ಮಿಸ್ಟರ್ ಕೂಲ್ ಧೋನಿ ಸದ್ಯ ನಿವೃತ್ತಿ ಆಗಲ್ಲ ವಿಂಡೀಸ್ ಸರಣಿಯನ್ನ ಮಹೇಂದ್ರ ಆಡಲ್ಲ..! ಬಿಸಿಸಿಐಗೆ ಮಿಸ್ಟರ್ ಕೂಲ್ ಧೋನಿ ಹೇಳಿದ್ದೇನು ?

ಟೀಮ್ ಇಂಡಿಯಾ ವಿಶ್ವಕಪ್ನಲ್ಲಿ ಸೋತಿದ್ದಾಯ್ತು . ಇದೀಗ ತಂಡದ ಮಿಸ್ಟರ್ ಕೂಲ್ ಧೋನಿ ನಿವೃತ್ತಿ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ವಿಶ್ವಕಪ್ನಲ್ಲಿ ಧೋನಿ ಹೇಳಿಕೊಳ್ಳುವಂತಹ ಪ್ರದರ್ಶನಕೊಡಲಿಲ್ಲ. ಈ ಕಾರಣಕ್ಕಾಗಿ ಕ್ರಿಕೆಟ್ ವಲಯ ಸೇದಂತೆ ಸಾರ್ವಜನಿಕ ವಲಯದಲ್ಲಿ ಧೋನಿ ನಿವೃತ್ತಿ ಬಗ್ಗೆ ಪರ ವಿರೋಧಗಳ ಚರ್ಚೆ ನಡೆದಿದ್ವು.
38 ವರ್ಷದ ಧೋನಿ ವಿಶ್ವಕಪ್ ನಂತರ ನಿವೃತ್ತಿಯಾಗ್ತಾರೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಆಯ್ಕೆ ಮಂಡಳಿ ಅಧ್ಯಕ್ಷ ಎಮ್ಎಸ್ಕೆ ಪ್ರಸಾದ್ ಧೋನಿ ನಮ್ಮ ಆಯ್ಕೆ ಅಲ್ಲ ಎಂದು ಹೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ರು. ಈ ಎಲ್ಲ ಬೆಳವಣಿಗೆಗಳನ್ನ ನೋಡುತ್ತಿದ್ದ ಅಭಿಮಾನಿಗಳು ಧೋನಿ ಆಟ ಮುಗೀತು ಎಂದೆ ಎಲ್ಲರೂ ಭಾವಿಸಿದ್ರು. ಇಷ್ಟೆಲ್ಲ ಚರ್ಚೆಗಳು ನಡೆಯುತ್ತಿದ್ರು ಮಹೇಂದ್ರ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಇದ್ದು ಬಿಟ್ಟಿದ್ರು.
ಧೋನಿ ವಿಶ್ವಕಪ್ ನಂತರ ನಿವೃತ್ತಿ ಘೋಷಿಸೋದಿಲ್ಲ ಅನ್ನೋದು ಈಗಾಗಲೆ ಸ್ಪಷ್ಟ ಆಗಿದೆ. ಇದು ಸಹಜವಾಗಿ ಧೋನಿ ಅಭಿಮಾನಿಗಳು ನಿಟ್ಟುಸಿರು ಬಿಡುವಂತಾಗಿದೆ. ವಿಶ್ವಕಪ್ ನಂತರವೂ ಇನ್ನು ಕೆಲವು ದಿನಗಳ ಕಾಲ ಧೋನಿ ಆಟವನ್ನ ಕಣ್ತುಂಬಿಕೊಳ್ಳಹುದು ಅನ್ನೋದು ಅವರ ಆಶಯವಾಗಿದೆ.
ಬಿಸಿಸಿಐಗೆ ಧೋನಿ ಅಭಿಮಾನಿಗಳದ್ದೇ ಭಯ
ಧೋನಿ ಬೇಗನೆ ನಿವೃತ್ತಿಯಾದಷ್ಟು ಬಿಸಿಸಿಐಗೆ ಒಳ್ಳೆಯದಾಗುತ್ತೆ. ಆದ್ರೆ ಬೇಗನೆ ನಿವೃತ್ತಿಯಾಗಿ ಎಂದು ಧೋನಿ ಬಳಿ ಹೇಳುವಂತಿಲ್ಲ ಯಾಕಂದ್ರೆ ಬಿಸಿಸಿಐಗೆ ಧೋನಿ ಅಭಿಮಾನಿಗಳ ಭಯ ಇದೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಧೋನಿ ಅಭಿಮಾನಿಗಳು ಬಿಸಿಸಿಐ ಅನ್ನ ತರಾಟೆಗೆ ತೆಗೆದುಕೊಳ್ಳುತ್ತಾರೆ . ಹೀಗಾಗಿ ಬಿಸಿಸಿಐ ನಿವೃತ್ತಿ ವಿಚಾರವನ್ನ ಧೋನಿಗೆ ಬಿಟ್ಟಿದೆ.
ವಿಂಡೀಸ್ ಪ್ರವಾಸ ಬಿಸಿಸಿಐ ಬಳಿ ಮಾತನಾಡಿದ ಮಹೇಂದ್ರ
ನಿವೃತ್ತಿ ಅಂಚಿನಲ್ಲಿರುವ ಟೀಮ್ ಇಂಡಿಯಾದ ಮಿಸ್ಟರ್ ಕೂಲ್ ಎಮ್.ಎಸ್.ಧೋನಿ ವಿಂಡೀಸ್ ಪ್ರವಾಸದಲ್ಲಿ ಆಡದಿರುವ ಕುರಿತು ಬಿಸಿಸಿಐ ಬಳಿ ಮಾತನಾಡಿದ್ದಾರೆ. ಬನ್ನಿ ಹಾಗಾದ್ರೆ ಮಹೇಂದ್ರ ವಿಂಡೀಸ್ ಆಡದಿರುವ ಕುರಿತು ಬಿಸಿಸಿಐಗೆ ಮಾತನಾಡಿದ್ದಾರೆ.
ನಾವು ಮೂರು ವಿಷಯಗಳ ಬಗ್ಗೆ ಸ್ಪಷ್ಟನೆ ಕೊಡುತ್ತೇವೆ. ಸದ್ಯ ಎಮ್.ಎಸ್.ಧೋನಿ ಕ್ರಿಕೆಟ್ನಿಂದ ನಿವೃತ್ತಿಯಾಗಲ್ಲ. ಧೋನಿ ಅವರು ಈ ಹಿಂದೆ ಒಪ್ಪಂದ ಮಾಡಿಕೊಂಡಿರುವಂತೆ ಎರಡು ತಿಂಗಳ ಕಾಲ ಪ್ಯಾರಾ ಮಿಲಿಟರಿಯಲ್ಲಿ ಸೇವೆ ಮಾಡಲಿದ್ದಾರೆ. ನಾವು ಧೋನಿ ಅವರ ನಿರ್ಧಾರವನ್ನ ನಾಯಕ ವಿರಾಟ್ ಕೊಹ್ಲಿ ಮತ್ತು ಆಯ್ಕೆ ಸಮತಿ ಮುಖ್ಯಸ್ಥ ಎಮ್.ಎಸ್.ಕೆ . ಪ್ರಸಾದ್ ಬಳಿ ತಿಳಿಸಿದ್ದೇವೆ.
38 ವರ್ಷದ ಧೋನಿ ನಿವೃತ್ತಿ ತೆಗೆದುಕೊಳ್ಳಲು ನಿರಾಕರಿಸಿರುವುದರಿಂದ ಇದೀಗ ಚೆಂಡು ಆಯ್ಕೆ ಮಂಡಳಿಯ ಅಂಗಳದಲ್ಲಿದೆ. ಇದನ್ನೆ ನೆಪವಾಗಿಟ್ಟುಕೊಂಡು ಧೋನಿಯನ್ನ ಆಯ್ಕೆ ಮಂಡಳಿ ವಿಂಡೀಸ್ ಸರಣಿಯಿಂದ ಕೈಬಿಟ್ಟಿದೆ. ಇನ್ನು ಆಯ್ಕೆ ಸಮಿತಿ ಮುಖ್ಯಸ್ಥ ಎಮ್.ಎಸ್.ಕೆ ಪ್ರಸಾದ್ ಕೆಲವು ದಿನಗಳ ಹಿಂದೆಯಷ್ಟೆ ಧೋನಿ ನಮ್ಮ ಆಯ್ಕೆ ಅಲ್ಲ ಅಂತಾ ಕಡ್ಡಿ ಮುರಿದಂತೆ ಮಾತನಾಡಿದ್ರು. ಹೀಗೆ ಎಮ್.ಎಸ್ಕೆ.ಪ್ರಸಾದ್ ಹೇಳುವುದರ ಹಿಂದೆ ತಂಡದ ಭವಿಷ್ಯದ ಬಗ್ಗೆ ಯೋಚಿಸುತ್ತಿರುವುದೇ ಕಾರಣವಾಗಿದೆ. ಆದರೆ ಈ ವಿಷಯದ ಬಗ್ಗೆ ಕ್ಯಾಪ್ಟನ್ ಕೊಹ್ಲಿ ಯಾವ ನಿಲುವನ್ನ ತೆಗೆದುಕೊಳ್ಳುತ್ತಾರೆ ಅನ್ನೋದರ ಮೇಲೆ ಸ್ಪಷ್ಟನೆ ನಿಂತಿದೆ.
ಒಟ್ಟಾರೆ ಧೋನಿ ಸಧ್ಯಕ್ಕೆ ನಿವೃತ್ತಿಯೋದಿಲ್ಲ ಅನ್ನೋದು ಸ್ಪಷ್ಟವಾಗಿದ್ದು ಇದುವರೆಗೂ ಇದ್ದ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದ್ದಾರೆ .

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ