ಉಳ್ಳವರು ದಾನ ಮಾಡುವುದು ದೊಡ್ಡದಲ್ಲ-ಇಲ್ಲದಿರುವವರು ಇರುವಷ್ಟರಲ್ಲೇ ಕೊಡುಗೆ ನೀಡುವುದು ದೊಡ್ಡತನ -ನಗರ ಪೆÇಲೀಸ್ ಆಯುಕ್ತ ಭಾಸ್ಕರ್‍ರಾವ್

ಬೆಂಗಳೂರು, ಆ.27- ವಿದ್ಯಾಭ್ಯಾಸ ಮಾಡುತ್ತಿರುವ ಇಂದಿನ ಕೆಲ ಯುವ ಪೀಳಿಗೆಯ ಚಿತ್ತ ಬೇರೆಡೆ.ಹೋಗುತ್ತಿರುವ ಪ್ರಸ್ತುತ ದಿನಗಳಲ್ಲಿ ಪೆÇಲೀಸರ ಮಕ್ಕಳು ಉತ್ತಮ ವ್ಯಾಸಂಗ ಮಾಡಿ ಹೆಚ್ಚಿನ ಅಂಕ ಗಳಿಸಿ ಪ್ರಶಸ್ತಿಗೆ ಪಾತ್ರರಾಗಿರುವುದು ಸಂತೋಷಕರ ಎಂದು ನಗರ ಪೆÇಲೀಸ್ ಆಯುಕ್ತ ಭಾಸ್ಕರ್‍ರಾವ್ ಇಂದಿಲ್ಲಿ ತಿಳಿಸಿದರು.

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ.86ಕ್ಕೂ ಹೆಚ್ಚು ಅಂಕ ಗಳಿಸಿದ ಪೆÇಲೀಸರ ಪ್ರತಿಭಾನ್ವಿತ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅತೀ ಆತ್ಮವಿಶ್ವಾಸ ಹೊಂದಬೇಡಿ.ಇದರಿಂದ ಮುಂದಿನ ವ್ಯಾಸಂಗಕ್ಕೆ ಚ್ಯುತಿ ಉಂಟಾಗುತ್ತದೆ ಎಂದು ಕಿವಿಮಾತು ಹೇಳಿದರು.
ನಮ್ಮ ದೇಶಕ್ಕೆ ಕಷ್ಟಪಟ್ಟು ಕೆಲಸ ಮಾಡುವ ಯುವಜನಾಂಗ ಬೇಕಾಗಿದೆ. ವಿದ್ಯಾಭ್ಯಾಸ ಅಥವಾ ಉದ್ಯೋಗದ ಸ್ಥಳದಲ್ಲಿ ತಮ್ಮ ಘನತೆಗೆ ಕುಂದುಂಟಾದರೆ ಹಿಂಜರಿಯಬೇಡಿ. ಅದನ್ನು ಎದುರಿಸಲು ಮುಂದಾಗಿ.ಸಾಧನೆ ಮಾಡುವ ಶಕ್ತಿ ನಿಮಗಿದೆ.ಮುನ್ನುಗ್ಗಿ ಸಾಗಿದರೆ ಪ್ರತಿಫಲ ದೊರೆಯುತ್ತದೆ ಎಂದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನನ್ನ ಪೆÇ್ರೀ ಸದಾ ಇರುತ್ತದೆ.ಉಳ್ಳವರು ದಾನ ಮಾಡುವುದು ದೊಡ್ಡದಲ್ಲ. ಇಲ್ಲದಿರುವವರು ಇರುವಷ್ಟರಲ್ಲೇ ಕೊಡುಗೆ ನೀಡುವುದು ದೊಡ್ಡತನ. ಈ ಬಾರಿಯ ಪೆÇಲೀಸರ ಪ್ರತಿಭಾನ್ವಿತ ಮಕ್ಕಳಿಗೆ ಮಣಿಪಾಲ್ ಮತ್ತು ಲರ್ನಿಂಗ್ ಸೊಸೈಟಿ ನಗದು ನೀಡಿ ಪೆÇ್ರೀ ಉತ್ತಮ ಬೆಳವಣಿಗೆ ಎಂದರು.
ಸಮಾರಂಭದಲ್ಲಿ ಹೆಚ್ಚುವರಿ ಪೆÇಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಉಪ ಪೆÇಲೀಸ್ ಆಯುಕ್ತ ವಿಷ್ಣುವರ್ಧನ್ ಹಾಗೂ ದೇಣಿಗೆ ನೀಡಿದ ಅಭಯ್ ಜೈನ್ ಮತ್ತು ದಿಲೀಪ್ ಸುಹಾಸ್ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ