಳು ಇದು ನಮ್ಮ ವ್ಯಾಪ್ತಿಯ ಪ್ರದೇಶ. ಇಲ್ಲಿನ ರಕ್ಷಣೆ ನಮ್ಮ ದು, ನೀವು ಸ್ಥಳೀಯ ಪೆÇಲೀಸರನ್ನೇ ಹಿಂದೆ ತಳ್ಳಿದರೆ ಹೇಗೆ ? ಒಂದು ವೇಳೆ ಹೆಚ್ಚುಕಡಿಮೆಯಾದರೆ ಹೊಣೆಯಾಗಬೇಕಾಗಿರುವುದು ನಾವು ಎಂದು ಬೆಂಗಾವಲು ಪಡೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಜನರನ್ನು ನಿಯಂತ್ರಿಸಲಾಗದೆ ಮುನ್ನುಗ್ಗಲು ಬಿಟ್ಟು ಗೊಂದಲ ಉಂಟಾಗಿದೆ. ಉಪಮುಖ್ಯಮಂತ್ರಿಯವರ ರಕ್ಷಣೆ ನಮ್ಮದು ಎಂದು ಬೆಂಗಾವಲು ಪಡೆ ಸಿಬ್ಬಂದಿಗಳು ಕೂಡ ಪೆÇಲೀಸರಿಗೆ ತಿರುಗೇಟು ನೀಡಿದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ