ಬಹುಕೋಟಿ ಡಾಲರ್‍ಗಳ ನಕಲಿ ಯೋಜನೆ ಪ್ರಕರಣ-ಶಿವಾನಂದ್ ಮಹಾರಾಜ್‍ಗೆ 20 ವರ್ಷ ಜೈಲು ಶಿಕ್ಷೆ

ನ್ಯೂಯಾರ್ಕ್,ಜು.30- ಬಹುಕೋಟಿ ಡಾಲರ್‍ಗಳ ನಕಲಿ ಯೋಜನೆ ಮೂಲಕ ವಂಚನೆ ಎಸಗಿದ್ದ ಭಾರತೀಯ ಮೂಲದ ಐಟಿ ಸಲಹೆಗಾರರನಿಗೆ ಇಲ್ಲಿನ ನ್ಯಾಯಾಲಯ 20 ವರ್ಷದ ಜೈಲು ಶಿಕ್ಷೆ ವಿಧಿಸಿದೆ.

ನ್ಯೂಜೆರ್ಸಿ ಮೂಲದ ಶಿವಾನಂದ್ ಮಹಾರಾಜ್(39) ಶಿಕ್ಷೆಗೊಳಗಾಗಿರುವ ಐಟಿ ಸಲಹೆಗಾರ.

ಈತ ನೌಕರರ ಫಲಾನುಭವಿ ಯೋಜನೆಗೆ ಸಂಬಂಧಿಸಿದಂತೆ ಲಂಚ ರುಷುವತ್ತು ಹಾಗೂ ವಂಚನೆ ಪ್ರಕರಣಗಳಲ್ಲಿ ಆಪಾದನೆಗಳು ಸಾಬೀತಾದ ಹಿನ್ನೆಲೆಯಲ್ಲಿ ಈತ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಡಿಸೆಂಬರ್‍ನಿಂದ ಶಿಕ್ಷೆಗೊಳಪಡಲಿದ್ದಾನೆ ಎಂದು ಅಟಾರ್ನಿ ಜೆಫ್ರಿ ಬರ್ಮನ್ ತಿಳಿಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಮಹಾರಾಜ್‍ಗೆ ಸಹಕಾರ ನೀಡಿದ್ದ ಪಿಂಚಿಣಿ ಮತ್ತು ಆರೋಗ್ಯ ಲಾಭ ನಿಧಿಯ ಮಾಹಿತಿ ತಂತ್ರಜ್ಞಾನದ ನಿರ್ದೇಶಕಎನ್ರಿಕ್ ರುಬಾನೋ ಅವರು ಕೂಡ ತಮ್ಮ ತಪ್ಪೊಪ್ಪಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.

ಹಲವಾರು ವರ್ಷಗಳಿಂದ, ಮಾಹಿತಿ ತಂತ್ರಜ್ಞಾನದ ಉದ್ಯೋಗಕ್ಕಾಗಿ ನೂರಾರು ತಪಶೀಲು ಅರ್ಜಿಗಳಿಗೆ ಅನುಮೋದನೆ ನೀಡಲು ಶಿವಾನಂದ್ ಮಹಾರಾಜ್ ಪಿಂಚಣಿ ಮತ್ತು ಆರೋಗ್ಯ ನಿಧಿಯಲ್ಲಿ ಅಧಿಕಾರಿಗಳಿಗೆ ಪ್ರಲೋಭನೆ ಮಾಡಿ ಲಂಚ ನೀಡಿದ್ದರು.

ಶ್ರಮಿಕ ವರ್ಗದ ಲಕ್ಷಾಂತರ ಡಾಲರ್‍ಗಳನ್ನು ಆರೋಗ್ಯ ಮತ್ತು ನಿವೃತ್ತಿ ಪ್ರಯೋಜನಗಳ ಯೋಜನೆ ಸೋಗಿನಲ್ಲಿ ವಂಚಿಸಿದ್ದಕ್ಕಾಗಿ ಈಗ ಮಹಾರಾಜ್ ಶಿಕ್ಷೆಗೊಳಗಾಗಿದ್ದಾರೆ ಎಂದು ಬರ್ಮನ್ ತಿಳಿಸಿದ್ದಾರೆ.

ಮ್ಯಾನ್ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಮಂಡಿಸಲಾದ ದೋಷಾರೋಪಣೆ ಪಟ್ಟಿ ಮತ್ತು ಸಾಕ್ಷಾಧ್ಯಾರಗಳಲ್ಲಿರುವ ಆರೋಪಗಳ ಪ್ರಕಾರ, 2009ರಿಂದ 2015 ರವರೆಗೆ, ರುಬಾನೊ ಅವರು ನಿಧಿಯ ಮಾಹಿತಿ ತಂತ್ರಜ್ಞಾನದ ಸಹ-ಮುಖ್ಯಸ್ಥರಾಗಿದ್ದರು, ತೃತೀಯ ಮಾರಾಟಗಾರರಿಂದ ಇನ್ವಾಯ್ಸ್ ಪಾವತಿಸಲು ಅನುಮೋದನೆ ನೀಡುವ ಅಧಿಕಾರವನ್ನು ಹೊಂದಿದ್ದರು.

ಕನಿಷ್ಠ 2009 ರಿಂದ ಪ್ರಾರಂಭವಾಗಿ, 2015 ರವರೆಗೆ ಮುಂದುವರಿಯುತ್ತಾ, ಮಹಾರಾಜ್ ಮತ್ತು ರುಬಾನೊ ಒಂದು ಯೋಜನೆಯನ್ನು ರೂಪಿಸಿದ್ದರು. ಇದರಲ್ಲಿ ಮಹಾರಾಜ್ ಒಡೆತನದ ಮೂರು ವಿಭಿನ್ನ ಕಂಪನಿಗಳು( ಎಂದಿಗೂ ನಿರ್ವಹಿಸದ ಅಥವಾ ನೌಕರರು ನಿರ್ವಹಿಸದ) ಮಾಹಿತಿ ತಂತ್ರಜ್ಞಾನ ಸೇವೆಗಳಲ್ಲಿ ಲಕ್ಷಾಂತರ ಡಾಲರ್‍ಗಳಿಗೆ ಹಣದ ಇನ್‍ವಾಯ್ಸ್‍ಗಳಿಗೆ ಸಲ್ಲಿಸಿದವು.

ಮಾಹಿತಿ ತಂತ್ರಜ್ಞಾನದ ಸಹ-ಮುಖ್ಯಸ್ಥರಾಗಿರುವ ರುಬಾನೊ ಇನ್‍ವಾಯ್ಸ್‍ಗಳನ್ನು ಅನುಮೋದಿಸಲು ಮಹಾರಾಜ್‍ನಿಂದ ಕಿಕ್‍ಬ್ಯಾಕ್ ಪಡೆದಿದ್ದರು.

ಹೀಗೆ ನೂರಾರು ಇನ್‍ವಾಯ್ಸ್(ತಪಶೀಲು)ಗಳನ್ನು ಸಲ್ಲಿಸುವ ಮೂಲಕ ಮತ್ತು ಹೆಚ್ಚುವರಿ ಅಕ್ರಮವಾಗಿ ಆದಾಯವನ್ನು ಪಡೆಯಲು ಇನ್ನೊಬ್ಬನನ್ನು ನೇಮಿಸಿಕೊಳ್ಳುವ ಮೂಲಕ, 2 ದಶಲಕ್ಷ ಡಾಲರ್‍ಗಿಂತ ಹೆಚ್ಚಿನ ಮೊತ್ತವನ್ನು ಅಕ್ರಮವಾಗಿ ಪಡೆದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ