ಐಎಂಎ ಬಹುಕೋಟಿ ವಂಚನೆ ಪ್ರಕರಣ-ತನಿಉಖೆಯನ್ನು ಚುರುಕುಗೊಳಿಸಿದ ಎಸ್‍ಐಟಿ

ಬೆಂಗಳೂರು,ಆ.16- ಐಎಂಎ ಜ್ಯೂವೆಲರಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್ ಐ ಟಿ ಪೊಲೀಸರು ತನಿಖೆಯನ್ನು ಚುರುಕು ಗೊಳಿಸಿದ್ದಾರೆ. ಇದರ ಬೆನ್ನಲ್ಲೆ ಶುಕ್ರವಾರವೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದ್ದ ಶಾಸಕ ರೋಷನ ಬೇಗ್, ಯಾವುದೇ ಕಾರಣ ನೀಡದೇ ವಿಚಾರಣೆಗೆ ವಿಚಾರಣೆಗೆ ಗೈರು ಹಾಜರಾಗಿದ್ದರು.

ಈ ಹಿಂದೆ ಅನಾರೋಗ್ಯ ಕಾರಣ ಹೇಳಿ ವಿಚಾರಣೆಗೆ ಗೈರಾಗಿದ್ದ ರೋಷನ್ ಬೇಗ್ ಎಸ್‍ಐಟಿ ನಾಲ್ಕನೇ ಬಾರಿಗೆ ನೋಟಿಸ್ ಜಾರಿ ಮಾಡಿತ್ತು.

ಎಸ್‍ಐಟಿಯ ಮತ್ತೊಂದು ತಂಡವು ರೋಷನ್ ಬೇಗ್ ವಿಚಾರಣೆಗೆ ತಯಾರಿ ನಡೆಸಿತ್ತು.ಆದರೆ ಮನ್ಸೂರ್ ಎಸ್‍ಐಟಿ ವಶದಲ್ಲಿರುವ ಕಾರಣ ಬೇಗ್ ವಿಚಾರಣೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.ಮನ್ಸೂರ್ ಖಾನ್ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ರೋಷನ್ ಬೇಗ್ ಕೋಟಿ ಕೋಟಿ ಹಣ ಪಡೆದಿರುವ ವಿಚಾರದ ಬಗ್ಗೆ ಮಾತನಾಡಿದ್ದ. ಹೀಗಾಗಿ ವಿಚಾರಣೆ ನಡೆಸಲು ನಾಲ್ಕನೇ ಬಾರಿಗೆ ಎಸ್‍ಐಟಿ ನೋಟಿಸ್ ಜಾರಿ ಮಾಡಿತ್ತು.ಈ ಹಿಂದೆ ಮೂರು ನೋಟಿಸ್ಗಳಿಗೂ ಕೂಡ ಅನಾರೋಗ್ಯ ಕಾರಣ ಹೇಳಿ ರೋಷನ್ ಬೇಗ್ ವಿಚಾರಣೆಗೆ ಗೈರಾಗಿದ್ದರು.

ರಾಜ್ಯದಲ್ಲಿ ಇತ್ತೀಚಿಗೆ ಬೆಳಕಿಗೆ ಬಂದಿದ್ದ ಬಹುಕೋಟಿ ವಂಚನೆ ಪ್ರಕರಣ ಅಂದ್ರೇ, ಅದು ಐಎಂಎ ವಂಚನೆ ಪ್ರಕರಣ. ಇಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮನ್ಸೂರ್ ಖಾನ್ ಅವರನ್ನು ಬಂಧಿಸಿ, ಜೈಲಿಗೆ ಕಳಿಸಲಾಗಿದೆ.

ಸತತ ನಾಲ್ಕು ಬಾರಿ ನೋಟೀಸ್ ನೀಡಿದ್ದರೂ, ರೋಷನ್ ಬೇಗ್ ಮಾತ್ರ ಎಸ್ ಐ ಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಇಂದು ಕೂಡ ನಾಲ್ಕನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರೂ, ವಿಚಾರಣೆಗೆ ಹಾಜರಾಗದೇ ಗೈರು ಆಗಿದ್ದಾರೆ. ವಿಚಾರಣೆಗೆ ಗೈರು ಹಾಜರಿ ಬಗ್ಗೆಯೂ ಎಸ್ ಐ ಟಿ ಪೊಲೀಸರಿಗೆ ಯಾವುದೇ ಕಾರಣ ಕೂಡ ನೀಡಿಲ್ಲ. ಹೀಗಾಗಿ ಮುಂದಿನ ವಿಚಾರಣೆ ವೇಳೆಗೆ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದ್ದು, ಅದಕ್ಕೂ ಮೊದಲು ವಿಚಾರಣೆಗೆ ಹಾಜರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ