ಭಾರತೀಯ ಸಮುದಾಯ ವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ

ಮನಾಮಾ, ಆ.25- ಭಾರತದ ರಾಜಕೀಯ ಇತಿಹಾಸದಲ್ಲೇ ಬಹ್ರೈನ್ ದೇಶಕ್ಕೆ ಭೇಟಿ ನೀಡಿದ ಪ್ರಪ್ರಥಮ ಅತ್ಯುನ್ನತ ನಾಯಕರು ಎಂಬ ಹೆಗ್ಗಳಿಕೆಗೆ ಪಾತ್ರವಾದ ಪ್ರಧಾನಿ ನರೇಂದ್ರ ಮೋದಿ ಆ ದೇಶದಲ್ಲೂ ತಮ್ಮ ವರ್ಚಸ್ಸು ಮತ್ತªರÀ ವಾಕ್ ಚಾತುರ್ಯದಿಂದ ಜನ ಮನ ಗೆದ್ದಿದ್ದಾರೆ.
ಭಾರತದ ವೈವಿಧ್ಯತೆ ಮತ್ತು ಅನೇಕತೆಯಲ್ಲಿ ಏಕತೆ ಹಾಗೂ ನಮ್ಮ ದೇಶದ ಶಕ್ತಿ ಅದು ಇಡೀ ವಿಶ್ವವನ್ನು ಆಕರ್ಷಿಸುತ್ತದೆ. ತಮ್ಮ ಸರ್ಕಾರ ನೀಡುವ ಹೊಸ ಅವಕಾಶಗಳಿಂದ ಇಲ್ಲಿನ ಅನಿವಾಸಿ ಭಾರತೀಯರಿಗೆ ನೆರವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಬಹ್ರೈನ್ ರಾಜಧಾನಿ ಮನಾಮಾದಲ್ಲಿ ಭಾರತೀಯ ಸಮುದಾಯ ವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರಧಾನಿಯಾಗಿ ತಾವಿಲ್ಲಿಗೆ ಬಂದಿರುವ ಉದ್ದೇಶ ಇಲ್ಲಿನ ಅನಿವಾಸಿ ಭಾರತೀಯರನ್ನು ಭೇಟಿ ಮಾಡಿ ಅವರ ಜೊತೆ ಮಾತನಾಡುವುದು ಮತ್ತು ಬಹ್ರೈನ್‍ನಲ್ಲಿರುವ ಅನೇಕ ಸ್ನೇಹಿತರನ್ನು ಭೇಟಿ ಮಾಡಿ ಮಾತುಕತೆಯಾಡುವುದು ಎಂದರು.
ಭಾರತದ ಪ್ರಧಾನಿ ಬಹ್ರೈನ್‍ಗೆ ಭೇಟಿ ನೀಡಲು ಇಷ್ಟೊಂದು ದೀರ್ಘ ಸಮಯ ಹಿಡಿಯಿತು. ಈ ಕೊಲ್ಲಿ ರಾಷ್ಟ್ರಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿಯಾಗಿ ತಮಗೆ ಹೆಮ್ಮೆಯಿದೆ ಎಂದರು.
ಫ್ರಾನ್ಸ್, ಯುಎಇ ಮತ್ತು ಬಹ್ರೈನ್ ಮೂರು ದೇಶಗಳ ಭೇಟಿಯ ಅಂತಿಮ ಘಟದಲ್ಲಿ ನರೇಂದ್ರ ಮೋದಿಯವರು ಬಹ್ರೈನ್‍ಗೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿಯಾಗಿದ್ದಾರೆ.
ದೇಶದ ಒಳಗೆ ಮತ್ತು ಹೊರಗೆ ತಮ್ಮ ಸರ್ಕಾರದ ಅಡಿಯಲ್ಲಿ ಭಾರತ ಉನ್ನತಿಯತ್ತ ಸಾಗುತ್ತಿದೆ. ತಮ್ಮ ಸರ್ಕಾರ ಗಾಡಿಯ ಸ್ಟೇರಿಂಗ್‍ನಲ್ಲಿ ಕುಳಿತಿದ್ದು ದೇಶದ ಜನರು ಎಕ್ಸಲೇಟರ್ ಒತ್ತುತ್ತಿದ್ದಾರೆ ಎಂದರು.
ತಮ್ಮ ಕನಸು ಸಾಕಾರಗೊಳ್ಳಬಹುದು. ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಕೂಡ ಈಡೇರಿಸಿಕೊಳ್ಳಬಹುದು ಎಂದು ಪ್ರತಿಯೊಬ್ಬ ಭಾರತೀಯನೂ ಈಗ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ನಂಬಿಕೆಯ ಬಲದ ಮೇಲೆಯೇ ಹೊಸ ನಿರ್ಣಯಗಳನ್ನು ಈಡೇರಿಸುವಲ್ಲಿ ನಾನು ನಿರತನಾಗಿದ್ದೇನೆ ಎಂದು ಬಹ್ರೈನ್‍ನ ಭಾರತೀಯ ಸಮುದಾಯವನ್ನುದ್ದೇಶಿಸಿ ಹೇಳಿದರು.
ನಮ್ಮ ಗುರಿಗಳು ಉನ್ನತವಾಗಿವೆ. ಮುಂದಿನ ವರ್ಷಗಳಲ್ಲಿ ದೇಶದ ಆರ್ಥಿಕತೆಯ ಮಟ್ಟವನ್ನು 5 ಟ್ರಿಲಿಯನ್ ಡಾಲರ್‍ಗೆ ಹೆಚ್ಚಿಸಲು ನಮ್ಮ ಆರ್ಥಿಕತೆ ದುಪ್ಪಟ್ಟು ಬೆಳೆಯಬೇಕಿದೆ. ಭಾರತೀಯ ಮೂಲದ ಅಲ್ಲಿನ ಸಮುದಾಯವನ್ನುದ್ದೇಶಿಸಿ ಮೋದಿಯವರು ಭಾರತದಲ್ಲಿ ಬದಲಾವಣೆ ತರಲು ನೀವು ಬಯಸುತ್ತೀರಾ ಎಂದು ಕೇಳಿದಾಗ ಹೌದು ಎಂಬ ಉತ್ತರ ಬಂತು.
ಬಹ್ರೈನ್‍ನಲ್ಲಿರುವ ಭಾರತೀಯ ವಲಸಿಗರು ಸದ್ಯದಲ್ಲಿಯೇ ರುಪೇ ಕಾರ್ಡ್ ಮೂಲಕ ವಹಿವಾಟು ನಡೆಸಲು ಸಾಧ್ಯವಿದೆ ಎಂದು ಮೋದಿಯವರು ಘೋಷಿಸಿದರು. ಇಂದು ನಾವು ನಿಲುವಳಿ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ರುಪೇ ಕಾರ್ಡ್ ಮೂಲಕ ಭಾರತದಲ್ಲಿರುವ ನಿಮ್ಮವರಿಗೆ ಹಣ ಕಳುಹಿಸುವ ವ್ಯವಸ್ಥೆ ಮಾಡುವುದು ನಮ್ಮ ಉದ್ದೇಶ ಎಂದರು.
ಇದಕ್ಕೂ ಮುನ್ನ ನಡೆದ ಸಮಾರಂಭವೊಂದರಲ್ಲಿ ನಿನ್ನೆ ನಿಧನರಾದ ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ಧುರೀಣ ಅರುಣ್ ಜೇಟ್ಲಿ ಅವರ ಗುಣಗಾನ ಮಾಡಿ ಪ್ರಧಾನಿ ಸಂತಾಪ ಸೂಚಿಸಿದರು.

 

 

ಪ್ರಧಾನಿ ಮೋದಿಯವರಿಂದ ಬಹರೈನ್ ರಾಜಕುಮಾರ ಸಲ್ಮಾನ್ ಬಿನ್ ಭೇಟಿ:
ಮನಾಮ, ಆ.25-ಬಹರೈನ್ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಆ ದೇಶದ ರಾಜಕುಮಾರ ಸಲ್ಮಾನ್ ಬಿನ್ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರನ್ನು ಭೇಟಿ ಮಾಡಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಿದರು.
ಭಾರತ ಮತ್ತು ಬಹರೈನ್ ನಡುವೆ ವಾಣಿಜ್ಯ ಸಂಬಂಧಗಳು ಮತ್ತು ಸಾಂಸ್ಕøತಿಕ ವಿನಿಮಯಗಳ ಮೇಲೆ ಬೆಳಕು ಚೆಲ್ಲುವ ಜೊತೆಗೆ ಎರಡೂ ರಾಷ್ಟ್ರಗಳ ನಡುವಣ ಬಾಂಧವ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಬಗ್ಗೆ ಮೋದಿ ಮತ್ತು ಸಲ್ಮಾನ್ ಚರ್ಚಿಸಿದರು.
ನಿನ್ನೆಯಿಂದ ಬಹರೈನ್ ಪ್ರವಾಸದಲ್ಲಿರುವ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜೊತೆಗೆ ಆ ದೇಶದ ಉನ್ನತ ನಾಯಕರನ್ನು ಭೇಟಿ ಮಾಡಿ ಸಂಬಂಧ ವೃದ್ದಿಗೆ ಭದ್ರ ಬುನಾದಿ ಹಾಕಿದ್ದಾರೆ. . ಈ ಸಂಸ್ಥಾನಕ್ಕೆ ಭೇಟಿ ನೀಡುತ್ತಿರುವ ಭಾರತದ ಪ್ರಥಮ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಅವರ ಕೊಲ್ಲಿ ರಾಷ್ಟ್ರ ಭೇಟಿ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.
ಬಳಿಕ ಅವರು ಇಂದು ಮತ್ತು ನಾಳೆ ಜಿ=7 ಶೃಂಗಸಭೆಯಲ್ಲಿ ಭಾಗವಹಿಸುವರು. ಈ ಸಭೆಯಲ್ಲಿ ಪರಿಸರ, ಹವಾಮಾನ, ವಾತಾವರಣ, ಸಾಗರ ಮತ್ತು ಡಿಜಿಟಲ್ ಪರಿವರ್ತನೆ ವಿಷಯಗ¼ ಕುರಿತು ಮುಖ್ಯವಾಗಿ ಚರ್ಚೆಯಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ