ಸಿದ್ಧಾರ್ಥ್ ಅವರ ಸಾವಿನ ಹಿನ್ನೆಲೆ-ಬೆಂಗಳೂರಿಗೆ ಆಗಮಿಸಿದ ಮಂಗಳೂರು ಪೊಲೀಸ್ ಅಧಿಕಾರಿಗಳ ತಂಡ

ಬೆಂಗಳೂರು, ಜು.31- ಉದ್ಯಮಿ ಸಿದ್ಧಾರ್ಥ್ ಅವರ ಸಾವಿನ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಅಧಿಕಾರಿಗಳ ತಂಡವೊಂದು ಬೆಂಗಳೂರಿಗೆ ಆಗಮಿಸಿದೆ.

ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಕೆಫೆ ಕಾಫಿ ಡೇ ಕೇಂದ್ರ ಕಚೇರಿಗೆ ಈ ತಂಡ ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಸಿದ್ಧಾರ್ಥ್ ಅವರು ಈ ಕೇಂದ್ರ ಕಚೇರಿಯಲ್ಲಿ ಹೆಚ್ಚು ಕಾರ್ಯನಿರ್ವಹಿಸುತ್ತಿದ್ದರು.ಜು.29ರಂದು ಕೇಂದ್ರ ಕಚೇರಿಗೆ ಸಿದ್ಧಾರ್ಥ್ ಅವರು ಬಂದು ನಂತರ ಮಂಗಳೂರಿಗೆ ತೆರಳಿದ್ದರು.

ಈ ಹಿನ್ನೆಲೆಯಲ್ಲಿ ಮಂಗಳೂರು ನಗರದ ಡಿಸಿಪಿ ಲಕ್ಷ್ಮಿ ಗಣೇಶ್ ನೇತೃತ್ವದ ತಂಡ ಈ ಕಚೇರಿಗೆ ಬಂದು ಪರಿಶೀಲಿಸಿ ಇಲ್ಲಿನ ನೌಕರರಿಂದ ಹಲವು ಮಾಹಿತಿಗಳನ್ನು ಪಡೆದುಕೊಂಡಿದೆ. ಈ ತಂಡದಲ್ಲಿ ಐದಾರು ಮಂದಿ ಅಧಿಕಾರಿಗಳಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ