ಮತ್ತೊಂದು ಮಹತ್ವದ ಹೆಜ್ಜೆಯಿಟ್ಟ ಅಮೆರಿಕಾ-ಭಾರತದ ಪ್ರತಿಭಾವಂತರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ

ವಾಷಿಂಗ್ಟನ್, ಜು.17– ಭಾರತದ ಪ್ರತಿಭಾವಂತರಿಗೆ ಅಮೆರಿಕದಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುತ್ತಿರುವ ಅಮೆರಿಕ ಈಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಅರ್ಹತೆ ಆಧಾರಿತ ಕಾನೂನುಬದ್ಧ ವಲಸೆ ಪ್ರಮಾಣವನ್ನು ಶೇ.57ಕ್ಕೆ ಹೆಚ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಗಂಭೀರ ಚಿಂತನೆ ನಡೆಸಿದೆ. ಇದು ಲಕ್ಷಾಂತರ ಪ್ರತಿಭಾವಂತ ಭಾರತೀಯರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.

ಟ್ರಂಪ್ ಅವರ ಅಳಿಯ ಕೂಡ ಆಗಿರುವ ರಾಷ್ಟ್ರಾಧ್ಯಕ್ಷರ ಹಿರಿಯ ಸಲಹೆಗಾರ ಜರೇಡ್ ಕುಷ್ಣರ್ ಈ ನಿಟ್ಟಿನಲ್ಲಿ ಕೆಲವೊಂದು ಮಹತ್ವದ ಸಲಹೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಅರ್ಹತೆ ಆಧಾರಿತ ಕಾನೂನುಬದ್ಧ ವಲಸೆಯನ್ನು ಶೇ.5ಪಟ್ಟು ಹೆಚ್ಚಿಸಲು ವರದಿಯಲ್ಲಿ ಪ್ರಸ್ತಾಪಿoಸಲಾಗಿದೆ. ಇದರಲ್ಲಿ ಅರ್ಧದಷ್ಟು ಪ್ರಮಾಣವನ್ನು ಉದ್ಯೋಗ ನಿರತ ಕುಟುಂಬದವರಿಗೆ ಕಲ್ಪಿಸುವ ಉದ್ದೇಶವೂ ಇದರಲ್ಲಿದೆ.

ಅಮೆರಿಕದ ಈ ಹೊಸ ನೀತಿ ಭಾರತ ಸೇರಿದಂತೆ ವಿವಿಧ ದೇಶಗಳ ಪ್ರತಿಭಾನ್ವಿತರು ಅಮೆರಿಕಕ್ಕೆ ತೆರಳಿ ಅಲ್ಲಿ ಉದ್ಯೋಗ ಮುಂದುವರಿಸಲು ಮತ್ತು ಆ ದೇಶದ ಆದಾಯ ಹೆಚ್ಚಿಸಲು ನೆರವಾಗಲಿದ್ದಾರೆ.

ಕಾನೂನುಬದ್ಧ ವಲಸಿಗರಿಗೆ ಅವಕಾಶ ನೀಡುವುದರಿಂದ ಅವರು ಅಮೆರಿಕಗೆ ತೆರಿಗೆಯನ್ನು ಪಾವತಿಸಲಿದ್ದು, ಇದರಿಂದ 10 ವರ್ಷಗಳ ಅವಧಿಯಲ್ಲಿ ತೆರಿಗೆ ರೂಪದಲ್ಲಿ 500 ಶತಕೋಟಿ ಡಾಲರ್ ಕ್ರೋಢೀಕರಿಸುವ ಉದ್ದೇಶ ಹೊಂದಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ