ರಾಷ್ಟ್ರೀಯ ಉದ್ಯಮಶೀಲತಾ ಜಾಲದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಎಸ್‍ಐಡಿಬಿಐ

ಬೆಂಗಳೂರು, ಸೆ.7-ಎಂಎಸ್‍ಇ ಪ್ರಶಸ್ತಿಗಳು ಮತ್ತು ಸೂಕ್ಷ್ಮ ಹಾಗೂ ಸಣ್ಣ ಉದ್ಯಮಗಳ ಪ್ರಶಸ್ತಿ ವಿಜೇತರಿಗೆ ಮಾರ್ಗದರ್ಶನ ನೀಡಲು ವಾಧ್ವಾನಿ ಪ್ರತಿಷ್ಠಾನದ ರಾಷ್ಟ್ರೀಯ ಉದ್ಯಮಶೀಲತಾ ಜಾಲದೊಂದಿಗೆ ಭಾರತ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್‍ಐಡಿಬಿಐ) ಒಪ್ಪಂದಕ್ಕೆ ಸಹಿ ಹಾಕಿದೆ.

ಎಸ್‍ಐಡಿಬಿಐನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮುಸ್ತಫಾ ಮಾತನಾಡಿ, ಎಂಎಸ್‍ಇಗಳ ಮಾರ್ಗದರ್ಶನ ಮತ್ತು ಸಹಭಾಗಿತ್ವ ರಚನಾತ್ಮಕ ರೀತಿಯಿಂದ ಎಂಎಸ್‍ಇಗಳಿಗೆ ಉಪಯುಕ್ತವಾಗಲಿದೆ.

ಎಸ್‍ಐಡಿಬಿಐ ಐಟಿ ಇಂಡಿಯಾ ಎಂಎಸ್‍ಇ ಪ್ರಶಸ್ತಿ ವಿಜೇತರು ಸಹ ಈ ಉಪಕ್ರಮದಿಂದ ಪ್ರಯೋಜನ ಪಡೆಯುತ್ತಾರೆ ಏಕೆಂದರೆ ಅವರಿಗೆ ಬಹುಮಾನವಾಗಿ ಮಾರ್ಗದರ್ಶನ ನೀಡಲಾಗುವುದು ಈ ಸಹಭಾಗಿತ್ವ ಸಣ್ಣ ಉದ್ಯಮಗಳ ಬೆಳವಣಿಗೆ ವೇಗಗೊಳಿಸಲು ಸಹಾಯ ಮಾಡುತ್ತದೆ. ಭಾರತದಾದ್ಯಂತ ಮಾರ್ಗದರ್ಶನಕ್ಕಾಗಿ ಮೊದಲ ವರ್ಷದಲ್ಲಿ 500 ಎಂಎಸ್‍ಇಗಳನ್ನು ಹೊಂದುವ ಗುರಿ ಇಟ್ಟುಕೊಂಡಿದೆ.

ವಾಧ್ವಾನಿ ಫೌಂಡೇಶನ್‍ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಸಮೀರ್ ಸಾಥೆ ಮಾತನಾಡಿ ಸಣ್ಣ ಉದ್ಯಮದ ಉದ್ಯಮಿಗಳಿಗೆ ಸಹಾಯ ಮಾಡಲು ನಾವು ಸಿಡ್ಬಿ ಜೊತೆ ಪಾಲುದಾರಿಕೆ ಹೊಂದಲು ಸಂತೋಷಪಡುತ್ತೇವೆ. ಮುಂದಿನ ದಶಕದಲ್ಲಿ ಸಾವಿರಾರು ಎಂಎಸ್‍ಇಗಳು ತಮ್ಮ ಬೆಳವಣಿಗೆಯ ವೇಗವನ್ನು ಹೆಚ್ಚಿಸಿಕೊಳ್ಳಲು ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲು ನಮಗೆ ಅಪಾರ ಅವಕಾಶವಿದೆ ಎಂದರು.

ಎನ್‍ಇಎನ್‍ನಲ್ಲಿ ಎಂಎಸ್‍ಇಗಳಲ್ಲಿ ವ್ಯವಸ್ಥೆಗೊಳಿಸಿದ ನಂತರ ಪರಿವರ್ತಕ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ಎಂಎಸ್‍ಇಗಳ ವಿವರವಾದ ಅಧ್ಯಯನವನ್ನು ಕೈಗೊಳ್ಳಲಾಗುತ್ತದೆ. ಮೌಲ್ಯಮಾಪನದ ಆಧಾರದ ಮೇಲೆ ಮಾರ್ಗದರ್ಶಕರನ್ನು ಎಂಎಸ್‍ಇಗಳೊಂದಿಗೆ ಆಯ್ಕೆ ಮಾಡಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ