ತಿರುಪತಿಗೆ ಬೆಂಗಳೂರಿನಿಂದ ಇದೇ 26ರಿಂದ 8ನೇ ವರ್ಷದ ಪಾದಯಾತ್ರೆ

ಬೆಂಗಳೂರು, ಜು.19-ತಿರುಪತಿಗೆ ಬೆಂಗಳೂರಿನಿಂದ 8ನೇ ವರ್ಷದ ಪಾದಯಾತ್ರೆಯನ್ನು ಶ್ರೀ ಬಾಲಾಜಿ ಪಾದಯಾತ್ರೆ ಬಲಿಜ ಟ್ರಸ್ಟ್ ವತಿಯಿಂದ ಇದೇ 26 ರಿಂದ ಆಯೋಜಿಸಲಾಗಿದೆ.
ಬೆಂಗಳೂರಿನಿಂದ ಹೊಸಕೋಟೆ ಮಾರ್ಗವಾಗಿ ಕೋಲಾರ, ಮುಳಬಾಗಿಲು, ಪಲಮನೇರು, ಚಿತ್ತೂರು, ಚಂದ್ರಗಿರಿ ಮಾರ್ಗ, ಶ್ರೀವಾರಿ ಮೆಟ್ಟಿಲು ಮೂಲಕ ಶ್ರೀ ವೆಂಕಟೇಶ್ವರ ದರ್ಶನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪಾದಯಾತ್ರಿಗಳಿಗೆ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಭೋಜನ, ತಂಗಲು ಸ್ಥಳಾವಕಾಶ ಹಾಗೂ ವೈದ್ಯಕೀಯ ಸೌಲಭ್ಯ ನೀಡಲಾಗುವುದು.
ನಗರದ ಬಳೇಪೇಟೆಯ ಶ್ರೀನಿವಾಸ ಮಂದಿರದಿಂದ ಪಾದಯಾತ್ರೆ ಇದೇ 26 ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಹೊರಡಲಿದೆ.
ಹೆಚ್ಚಿನ ಮಾಹಿತಿಗೆ ಜಿ.ಎಲ್.ಸಂಪಂಗಿರಾಮುಲು 9242314322, 8150972322 ಸಂಪರ್ಕಿಸಲು ಕೋರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ