ಖಡಕ್ ಅಧಿಕಾರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಡಿಜಿಪಿ ಆರ್.ರಮೇಶ್

Varta Mitra News

ಬೆಂಗಳೂರು, ಆ.27- ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ ಡಿಐಜಿ ಆರ್.ರಮೇಶ್ ಕರ್ನಾಟಕ ಪೆÇಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಆ.22 1997ರಲ್ಲಿ ಡಿಎಸ್‍ಪಿಯಾಗಿ ಇಲಾಖೆಗೆ ಪಾದಾರ್ಪಣೆ ಮಾಡಿ ಸೇವೆ ಸಲ್ಲಿಸಿದ ವಿವಿಧ ಸ್ಥಳಗಳಲ್ಲಿ ಅತ್ಯತ್ತಮ ಸಾರ್ವಜನಿಕ ಸಂಬಂಧ ಹೊಂದಿದ್ದ ಇವರು ಇನ್ನಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ನಿವೃತ್ತ ಎಸ್‍ಪಿ ಜಗದೀಶ್ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕಿನ ಶಿವಗಂಗೆ ಸಮೀಪದ ಮೈಲನಹಳ್ಳಿ ಗ್ರಾಮದಲ್ಲಿ ಜ.11, 1964ರಲ್ಲಿ ಜನಿಸಿದ ರಮೇಶ್ ಅವರು ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದರಲ್ಲದೆ, ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದ್ದ ಇವರು ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಎಂಎಸ್ ಕಮ್ಯುನಿಕೇಷನ್ ವ್ಯಾಸಂಗ ಮಾಡಿ ನಂತರ ಯುಪಿಎಸ್‍ಸಿ ಪರೀಕ್ಷೆ ಬರೆದು ಐಆರ್‍ಎಸ್‍ಗೆ ಆಯ್ಕೆಯಾಗಿ 1992ರಿಂದ 1995ರವರೆಗೆ ಕಸ್ಟಮ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.
ಸೆ.26, 2013ರಂದು ಐಪಿಎಸ್ ಅಧಿಕಾರಿಯಾಗಿ ಉತ್ತರ ಕನ್ನಡ ಜಿಲ್ಲೆಯ ಪೆÇಲೀಸ್ ಅಧೀಕ್ಷಕರಾಗಿ ಹಾಗೂ ಬೆಂಗಳೂರು ನಗರದಲ್ಲಿ ಪೂರ್ವ ವಿಭಾಗ, ನಗರ ಶಸಸ್ತ್ರ ಪಡೆ, ಕೇಂದ್ರ ಕಾರ್ಯಸ್ಥಾನ ಹಾಗೂ ಸಿಸಿಬಿಯಲ್ಲಿ ಉಪ ಪೆÇಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ತಮ್ಮ ಸಂಪೂರ್ಣ ಸೇವಾವಧಿಯಲ್ಲಿ ತಮ್ಮ ನೀತಿ, ತತ್ವ ಸಿದ್ದಾಂತಗಳಿಗೆ ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಅವರು ಸೇವೆಯಲ್ಲಿ ದಕ್ಷತೆ, ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು.2017ರಲ್ಲಿ ಡಿಐಜಿ ಆಗಿ ಬಡ್ತಿ ಪಡೆದು ಗೃಹ ರಕ್ಷಕದಳದ ಉಪ ಕಮಾಂಡೆಂಟ್ ಆಗಿದ್ದ ನಂತರ ಪೆÇಲೀಸ್ ಪ್ರಧಾನ ಕಚೇರಿಯಲ್ಲಿ ಯೋಜನೆ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿ ಖಡಕ್ ಅಧಿಕಾರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇದು ಇಡೀ ಕರ್ನಾಟಕ ರಾಜ್ಯದ ಪೆÇಲೀಸ್ ಇಲಾಖೆಯಲ್ಲಿ ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದರು.ರಮೇಶ್ ಅವರ ಅಕಾಲಿಕ ಅಗಲಿಕೆಯ ನೋವನ್ನು ಸಹಿಸುವ ಧೈರ್ಯ, ಶಕ್ತಿಯನ್ನು ಪತ್ನಿ, ಮಕ್ಕಳಿಗೆ ಭಗವಂತ ನೀಡಲಿ ಎಂದು ಅವರು ಶೋಕ ಸಂತಾಪದಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ