ಕ್ಯಾಪಿಟಲ್ ಗ್ರಂಥದ ಕನ್ನಡಾನುವಾದದ ಬಂಡವಾಳ ಕೃತಿ ಬಿಡುಗಡೆ

ಬೆಂಗಳೂರು, ಜು.30-ಕಾರ್ಲ್‍ಮಾಕ್ರ್ಸ್ ಅವರ ಕ್ಯಾಪಿಟಲ್ ಗ್ರಂಥವು ಕನ್ನಡಕ್ಕೆ ಅನುವಾದಗೊಂಡು ಬಂಡವಾಳ ಎಂಬ ಹೆಸರಿನಿಂದ ಕೃತಿ ಲೋಕಾರ್ಪಣೆಗೊಳ್ಳುತ್ತಿದೆ.

ಈಗಾಗಲೇ ಸುಮಾರು 18 ಭಾಷೆಗಳಲ್ಲಿ ಗ್ರಂಥವು ಪ್ರಕಟಗೊಂಡಿದ್ದು, ಆಗಸ್ಟ್ 2 ರಂದು ಸಂಜೆ 4 ಗಂಟೆಗೆ ನಗರದ ಮಹಾರಾಣಿ ವಿಜ್ಞಾನ ಕಾಲೇಜು ಪಕ್ಕದಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕನ್ನಡಾನುವಾದದ ಬಂಡವಾಳ ಕೃತಿ ಬಿಡುಗಡೆಗೊಳ್ಳಲಿದೆ.

ಪ್ರೊ.ಬರಗೂರು ರಾಮಚಂದ್ರಪ್ಪನವರು ಕೃತಿ ಬಿಡುಗಡೆ ಮಾಡಲಿದ್ದು, ಡಾ.ಸಿದ್ದನಗೌಡ ಪಾಟೀಲರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಎಲ್.ಹನುಮಂತಯ್ಯ ಸೇರಿದಂತೆ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕೃತಿ ಬಿಡುಗಡೆಯ ಪೂರ್ವಭಾವಿಯಾಗಿ ಬೆಳಗ್ಗೆ 10 ಗಂಟೆಯಿಂದ ಬಂಡವಾಳ 150 ವರ್ಷ ಮತ್ತು ಎಡಪಂಥದ ಮರುಶೋಧನೆ ಎಂಬ ವಿಷಯದ ವಿಚಾರಸಂಕಿರಣ ಹಮ್ಮಿಕೊಳ್ಳಲಾಗಿದೆ.

ಪ್ರೊ.ಪ್ರಭಾತ್ ಪಟ್ನಾಯಕ್, ಡಾ.ನಟರಾಜ್ ಹುಳಿಯಾರ್, ಡಾ.ಎಚ್.ಎಸ್.ಅನುಪಮ, ಕೆ.ಎನ್.ಉಮೇಶ್, ಡಾ.ಕಿರಣ್ ಗಾಜನೂರು, ಜಿ.ವಿ.ಶ್ರೀರಾಮರೆಡ್ಡಿ, ಜಿ.ರಾಜಶೇಖರ್, ಜಿ.ರಾಜಶೇಖರ್, ಡಾ.ಬಿ.ಎಂ.ಪುಟ್ಟಯ್ಯ, ವಸಂತರಾಜ, ಪ್ರೊ.ವಿ.ಎನ್.ಲಕ್ಷ್ಮೀನಾರಾಯಣ ಸೇರಿದಂತೆ ಮುಂತಾದವರು ಸಂಕಿರಣದಲ್ಲಿ ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಲ್‍ಮಾಕ್ರ್ಸ್ ಅವರ ಜನ್ಮದ್ವಿಶತಾಬ್ಧಿ ಮತ್ತು ದಾಸ್ ಕ್ಯಾಪಿಟಲ್‍ಗೆ 150 ವರ್ಷ ತುಂಬಿದ ನೆನಪಿನಲ್ಲಿ ಬಂಡವಾಳ ಎಂಬ ಹೆಸರಿನಲ್ಲಿ ಕೃತಿಯನ್ನು ಪ್ರಗತಿಪರ ಪುಸ್ತಕಗಳ ಪ್ರಮುಖ ಪ್ರಕಾಶಕರಾದ ನವಕರ್ನಾಟಕ ಮತ್ತು ಕ್ರಿಯಾ ಮಾಧ್ಯಮ ಸಂಸ್ಥೆ ಜಂಟಿಯಾಗಿ ಪ್ರಕಟಿಸುತ್ತಿದೆ.

ಹಿರಿಯ ಲೇಖಕ ಮತ್ತು ಚಿಂತಕರಾದ ಡಾ.ಜಿ.ರಾಮಕೃಷ್ಣ, ಜಿ.ರಾಜಶೇಖರ್, ವಿ.ಎನ್.ಲಕ್ಷ್ಮೀನಾರಾಯಣ್, ಟಿ.ಎಸ್.ವೇಣುಗೋಪಾಲ್, ನಗರಗೆರೆ ರಮೇಶ್ ಡಾ.ಬಿ.ಆರ್.ಮಂಜುನಾಥ್ ಸೇರಿದಂತೆ ಇಪ್ಪತ್ತು ಹಿರಿಯ ಪರಿಣಿತರು ಒಂದು ವರ್ಷಕ್ಕೂ ಹೆಚ್ಚು ಕಾಲದ ಪರಿಶ್ರಮದಲ್ಲಿ ಕೃತಿಯನ್ನು ಸಿದ್ಧಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ