ಕ್ಯಾಪ್ಟನ್ ಕೊಹ್ಲಿ, ರೋಹಿತ್ ನಡುವಿನ ಅಂತರ್ಯುದ್ಧ: ಕೊನೆಗೂ ಮೌನ ಮುರಿದ ಹಿಟ್ ಮ್ಯಾನ್ ರೋಹಿತ್

ವಿಶ್ವಕಪ್ ಬಳಿಕ ಟೀಮ್ ಇಂಡಿಯಾದೊಳಗೆ ನಡೆದ ಅಂತರ್ಯುದ್ಧ ಜಗಜ್ಜಾಹೀರಾಗಿತ್ತು. ಕ್ಯಾಪ್ಟನ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ನಡೆದ ಗ್ಯಾಂಗ್ ವಾರ್ ಭಾರತ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆ ಮಾಡುವಂತೆ ಮಾಡಿತ್ತು. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಸೋಶಿಯಲ್ ಮೀಡಿಯಾದಲ್ಲಿ ರೋಹಿತ್ ಶರ್ಮಾ, ವಿರಾಟ್ ಹಾಗೂ ಅನುಷ್ಕಾ ಶರ್ಮಾರನ್ನ ಅನ್ ಫಾಲೋ ಮಾಡಿದ್ದು.. ಅದಕ್ಕೆ ಅನುಷ್ಕಾ ಶರ್ಮ ದ್ವಂದ್ವರ್ಥದಲ್ಲಿ ಸ್ಟೇಟಸ್ ಹಾಕಿದ್ದು ಎಲ್ಲವೂ ಸರಿಯಿಲ್ಲ ಅನ್ನೋದಕ್ಕೆ ಪುಷ್ಠಿ ನೀಡಿತ್ತು.

ಗ್ಯಾಂಗ್ ವಾರ್ಗೆ ತೇಪೆ ಹಚ್ಚಿದ್ದ ಕ್ಯಾಪ್ಟನ್ ಕೊಹ್ಲಿ..!
ವಿಶ್ವಕಪ್ ಮುಗಿದ ನಂತರ ರೋಹಿತ್ ಜೊತೆ ನಡೆದ ಗ್ಯಾಂಗ್ ವಾರ್ ಬಗ್ಗೆ ವಿವರ ನೀಡಲು ಕೊನೆಗೂ ವಿರಾಟ್ ಕೊಹ್ಲಿಯೇ ಬರಬೇಕಾಯಿತು. ತನ್ನ ಮತ್ತು ರೋಹಿತ್ ನಡುವೆ ಯಾವುದೇ ವೈಮನಸ್ಸು ಇಲ್ಲ. ರೋಹಿತ್ ಚೆನ್ನಾಗಿ ಆಡಿದಾಗಲೆಲ್ಲ ಹಾಡಿ ಹೊಗಳಿದ್ದೇನೆ ಅಂತಾ ಕೊಹ್ಲಿ ವಿಂಡೀಸ್ ಸರಣಿಗೂ ಮುನ್ನ ಹೋಗುವಾಗ ಹೇಳಿದ್ದರು.

ಅಮೆರಿಕಾದಲ್ಲಿ ಬಯಲಾಯ್ತು ಕೊಹ್ಲಿ, ರೋಹಿತ್ ನಡುವಿನ ಅಸಲಿ ಕತೆ
ಕೆರೆಬಿಯನ್ನರ ನಾಡಿಗೆ ತೆರೆಳುವ ಮುನ್ನ ನನ್ನ ರೋಹಿತ್ ನಡುವೆ ಏನಿಲ್ಲ ಏನಿಲ್ಲ ಎಂದು ಹೇಳಿ ಕೊಹ್ಲಿ ಎಲ್ಲರನ್ನ ನಂಬಿಸಿದ್ರು. ಆದ್ರೆ ಅಮೇರಿಕಾಕ್ಕೆ ಹೋದಾಗ ಅಂತರ್ಯುದ್ಧ ಮತ್ತೆ ಸ್ಫೋಟಗೊಂಡಿದೆ. ಕೊಹ್ಲಿ ತೆಗೆದ ಸೆಲ್ಫಿಯಲ್ಲಿ ಹಿಟ್ಮ್ಯಾನ್ ರೋಹಿತ್ ಇರಲಿಲ್ಲ. ರೋಹಿತ್ ತೆಗೆದ ಫೋಟೋದಲ್ಲಿ ಕೊಹ್ಲಿ ಇರಲಿಲ್ಲ. ಏನೋ ನಡೆಯುತ್ತಿದೆ ಅನ್ನೋದಕ್ಕೆ ತಂಡದ ಕೆಲವು ಆಟಗಾರರು ಕೊಹ್ಲಿ ಜೊತೆಗಿದ್ರೆ ಇನ್ನು ಕೆಲವು ಆಟಗಾರರು ರೋಹಿತ್ ಜೊತೆ ಕಾಣಿಸಿಕೊಂಡು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ರು.

 

 

 

 

 

 

 

 

 

 

 

 

 

 

ಕೊಹ್ಲಿ-ರೋಹಿತ್ ಒಳ ಜಗಳಕ್ಕೆ ರಿತಿಕಾ ಕಾರಣನಾ..?
ವೆಸ್ಟ್ ಇಂಡೀಸ್ ಸರಣಿಗಾಗಿ ಟೀಂ ಇಂಡಿಯಾ ತೆರಳಿದೆ. ಈ ಮಧ್ಯೆ ರೋಹಿತ್ ಶರ್ಮಾ ಪತ್ನಿ ಸಜ್ದೇ ಹೆಸರು ತಳಕು ಹಾಕಿಕೊಂಡಿದೆ. 2010ರಲ್ಲಿ ಐಪಿಎಲ್ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ರಿತಿಕಾರನ್ನು ಭೇಟಿಯಾಗಿದ್ದರು. ಕಂಪನಿಯ ಉದ್ಯೋಗಿಯಾಗಿದ್ದ ರಿತಿಕಾ ಕೊಹ್ಲಿಯ ವ್ಯವಹಾರ ನೋಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೇ ಮೂವಿ ಡೇಟ್, ಡಿನ್ನರ್ ಡೇಟ್ ಗೆ ಕೂಡ ಹೋಗುತ್ತಿದ್ದರು ಎನ್ನಲಾಗಿದೆ. ಹೀಗಾಗಿಯೇ ಹಲವು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಈ ಎಲ್ಲ ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈಗ ಹಳೆಯ ವಿಚಾರವೇ ಕೊಹ್ಲಿ ಮತ್ತು ರೋಹಿತ್ ಜಗಳಕ್ಕೆ ಕಾರಣ ಅಂತಾ ಹೇಳಲಾಗುತ್ತಿದೆ.

ಕೊನೆಗೂ ಮೌನ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಕ್ಯಾಪ್ಟನ್ ಕೊಹ್ಲಿ ಮತ್ತು ರೋಹಿತ್ ನಡುವಿನ ಮುನಿಸು ಬಟಾಬಯಲಾಗಿದ್ದು ಆಯ್ತು. ಇದಕ್ಕೆ ಕ್ಯಾಪ್ಟನ್ ಕೊಹ್ಲಿ ಉತ್ತರ ಕೊಟ್ಟಿದ್ದು ಆಯ್ತು. ಇದೀಗ ಸ್ವತಃ ಹಿಟ್ಮ್ಯಾನ್ ರೋಹಿತ್ ಶರ್ಮಾ ಈ ಬಗ್ಗೆ ಮೌನ ಮುರಿದಿದ್ದಾರೆ. ಅದು ಟ್ವೀಟ್ನಲ್ಲೆ ಅನ್ನೋದೇ ವಿಶೇಷ..

ರೋಹಿತ್ ಟ್ವೀಟ ನಲ್ಲಿ  ನಾನು ಪ್ರತಿಬಾರಿ ಕಣಕ್ಕಿಳಿದಾಗ ಕೇವಲ ನನ್ನ ತಂಡಕ್ಕಾಗಿ ಆಡಲ್ಲ . ಇಡೀ ದೇಶಕ್ಕಾಗಿ ಆಡುತ್ತೇನೆ ಎಂದು ರೋಹಿತ್ ಶರ್ಮಾ ಬರೆದುಕೊಂಡಿದ್ದಾರೆ.

ರೋಹಿತ್ ಶರ್ಮಾ ಹೀಗೆ ಟ್ವೀಟರ್ನಲ್ಲಿ ಬರೆದುಕೊಂಡಿದ್ದು ಇನ್ನಷ್ಟು ಅನುಮಾನವಗಳು ಹೆಚ್ಚಾಗುವಂತೆ ಮಾಡಿದೆ. ನನ್ನ ಮತ್ತು ವಿರಾಟ್ ನಡುವೆ ಏನು ಇಲ್ಲ ಅಂದಿದ್ರೆ ಎಲ್ಲವೂ ಮುಗಿದೂ ಹೋಗುತ್ತಿತ್ತು. ನಾನು ತಂಡಕ್ಕಾಗಿ ಆಡುತ್ತಿಲ್ಲ ದೇಶಕ್ಕಾಗಿ ಆಡುತ್ತಿದ್ದೇನೆ ಅಂದ್ರೆ ಇದರ ಅರ್ಥ ಏನು. ಕೊಹ್ಲಿ ನಾಯಕತ್ವದಲ್ಲಿ ಆಡಲು ಇಷ್ಟವಿಲ್ಲ ಅನ್ನೋದಾ ? ಈ ಟ್ವೀಟ್ ಬಗ್ಗೆ ಕ್ಯಾಪ್ಟನ್ ಕೊಹ್ಲಿ ಏನಾಂತಾರೆ. ತಂಡದಲ್ಲಿ ಮತ್ತೋಮ್ಮೆ ಗ್ಯಾಂಗ್ ವಾರ್ ನಡೆಯೋದ್ರಿಲ್ಲ ಯಾವುದೇ ಅನುಮಾನವಿಲ್ಲ.

ಒಟ್ಟಾರೆ ಕೊಹ್ಲಿ ಮತ್ತು ರೋಹಿತ್ ನಡುವಿನ ಅಂತರ್ಯುದ್ಧ ದಿನಕ್ಕೊಂದು ತಿರುವು ಪಡೆಯುತ್ತಿದೆ ಎಲ್ಲಿಗೆ ಮುಟ್ಟುತ್ತೋ ಗೊತ್ತಿಲ್ಲ . ಏನೆ ಜಗಳವಿದ್ದರೂ ಅದನ್ನ ಶೀಘ್ರವೇ ಬಗೆಹರಿಸಿಕೊಂಡು ಇಬ್ಬರು ತಂಡದ ಏಳಿಗೆಗಾಗಿ ಕೆಲಸ ಮಾಡಲಿ ಅನ್ನೋದೇ ಅಭಿಮಾನಿಗಳ ಆಶಯ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ