ಇಸ್ರೋ ವಿಜ್ಞಾನಿಗಳು ಮಾಡಿರುವ ಕಾರ್ಯ ದೇಶವೇ ಹೆಮ್ಮೆಪಡುವಂತದ್ದು-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು, ಸೆ.7- ಚಂದ್ರಯಾನ-2 ಯೋಜನೆಯಲ್ಲಿ ಇಸ್ರೋ ವಿಜ್ಞಾನಿಗಳು ಮಾಡಿರುವ ಕಾರ್ಯ ದೇಶವೇ ಹೆಮ್ಮೆಪಡುವಂತದ್ದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶ್ಲಾಘಿಸಿದ್ದಾರೆ.

ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಚಂದ್ರಯಾನ-2 ಯೋಜನೆಯಲ್ಲಿ ಇಸ್ರೋ ಸಾಕಷ್ಟು ಪರಿಶ್ರಮ ಪಟ್ಟು ಕೆಲಸ ಮಾಡಿದೆ. ಆದರೆ, ಈಗ ಆಗಿರುವ ಅಡೆತಡೆಗಳು ಭವಿಷ್ಯದಲ್ಲಿ ಮಹತ್ವದ ಸಾಧನೆಗಳನ್ನು ಮಾಡಲು ದಾರಿ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ