ರಮೇಶ್ ಅರವಿಂದ್ ರವರ 101 ನೇ ಚಿತ್ರ “ಶಿವಾಜಿ ಸುರತ್ಕಲ್” ದ ಕೇಸ್ ಆಫ್ ರಣಗಿರಿ ರಹಸ್ಯ ಟೀಸರ್ ಬಿಡುಗಡೆ

ರಮೇಶ್ ಅರವಿಂದ್ ರವರ 101 ನೇ ಚಿತ್ರವಾದ “ಶಿವಾಜಿ ಸುರತ್ಕಲ್” ದ ಕೇಸ್ ಆಫ್ ರಣಗಿರಿ ರಹಸ್ಯ ಚಿತ್ರದ ಟೀಸರ್ ಅನ್ನು ನಮ್ಮ ತಂಡ ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬ ದಂದು ಬಿಡುಗಡೆ ಮಾಡಲು ನಿರ್ಧರಿಸಿದೆ.

ಚಿತ್ರದ ಚಿತ್ರೀಕರಣ ಪೂರ್ಣವಾಗಿ ಮುಗಿದಿದ್ದು, ಡಬ್ಬಿಂಗ್ ಭಾಗ ಕೊನೆಯ ಹಂತದಲ್ಲಿದೆ. ರಾಧಿಕಾ ನಾರಾಯಣ್ ಹಾಗೂ ಆರೋಹಿ ನಾರಾಯಣ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಆಕಾಶ್ ಶ್ರೀವತ್ಸ ರವರು ನಿರ್ದೇಶಿಸಿದ್ದು ಈ ಚಿತ್ರಕ್ಕೆ ರೇಖಾ ಕೆ. ಎನ್ ಹಾಗೂ ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ.

ಚಿತ್ರದ ಹೆಸರು: ಶಿವಾಜಿ ಸೂರತ್ಕಲ್ – ದಿ ಕೇಸ್ ಆಫ್ ರಣಗಿರಿ ರಹಸ್ಯ
ಮುಖ್ಯ ಪಾತ್ರದಲ್ಲಿ: ರಮೇಶ್ ಅರವಿಂದ್, ರಾಧಿಕಾ ಚೇತನ್, ಆರೋಹಿ ನಾರಾಯಣ್
ನಿರ್ದೇಶನ: ಆಕಾಶ್ ಶ್ರೀವತ್ಸ (ಬದ್ಮಾಶ್, ಸುಳ್ಳೇ ಸತ್ಯ)
ನಿರ್ಮಾಣ: ರೇಖಾ.ಕೆ.ಎನ್, ಅನೂಪ್ ಗೌಡ (ಅಂಜನಾದ್ರಿ ಸಿನಿ ಕ್ರಿಯೇಶನ್)
ಛಾಯಾಗ್ರಹಣ: ಗುರುಪ್ರಸಾದ್.ಎಂ.ಜಿ
ಸಂಗೀತ: ಜೂಡಾ ಸ್ಯಾಂಡಿ (ಚಮಕ್, ಆಪರೇಶನ್ ಅಲಮೇಲಮ್ಮ)
ವಸ್ತ್ರ ವಿನ್ಯಾಸ: ಶಚಿನಾ ಹೆಗ್ಗಾರ್
ಸಂಕಲನ: ಶ್ರೀಕಾಂತ್ (ಕೆ.ಜಿ.ಎಫ್)
ಚಿತ್ರಕಥೆ: ಅಭಿಜಿತ್.ವೈ.ಆರ್ ಮತ್ತು ಆಕಾಶ್ ಶ್ರೀವತ್ಸ
ಗೀತ ಸಾಹಿತ್ಯ: ಜಯಂತ್ ಕಾಯ್ಕಿಣಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ