ಕಾರ್ಖಾನೆಯೊಂದರಲ್ಲಿ ಆಕಸ್ಮಿಕ ಬೆಂಕಿ-ಘಟನೆಯಲ್ಲಿ ಒಬ್ಬನ ಸಾವು

Fire Fierce Hot Flames Burning Orange Heat

ಬೆಂಗಳೂರು,ಆ.17-ಪೀಠೋಪಕರಣ ಹಾಗೂ ಕುಶನ್ ತಯಾರಿಕಾ ಕಾರ್ಖಾನೆಯೊಂದರಲ್ಲಿ ಬೆಳಗಿನ ಜಾವ ಶಾರ್ಟ್‍ಸಕ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡು ಒಬ್ಬ ಕಾರ್ಮಿಕ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಡಿ.ಜೆ.ಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಮುರಾದ್(23) ಮೃತಪಟ್ಟ ಕಾರ್ಮಿಕ.
ಡಿ.ಜೆ.ಹಳ್ಳಿ ವ್ಯಾಪ್ತಿಯ 6ನೇ ಕ್ರಾಸ್, ಗೋವರ್ಧನ್ ಗಾರ್ಡ್‍ನ್ ಬಳಿ ಕುಶನ್ ತಯಾರಿಕಾ ಕಾರ್ಖಾನೆ ಇದ್ದು, ರಾತ್ರಿ ಐದು ಮಂದಿ ಕಾರ್ಮಿಕರು ಕೆಲಸ ಮುಗಿಸಿ ಇಲ್ಲೇ ಮಲಗಿದ್ದರು.

ಬೆಳಗಿನ ಜಾವ 3.45ರ ಸುಮಾರಿನಲ್ಲಿ ವಿದ್ಯುತ್ ಶಾರ್ಟ್‍ಸಕ್ಯೂಟ್‍ನಿಂದ ಕಾರ್ಖಾನೆ ಒಳಗೆ ಬೆಂಕಿ ಕಾಣಿಸಿಕೊಂಡು ಹೊಗೆ ಆವರಿಸಿಕೊಂಡಿದೆ.ತಕ್ಷಣ ಎಚ್ಚರಗೊಂಡ ಕಾರ್ಮಿಕರ ಪೈಕಿ ನಾಲ್ವರು ಹೊರಗೆ ಓಡಿದರೆ, ಒಬ್ಬಾತ ಕಾರ್ಖಾನೆಯೊಳಗಿದ್ದ ಬಾತ್‍ರೂಮ್ ಒಳಗೆ ಹೋಗಿ ಲಾಕ್ ಮಾಡಿಕೊಂಡಿದ್ದಾನೆ.
ಹೊರಗೆ ಹೋಗಿ ಪ್ರಾಣ ರಕ್ಷಿಸಿಕೊಂಡಿದ್ದ ಕಾರ್ಮಿಕರು ಪೆÇಲೀಸರು ಹಾಗೂ ಅಕ್ಕಪಕ್ಕದವರಿಗೆ ವಿಷಯ ತಿಳಿಸಿ ಬಾತ್‍ರೂಮ್‍ನಲ್ಲಿದ್ದ ಮುರಾದ್‍ನನ್ನು ರಕ್ಷಿಸಲು ಒಳಗೆ ಹೋಗಿ ನೋಡಿದಾಗ ಈತ ಪ್ರಜ್ಞೆ ಕಳೆದುಕೊಂಡಿದ್ದನು.
ತಕ್ಷಣ ಈತನನ್ನು ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ದರಾದರಐ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಡಿ.ಜೆ.ಹಳ್ಳಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ