ಪೊಲೀಸರಿಂದ ಸಿದ್ಧಾರ್ಥ್ ಅವರು ಬಳಸುತ್ತಿದ್ದ ಮೊಬೈಲ್ ಪತ್ತೆ

ಬೆಂಗಳೂರು, ಜು.31- ಉದ್ಯಮಿ ಸಿದ್ಧಾರ್ಥ್ ಅವರು ಬಳಸುತ್ತಿದ್ದ ಮೊಬೈಲ್ ಸಿಕ್ಕಿದ್ದು, ಮಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇಂದು ಮುಂಜಾನೆ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾದ ಸಂದರ್ಭದಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ ಅವರು ಬಳಸುತ್ತಿದ್ದ ಮೊಬೈಲ್ ಪತ್ತೆಯಾಗಿದೆ.

ಮಂಗಳೂರು-ಕೇರಳ ರಸ್ತೆಯಲ್ಲಿನ ನೇತ್ರಾವತಿ ನದಿ ಸೇತುವೆ ಬಳಿ ಕಾರಿನಿಂದ ಇಳಿಯುವ ಮುನ್ನ ಸಿದ್ಧಾರ್ಥ್ ಅವರು ಮೊಬೈಲ್‍ನಲ್ಲಿ ಮತ್ತೊಬ್ಬರೊಂದಿಗೆ ಇಂಗ್ಲಿಷ್‍ನಲ್ಲಿ ಮಾತನಾಡುತ್ತ ಸಾರಿ… ಸಾರಿ… ಎಂದು ಹೇಳುತ್ತಿದ್ದರೆಂದು ಪೊಲೀಸರಿಗೆ ಕಾರಿನ ಚಾಲಕ ತಿಳಿಸಿದ್ದಾರೆ.

ಈ ಮಾಹಿತಿ ಆಧರಿಸಿ, ಕಾರಿನಿಂದ ಇಳಿಯುವ ಮುನ್ನ ಯಾರೊಂದಿಗೆ ಇಂಗ್ಲಿಷ್‍ನಲ್ಲಿ ಸಿದ್ಧಾರ್ಥ್ ಮಾತನಾಡುತ್ತಿದ್ದರು ಎಂಬ ಬಗ್ಗೆ ತನಿಖಾ ತಂಡ ತನಿಖೆ ನಡೆಸುತ್ತಿದ್ದು, ಸಿದ್ಧಾರ್ಥ್ ಅವರ ಮೊಬೈಲ್ ಪತ್ತೆಯಾಗಿರುವುದರಿಂದ ತನಿಖೆಗೆ ಮತ್ತಷ್ಟು ಸಹಕಾರಿಯಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ