ಅಗಸ್ಟಾ ವೆಸ್ಟ ಲ್ಯಾಂಡ್ ಹಗರಣ ಪ್ರಕರಣ-ಮಧ್ಯಪ್ರದೇಶ ಮುಖ್ಯಮಂತ್ರಿ ಸಂಬಂಧಿಗೆ ಸೇರಿದ ಬೇನಾಮಿ ಷೇರು ವಶ

ನವದೆಹಲಿ,ಜು.30- ಕೋಟ್ಯಂತರ ರೂ.ಗಳ ಅಗಸ್ಟಾ ವೆಸ್ಟ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಬೆನ್ನಟ್ಟಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರ ಆಪ್ತ ಸಂಬಂಧಿಗೆ ಸೇರಿದ 254ಕೋಟಿ ರೂ. ಮೌಲ್ಯದ ಬೇನಾಮಿ ಷೇರನ್ನು ವಶಪಡಿಸಿಕೊಂಡಿದ್ದಾರೆ.

ರೀತುಲ್ ಪುರಿ ಅವರಿಗೆ ವಿದೇಶಿ ನೇರ ಬಂಡವಾಳ ರೂಪದಲ್ಲಿ 254ಕೋಟಿ ರೂ. ಮೌಲ್ಯದ ಷೇರುಗಳು (ಸಂಜೆಯ ರಹಿತ ಕಡ್ಡಾಯ ಆಧ್ಯತಾ ಷೇರು-ಸಿಸಿಸಿಎಸ್) ಸ್ವೀಕೃತವಾಗಿದ್ದವು.

ಈ ಅಕ್ರಮ ವಹಿವಾಟು ಕುರಿತು ತನಿಖೆ ತೀವ್ರಗೊಳಿಸಿದ್ದ ಐಟಿ ಅಧಿಕಾರಿಗಳು ಇಂದು ಬೇನಾಮಿ ಆಸ್ತಿ ಕಾಯಿದೆಗಳ ನಿಯಮಗಳ ಅಡಿ ಪುರಿಗೆ ಸೇರಿದ್ದ ಈ ಷೇರುಗಳನ್ನು ವಶ ಪಡಿಸಿಕೊಂಡಿದ್ದಾರೆ. ಈ ಬೆಳವಣಿಗೆಯಿಂದ ಮುಖ್ಯಮಂತ್ರಿ ಕಮಲನಾಥ್‍ಗೆ ಭಾರೀ ಮುಖಭಂಗವಾದಂತಾಗಿದೆ.

ರೀತುಲ್ ಪುರಿ ಅವರ ತಂದೆ ದೀಪಕ್ ಪುರಿ ಮೊಸರ್‍ಬಾಯಿರ್ ಸಂಸ್ಥೆಯ ಒಡೆಯರು ಅವರ ಸಮೂಹ ಸಂಸ್ಥೆಗಳಲ್ಲಿ ಒಂದಾದ ಆಪ್ಟಿಮಾ ಕಂಪನಿಯ ಮೂಲಕ ಪುರಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಲಂಚದ ರೂಪವಾಗಿ 254ಕೋಟಿ ರೂ.ಗಳನ್ನು ಸಿಸಿಸಿಎಸ್ ಷೇರುಗಳ ರೂಪದಲ್ಲಿ ಪಡೆದಿದ್ದರು.

ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು ಕೋರ್ಟ್ ಸೂಚನೆ ಮೇರೆಗೆ ಐಟಿ ಅಧಿಕಾರಿಗಳು ಪುರಿಗೆ ಸೇರಿದ್ದ 254ಕೋಟಿ ರೂ. ಮೌಲ್ಯದ ಅಕ್ರಮ ಮತ್ತು ಬೇನಾಮಿ ಈಕ್ವಿಟ್‍ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ