ಒಂದು ತಿಂಗಳು ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಸಿಎಂ ಯಡಿಯೂರಪ್ಪ-ಸಿಹಿಗಿಂತ ಕಹಿಯೇ ಜಾಸ್ತಿ

ಬೆಂಗಳೂರು, ಆ.26- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದಿಗೆ ಒಂದು ತಿಂಗಳು ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದು, ಸಿಹಿಗಿಂತ ಕಹಿಯೇ ಜಾಸ್ತೀ ಎನ್ನುವಂತಾಗಿದೆ.
76 ವರ್ಷದ ಬಿಜೆಪಿ ನಾಯಕನಿಗೆ ಸಹಾಯಕ್ಕೆ ಕ್ಯಾಬಿನೆಟï ಇಲ್ಲದೆಯೂ ರಾಜ್ಯದ ನೆರೆ ಪರಿಸ್ಥಿತಿಯನ್ನು ಏಕಾಂಗಿಯಾಗಿ ನಿಭಾಯಿಸಬೇಕಾಗಿ ಬಂದಿತ್ತು.ಅಲ್ಲದೆ ಕಳೆದ 30 ದಿನಗಳಲ್ಲಿ ರಾಜಕೀಯ ಮತ್ತು ಆಡಳಿತ ರಂಗಗಳಲ್ಲಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು.
ರಾಜ್ಯದ ಹೆಚ್ಚಿನ ಭಾಗಗಳು ಬರಗಾಲಕ್ಕೆ ಸಿಲುಕಿದ ಸಮಯದಲ್ಲಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದರು. ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಬರ ಪರಿಹಾರ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲು ಅವರು ತಕ್ಷಣ ಅಧಿಕಾರಿಗಳೊಂದಿಗೆ ಮ್ಯಾರಥಾನ್ ಸಭೆ ನಡೆಸಿದರು.

ಆದರೆ ಈ ಸಭೆಗಳು ಕೆಲವೇ ವಾರಗಳಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿ ಇದ್ದಕ್ಕಿದ್ದಂತೆ, ರಾಜ್ಯ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. ಭಾರೀ ಮಳೆ ಮತ್ತು ಮಹಾರಾಷ್ಟ್ರ ಬಿಡುಗಡೆ ಮಾಡಿದ ನೀರೂ ಸೇರಿ ಹಲವಾರು ಜಿಲ್ಲೆಗಳಲ್ಲಿ ಜನಜೀವನವೇ ದುಸ್ತರವಾಗಿತ್ತು
ಈಗಲೂ ರಾಜ್ಯದ 30 ಜಿಲ್ಲೆಗಳಲ್ಲಿ 22 ಜಿಲ್ಲೆಗಳು ನೆರೆ ಪರಿಸ್ಥಿತಿ ಎದುರಿಸುತ್ತಿವೆ.ಪ್ರವಾಹದಿಂದ ಸಾರಿಗೆ ಸಂಪರ್ಕಕ್ಕೆ ಅಡ್ಡಿಯಾಗಿದೆ. ಹಲವಾರು ಪ್ರದೇಶಗಳು ಮುಳುಗಡೆಯಾಗಿವೆ.ಇದರಿಂದ ಯಡಿಯೂರಪ್ಪ ಆಡಳಿತವು ಪರೀಕ್ಷೆಗೆ ಒಳಗಾಯಿತು.

ಈ ಸಮಯದಲ್ಲಿ, ಅವರು ಕ್ಯಾಬಿನೆಟïನ ಏಕೈಕ ಸದಸ್ಯರಾಗಿದ್ದರು ಮತ್ತು ಇನ್ನೂ ಯಾವುದೇ ಮಂತ್ರಿಗಳನ್ನು ನೇಮಕ ಮಾಡಿರಲಿಲ್ಲ. ದೆಹಲಿಯಲ್ಲಿದ್ದಾಗ, ಪಕ್ಷದ ಮುಖಂಡ ಅಮಿತ್ ಶಾ, ಪ್ರಧಾನಿ ಮೋದಿ ಮತ್ತು ಇತರರನ್ನು ಭೇಟಿ ಮಾಡಲು ಕರ್ನಾಟಕಕ್ಕೆ ಹಣ ಪಡೆಯಲು ಮತ್ತು ಅವರ ಸಂಪುಟಕ್ಕೆ ಹೆಸರುಗಳನ್ನು ಅಂತಿಮಗೊಳಿಸಲು, ಯಡಿಯೂರಪ್ಪ ಅವರು ತಮ್ಮ ಪ್ರಯತ್ನ ಮಾಡಿದರೂ ರಾಜ್ಯದ ಹದಗೆಟ್ಟ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಲಿಲ್ಲ.
ದೆಹಲಿ ಪ್ರವಾಸ ಮೊಟಕು ಮಾಡಿ ರಾಜ್ಯದ ಪ್ರವಾಹದಿಂದ ಹಾನಿಗೊಳಗಾದ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳುವಂತಾಯಿತು. ಅವರು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ನಾಲ್ಕು ದಿನ ವಾಸ್ತವ್ಯ ಹೂಡಿದ್ದರು.

ಇದೆಲ್ಲದರ ನಡುವೆ ಪ್ರವಾಹಕ್ಕಾಗಿ ಕೋಟಿ ರೂ ದೇಣಿಗೆ ನೀಡಿದ ವ್ಯಕ್ತಿ ಅಥವಾ ಸಂಸ್ಥೆ ಹೆಸರನ್ನು ಗ್ರಾಮಗಳಿಗೆ ಇಡುವ ನಿರ್ಧಾರ ಮಾಡಿದ್ದಾಗಿ ಮಾದ್ಯಮಗಳಲ್ಲಿ ವರದಿಯಾಗಿದ್ದು ಇದು ವಿವಾದಕ್ಕೂ ಕಾರಣವಾಗಿತ್ತು.ಆ ಬಳಿಕ ಅವರು ವ್ಯಕ್ತಿ ಹೆಸರನ್ನು ಒಂದು ಲೇಔಟï ಗಷ್ಟೇ ಇಡುವುದಾಗಿ, ಇಡೀ ಹಳ್ಳಿಗಲ್ಲ ಎಂದು ಸ್ಪಷ್ಟನೆ ನೀಡಬೇಕಾಯಿತು.

ಆಗಸ್ಟ್ 16 ರಂದು ನವದೆಹಲಿಗೆ ಅವರ ಎರಡನೇ ಭೇಟಿಯ ನಂತರ, ಅಲ್ಲಿ ಅವರು ಪ್ರಧಾನಿ ಮತ್ತು ಇತರ ಹಿರಿಯ ಮಂತ್ರಿಗಳನ್ನು ಭೇಟಿಯಾದರು, ಅವರು ತಮ್ಮ ಸಂಪುಟವನ್ನು ರಚಿಸಲುತಯಾರಾದರು.
ಹಾಗೇ 17 ಮಂದಿ ಮಂತ್ರಿಗಳನ್ನು ನೇಮಕ ಮಾಡಲಾಯಿತು.. ಅದೇ ಸಮಯದಲ್ಲಿ, ಅವರು ಹಿಂದಿನ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಂಡಾಯ ಶಾಸಕರೊಂದಿಗೆ ವ್ಯವಹರಿಸಬೇಕಾಯಿತು.

ಆಗಸ್ಟ್ 22 ರಂದು ಅವರು ಮತ್ತೆ ದೆಹಲಿಗೆ ಹೋದರು ಹೀಗೆ ರಾಷ್ಟ್ರ ರಾಜಧಾನಿಯಲ್ಲಿ ತಿಂಗಳಲ್ಲಿ ಏಳು ದಿನಗಳನ್ನು ಕಳೆದ ಯಡಿಯೂರಪ್ಪ ಇದೀಗ ಸಚಿವರ ಖಾತೆ ಹಂಚಿಕೆ ಅಂತಿಮಗೊಳಿಸುವ ಕಾರ್ಯದಲ್ಲಿದ್ದಾರೆ.ಭಾನುವಾರ ಅವರು ನಾಲ್ಕನೇ ಬಾರಿಗೆ ನವದೆಹಲಿಗೆ ಭೇಟಿ ನೀಡಲಿದ್ದಾರೆ.ಆದರೆ, ಈ ಬಾರಿ ಬಿಜೆಪಿಯ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರಿಗೆ ಅಂತಿಮ ನಮನ ಸಲ್ಲಿಸುವುದು ಅವರ ಮೊದಲ ಆದ್ಯತೆಯಾಗಿದೆ.
ಇದೇ ವೇಳೆ ಯಡಿಯೂರಪ್ಪ ನಿಕಟವರ್ತಿ ಸಿಎಂ ಕುಮಾರಸ್ವಾಮಿ ತಾವು ಹೊಸದಾಗಿ ಸಿಎಂ ಹುದ್ದೆಗೇರಿದ್ದಾಗ ಹೆಚ್ಚಿನ ಅವಧಿಯನ್ನು ಸಿಎಂ ಕಛೇರಿಯಲ್ಲಿ ಕಳೆದಿದ್ದರು. ಹಾಗೆಯೇ ರಾಜ್ಯಾದ್ಯಂತ ದೇವಾಲಯಗಳಿಗೆ ಭೇಟಿ ನೀಡಿದ್ದರು.
ಪಕ್ಷದಲ್ಲೂ ತಪ್ಪಿದ ಹಿಡಿತ
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಸಚಿವ ಸಂಪುಟ ರಚನೆ ಮಾಡಿಕೊಂಡ ಬಿಎಸï ಯಡಿಯೂರಪ್ಪ ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದು, ಆ ಸ್ಥಾನವನ್ನು ದಕ್ಷಿಣ ಕನ್ನಡ ಸಂಸದ ನಳಿನï ಕುಮಾರï ಕಟೀಲï ಅಲಂಕರಿಸಿದ್ದಾರೆ.

ಸರ್ಕಾರದಲ್ಲಿ ಬಹುತೇಕ ತಮಗೆ ಬೇಕಾದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ತಮ್ಮ ಆಪ್ತರನ್ನು ಕೂರಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಸಂಪುಟ ವಿಚಾರದಲ್ಲಿ ಗೆದ್ದ ಯಡಿಯೂರಪ್ಪ ಪಕ್ಷದ ಅಧ್ಯಕ್ಷ ಹುದ್ದೆಯಲ್ಲಿ ಸೋತಿದ್ದಾರೆ.
ತನ್ನ ಆಪ್ತ ಅರವಿಂದ ಲಿಂಬಾವಳಿಗೆ ಅಧ್ಯಕ್ಷ ಪಟ್ಟ ಕೊಡಿಸುವ ಮೂಲಕ ತಾನು ಸರ್ಕಾರ ನಡೆಸಿದರೆ, ರಾಜ್ಯ ಬಿಜೆಪಿ ತನ್ನ ನಿಯಂತ್ರಣದಲ್ಲಿರುತ್ತದೆ ಎಂಬ ಲೆಕ್ಕಾಚಾರ ಬಿಎಸ್ ವೈ ಅವರದ್ದಾಗಿತ್ತು. ಆದರೆ ಅಂತಿಮವಾಗಿ ಹೈಕಮಾಂಡ್ ನಳಿನ್ ಕುಮಾರ್ ಕಟೀಲ್ ನೇಮಕ ಮಾಡುವ ಮೂಲಕ ಯಡಿಯೂರಪ್ಪ ಅವರ ಆಸೆಗೆ ತಣ್ಣೀರೆರೆಚಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳೀನ್ ಕುಮಾರ್ ಕಟೀಲ್ ಆಯ್ಕೆ ಮೂಲಕ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹಿಡಿತ ಹಂತಹಂತವಾಗಿ ಕೈತಪ್ಪುವ ಸೂಚನೆ ಸಿಕ್ಕಿದೆ.ಈ ಹಿಂದೆ ಪ್ರಬಲ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಅವರ ಕೈಲಿ ಇಡೀ ಪಕ್ಷವನ್ನು ಕೊಟ್ಟಿದ್ದ ಬಿಜೆಪಿ ಅದರಿಂದ ಸಾಕಷ್ಟು ಪಾಠ ಕಲಿತಿದೆ.ಆದ್ದರಿಂದ ಬಿಎಸ್‍ವೈ ಹಿಡಿತದಿಂದ ಪಾರಾದರೆ ಸಾಕು ಅನ್ನೋ ಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಇದೆ.

ಏಕವ್ಯಕ್ತಿ ಕೇಂದ್ರಿತ ಆಡಳಿತಕ್ಕೆ ಒಪ್ಪದ ಆರ್‍ಎಸ್‍ಎಸ್ ರಾಜ್ಯ ಬಿಜೆಪಿಯಲ್ಲಿ ಬಿಎಸ್‍ವೈ ಅವರ ನಿಯಂತ್ರಣವನ್ನು ಸಡಿಲ ಮಾಡುವ ಉದ್ದೇಶದೊಂದಿಗೆ ಈ ತೀರ್ಮಾನ ಕೈಗೊಂಡಿದೆ.ಹೀಗಾಗಿ ದೆಹಲಿಯಲ್ಲಿ ಆರ್‍ಎಸ್‍ಎಸ್ ನಾಯಕ ಸಂತೋಷ್ ಅವರು ತಮ್ಮ ಶಿಷ್ಯ ಕಟೀಲ್ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕೂರಿಸಿ ಪಕ್ಷವನ್ನು ತಮ್ಮ ಮುಷ್ಠಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.ಹೀಗಾಗಿ ಇನ್ನು ಮುಂದೆ ಟಿಕೆಟ್ ಹಂಚಿಕೆ ಸೇರಿದಂತೆ ಪಕ್ಷದ ಸಂಘಟನೆ ವಿಚಾರದಲ್ಲಿ ಯಡಿಯೂರಪ್ಪನವರ ಪ್ರಭಾವ ಕಡಿಮೆಯಾಗುವುದರಲ್ಲಿ ಅನುಮಾನವೇ ಇಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ