ಪಾಕಿಸ್ತಾನ ಕಾರ್ಗಿಲ್‍ನಂತಹ ಯುದ್ಧದ ದುಸ್ಸಾಹಕ್ಕೆ ಕೈ ಹಾಕಿದರೆ ರಕ್ತಪಾತವಾಗುತ್ತದೆ

ಡ್ರಾಸ್ (ಕಾರ್ಗಿಲ್ ವಲಯ),ಜು.26– ಕಾರ್ಗಿಲ್ ಸಮರದಲ್ಲಿ ಪಾಕಿಸ್ತಾನಕ್ಕೆ ನಮ್ಮ ಸಮರ್ಥ ಯೋಧರು ಸರಿಯಾಗಿ ಬುದ್ದಿ ಕಲಿಸಿದ್ದಾರೆ . ಒಂದು ವೇಳೆ ಇಂಥ ದುಸ್ಸಾಹಸ ಪುನಾವರ್ತನೆಯಾದರೆ ಪಾಕ್ ಮೂಗಿನಲ್ಲಿ ಮತ್ತೆ ರಕ್ತ ಸೋರಲಿದೆ ಎಂದು ಭೂ ಸೇನೆ ಮುಖ್ಯಸ್ಥ ಜನರಲ್ ರಾವತ್ ಖಡಕ್ ವಾರ್ನಿಂಗ್ ಮಾಡಿದ್ದಾರೆ.

ಕಾರ್ಗಿಲ್ ವಿಜಯ ದಿವಸದ 20ನೇ ವರ್ಷಾಚರಣೆ ಸಂದರ್ಭದಲ್ಲಿ ಡ್ರಾಸ್‍ನಲ್ಲಿ ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ಸಮರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮತ್ತೆ ಪಾಕಿಸ್ತಾನ ಕಾರ್ಗಿಲ್‍ನಂತಹ ಯುದ್ಧದ ದುಸ್ಸಾಹಕ್ಕೆ ಕೈ ಹಾಕಿದರೆ ರಕ್ತಪಾತವೇ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

20 ವರ್ಷಗಳ ಹಿಂದೆ ಕಾರ್ಗಿಲ್ ಡ್ರಾಸ್, ಟೈಗರ್ ಹಿಲ್ಸ್ ಸೇರಿದಂತೆ ವಿವಿಧೆಡೆ ನಡೆದ ಯುದ್ಧದ ವೇಳೆ ಭಾರತ ಸೇನೆಯ ಅಗಾಧ ಶಕ್ತಿ ಸಾಮಥ್ರ್ಯದ ಅರಿವು ಪಾಕಿಸ್ತಾನಕ್ಕೆ ಚೆನ್ನಾಗಿ ಅರಿವಾಗಿದೆ. ನಮ್ಮ ವೀರಾಗ್ರಣಿಗಳು ಉಗ್ರರಿಗೆ ಮತ್ತು ಅವರಿಗೆ ಕುಮ್ಮಕ್ಕು ನೀಡಿದ ಪಾಕ್ ಯೋಧರಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ ಎಂದರು.

ಭಾರತೀಯ ಭೂ ಸೇನೆಯನ್ನು ಮತ್ತಷ್ಟು ಆಧುನೀಕರಣಗೊಳಿಸಿ ಅತ್ಯಂತ ಶಕ್ತಿಯುತ ಶಸ್ತ್ರಾಸ್ತ್ರಗಳನ್ನು ಹೊಂದುವ ಪ್ರಕ್ರಿಯೆ ಮುಂದುವರೆದಿದೆ. 2020ರ ವೇಳೆಗೆ ಹೋವಿಡ್ಜರ್ ಪಿರಂಗಗಿಗಳು, ಕೆ-9 ವಜ್ರ ಯುದ್ಧ ಟ್ಯಾಂಕರ್‍ಗಳು ದೇಶದಲ್ಲಿ ತಯಾರಾಗಿ ಸೇನಾ ಬತ್ತಳಿಕೆಗೆ ಸೇರ್ಪಡೆಯಾಗಲಿವೆ ಎಂದು ರಾವತ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ