ಬೇಕರಿಯೊಂದರಲ್ಲಿ ಆಗ್ನಿ ಆಕಸ್ಮಿಕ-ಬೇಕರಿ ವಸ್ತುಗಳು ಆಗ್ನಿಗಾಹುತಿ

Fire Fierce Hot Flames Burning Orange Heat

ಬೆಂಗಳೂರು, ಆ.22-ಬೇಕರಿಯೊಂದರಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ಹೊತ್ತಿಕೊಂಡು ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 8 ಲಕ್ಷ ಮೌಲ್ಯದ ಬೇಕರಿ ವಸ್ತುಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪೀಣ್ಯ-ದಾಸರಹಳ್ಳಿಯ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಹಾಸನ ಮೂಲದ ನವೀನ್ ಎಂಬುವರು ಇತ್ತೀಚೆಗಷ್ಟೇ ಸಾಲ ಮಾಡಿ ಹೊಸದಾಗಿ ಹಾಸನಾಂಬ ಬೇಕರಿ ತೆರೆದಿದ್ದರು.

ಇಂದು ಮುಂಜಾನೆ ಬೇಕರಿಯಲ್ಲಿ ವಿದ್ಯುತ್ ಶಾರ್ಟ್‍ಸಕ್ರ್ಯೂಟ್‍ನಿಂದ ಬೆಂಕಿ ಆವರಿಸಿಕೊಂಡಿದೆ.ತಕ್ಷಣ ಪೀಣ್ಯ ಅಗ್ನಿಶಾಮಕದಳದ ಸಿಬ್ಬಂದಿ ವಾಹನದೊಂದಿಗೆ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರಾದರೂ ಅದರಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಹಾಳಾಗಿತ್ತು.

ಜೀವನೋಪಾಯಕ್ಕಾಗಿ ತೆರೆದಿದ್ದ ಬೇಕರಿ ಬೆಂಕಿಗೆ ಆಹುತಿಯಾಗಿದ್ದರಿಂದ ನವೀನ್ ಕುಟುಂಬದವರು ಆರ್ಥಿಕ ನಷ್ಟ ಉಂಟಾಗಿ ಕಂಗಾಲಾಗಿದ್ದಾರೆ.

ಘಟನೆ ಸಂಬಂಧ ಬಾಗಲಗುಂಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ