ಗುರುಬಲವಿದ್ದಾಗ ಎಂತ ಕ್ಲಿಷ್ಟಕರವಾದ ಸಮಸ್ಯೆಯೂ ಇತ್ಯರ್ಥವಾಗುತ್ತದೆ-ಯೋಗ ಶಿಕ್ಷಕಿ ಜಿ.ಪಿ.ಭಾರತಿ

ಬೆಂಗಳೂರು, ಜು.16- ಯಾವುದೇ ರಂಗವಾಗಲಿ ಗುರುವಿನ ಮಾರ್ಗದರ್ಶನ, ಬೋಧನೆ, ತರಬೇತಿಯಿಂದ ಯಶಸ್ಸಿನ ಹಾದಿಯ ಕಡೆ ಸಾಗಲು ಸಾಧ್ಯ ಎಂದು ಯೋಗ ಶಿಕ್ಷಕಿ ಜಿ.ಪಿ.ಭಾರತಿ ಅವರು ಅಭಿಪ್ರಾಯಪಟ್ಟರು.

ಹೆಗ್ಗನಹಳ್ಳಿ ಕ್ರಾಸ್ ಬಳಿ ಲಕ್ಷ್ಮಣನಗರದ ಇಂದಿರಾ ಫೌಂಡೇಷನ್ ಆವರಣದಲ್ಲಿ ಗುರುಪೌರ್ಣಿಮಾ ಅಂಗವಾಗಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಗುರುಬಲವಿದ್ದಾಗ ಎಂತಹ ಕ್ಲಿಷ್ಟಕರವಾದ ಸಮಸ್ಯೆಯೂ ಇತ್ಯರ್ಥವಾಗುತ್ತದೆ ಎಂಬುದನ್ನು ಪುರಾಣಗಳಿಂದ ತಿಳಿದಿದ್ದೇವೆ. ಈ ನಿಟ್ಟಿನಲ್ಲಿ ನಾವು ಗುರುವಿನ ಮಹತ್ವ ತಿಳಿದು ಗುರುವಿಗೆ ಪ್ರಥಮ ಸ್ಥಾನ ಎಂಬ ಅರ್ಥವನ್ನು ಅರಿತು ಗೌರವದಿಂದ ಕಂಡಾಗ ಎಂಥಹಾ ಗುರಿಯನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಬಡವರು, ಮಧ್ಯಮವರ್ಗ ಸೇರಿದಂತೆ ಎಲ್ಲ ಜನರು, ಆರೋಗ್ಯ, ನೆಮ್ಮದಿಯ ಜೀವನ ಕಂಡುಕೊಳ್ಳಬೇಕಾದರೆ ಪ್ರತಿಯೊಬ್ಬರೂ ಯೋಗ, ಪ್ರಾಣಾಯಾಮ, ಧ್ಯಾನವನ್ನು ಅಳವಡಿಕೊಳ್ಳಬೇಕು ಎಂದು ಹೇಳಿದರು.

ಯೋಗ ತರಬೇತಿದಾರ ಸುರೇಶ್ ಅಜ್ಜಂಪುರ ಮಾತನಾಡಿ ಯೋಗ ಗುರು ಭಾರತಿ ಜಿ.ಪಿ.ಅವರು ಸರ್ಕಾರಿ, ಖಾಸಗಿ ಶಾಲೆಗಳಿಗೆ ತೆರಳಿ ನೂರಾರು ವಿದ್ಯಾರ್ಥಿ, ಅಂಗವಿಕಲರು, ವೃದ್ಧರು, ಬುದ್ಧಿಮಾಂದ್ಯ ವ್ಯಕ್ತಿಗಳಿಗೆ ಸಲಹೆ, ಮಾರ್ಗದರ್ಶನ, ಯೋಗ, ಪ್ರಾಣಾಯಾಮ, ಧ್ಯಾನ ಹೇಳಿಕೊಡುತ್ತಿದ್ದಾರೆ ಎಂದರು.

ಯೋಗ ಶಿಕ್ಷಕಿ ಗೀತ, ಗೋವಿಂದಪ್ಪ, ಬೇಕರಿ ಮಾಲೀಕ ರಂಗಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ