ಶ್ರೀಲಂಕಾದಲ್ಲಿ ಮುಸ್ಲಿಂ ವಿವಾಹ ಹಾಗೂ ವಿಚ್ಚೇದನ ಕಾಯ್ದೆಗೆ ತಿದ್ದುಪಡಿ ತರಲು ಸಮ್ಮತಿ

ಶ್ರೀಲಂಕಾದಲ್ಲಿ ಮುಸ್ಲಿಂ ಸಂಸದರ ಗುಂಪೊಂದು, ವಿವಾಹದ ಕನಿಷ್ಟ ವಯಸ್ಸನ್ನು 18 ವರ್ಷಕ್ಕೆ ಬದಲಾಯಿಸುವುದು ಸೇರಿದಂತೆ ಮುಸ್ಲಿಂ ವಿವಾಹ ಹಾಗೂ ವಿಚ್ಚೇದನ ಕಾಯ್ದೆಗೆ ತಿದ್ದುಪಡಿ ತರಲು ಸಮ್ಮತಿಸಿದೆ. ಈ ಸಂಬಂಧ ಕರಡು ವರದಿಯೊಂದನ್ನು ಸಲ್ಲಿಸುವಂತೆ ಸಂಸದ ಫೈಜರ್ ಮುಸ್ತಫಾ ಅವರು, ಮುಸ್ಲಿಂ ಧಾರ್ಮಿಕ ವ್ಯವಹಾರಗಳ ಸಚಿವಾಲಯಕ್ಕೆ ಕೋರಿಕೆ ಸಲ್ಲಿಸಿರುವುದಾಗಿ ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.

ಕರಡು ವರದಿ ಸಂಬಂಧ ಸಚಿವ ಸಂಪುಟ ಚರ್ಚೆ ನಡೆಸಲಿದೆ. ವಿವಾಹಕ್ಕೊಳಪಡುವ ವಧು – ವರರ ವಯಸ್ಸು 18 ವರ್ಷ ಎಂದು ನಿಗದಿಪಡಿಸಬೇಕು ಎಂದು ಅಲ್ಲದೇ ವಿವಾಹವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ