ಉನ್ನಾವೋ ಸಾಮೂಹಿಕ ಅತ್ಯಾಚಾರ-ತನಿಖೆಯನ್ನು ತೀವ್ರಗೊಳಿಸಿದ ಸಿಬಿಐ

ನವದೆಹಲಿ/ಲಕ್ನೋ, ಜು.31-ಅಪಘಾತದಲ್ಲಿ ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ತೀವ್ರ ಗಾಯಗೊಂಡು ವಕೀಲೆ ಮತ್ತು ಸಾಕ್ಷಿದಾರರು ಸಾವಿಗೀಡಾದ ಪ್ರಕರಣದ ಸಂಬಂಧ ತನಿಖೆಯನ್ನು ಕೇಂದ್ರೀಯ ತನಿಖಾದಳ ಸಿಬಿಐ ತೀವ್ರಗೊಳಿಸಿದೆ.

ಇಂದು ಈ ಪ್ರಕರಣದ ಸಂಬಂಧ ಆರೋಪಿ ಶಾಸಕ ಕುಲದೀಪ್ ಸಿಂಗ್ ಸೇನೆಗರ್ ಮತ್ತು ಇತರ ಹತ್ತು ಮಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದೆ.

ನಿನ್ನೆಷ್ಟಯೇ ಉತ್ತರ ಪ್ರದೇಶ ಸರ್ಕಾರ ಉನ್ನಾವೋ ಪ್ರಕರಣ ಮತ್ತು ಅಪಘಾತ ಘಟನೆ ಕುರಿತು ತನಿಖೆಗೆ ಸಿಬಿಐಗೆ ಒಪ್ಪಿಸುವುದಾಗಿ ತಿಳಿಸಿತ್ತು. ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ.

ಸಿಜೆಐ ತೀವ್ರ ಅಸಮಾಧಾನ:
ಈ ಮಧ್ಯೆ ಉನ್ನಾವೋ ಸಂತ್ರಸ್ತೆ ತಮಗೆ ಬರೆದಿರುವ ಪತ್ರ ಕೈ ಸೇರದೆ ಇರುವ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸುಪ್ರೀಂ ಕೋರ್ಟ್‍ನ ಪ್ರಧಾನ ಕಾರ್ಯದರ್ಶಿ ಅವರನ್ನು ಪ್ರಶ್ನಿಸಿರುವ ಸಿಜೆಐ ಈ ಪ್ರತ ತಮ್ಮ ಗಮನಕ್ಕೆ ಬರಲು ವಿಳಂಬಕ್ಕೆ ಕಾರಣವೇನು ಕೇಳಿದ್ದಾರೆ.

ಸಂತ್ರಸ್ತೆ ನನಗೆ ಪತ್ರ ಬರೆದಿದ್ದಾರೆ. ಆದರೆ ಅದು ನನ್ನ ಕೈ ಸೇರಿಲ್ಲ. ಈ ವಿಷಯವನ್ನು ನಾನು ವಿಷಾದಿಂದ ಹೇಳಬೇಕಾಗಿದೆ ಎಂದು ಬೇಸರದಿಂದ ನುಡಿದಿದ್ದಾರೆ.

ಲೋಕಸಭೆಯಲ್ಲಿ ಕೋಲಾಹಲ:
ಏತನ್ಮಧೆ ಉನ್ನಾವೋ ಅತ್ಯಾಚಾರ ಸಂತ್ರೆಸ್ತೆ ಅಪಘಾತ ಪ್ರಕರಣ ಲೋಕಸಭೆಯಲ್ಲಿ ಇಂದು ಕೂಡ ಪ್ರತಿಧ್ವನಿಸಿತು. ಇದು ಅಪಘಾತವಲ್ಲ, ಸಂತ್ರಸ್ತೆಯನ್ನು ಅಪಘಾತದ ಮೂಲಕ ಕೊಂದು ಪ್ರಕರಣದ ಸಾಕ್ಷ್ಯಾದಾರಗಳನ್ನು ಸಂಪೂರ್ಣ ನಾಶಪಡಿಸಲು ನಡೆದ ವ್ಯವಸ್ಥಿತ ಸಂಚು ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷದ ಸದಸ್ಯರು ಆರೋಪಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಿರತ ಸದಸ್ಯರನ್ನು ಸಮಾಧಾನ ಪಡಿಸಲು ಸಭಾಧ್ಯಕ್ಷ ಓಂ ಬಿರ್ಲಾ ಯತ್ನಿಸಿ ಈ ಬಗ್ಗೆ ಚರ್ಚೆಗೆ ನಂತರ ಅವಕಾಶ ನೀಡುವುದಾಗಿ ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಪ್ರತಿಪಕ್ಷದ ಸದಸ್ಯರು ಸಭಾ ತಾಗ್ಯ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ