ಹೊಸ ದಾಖಲೆ ಬರೆದು ಸರಣಿ ಶ್ರೇಷ್ಠರಾಗಿ ಹೊರ ಹೊಮ್ಮಿದ ಕೇನ್ ವಿಲಿಯಮ್ಸನ್

ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಯಶಸ್ವಿಯಾಗಿ ಫೈನಲ್’ವರೆಗೆ ಮುನ್ನಡೆಸಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಪರೂಪದ ದಾಖಲೆ ಬರೆದಿದ್ದಾರೆ. 12 ವರ್ಷಗಳ ಹಿಂದಿದ್ದ ಮಹೇಲ್ ಜಯವರ್ಧನೆ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಇದೀಗ ವಿಲಿಯಮ್ಸನ್ ಪಾಲಾಗಿದೆ.

 

 

 

 

 

 

 

 

 

 

 

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ದಶಕಗಳ ಹಿಂದೆ ನಿರ್ಮಾಣವಾಗಿದ್ದ ದಾಖಲೆಯನ್ನು ಕೇನ್ ಅಳಿಸಿಹಾಕಿದ್ದಾರೆ. ಹೌದು, ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ನಾಯಕ ಎನ್ನುವ ಖ್ಯಾತಿಗೆ ಕೇನ್ ವಿಲಿಯಮ್ಸನ್ ಪಾತ್ರರಾಗಿದ್ದಾರೆ. 549 ರನ್ ಬಾರಿಸುತ್ತಿದ್ದಂತೆ ಈ ಅಪರೂಪದ ದಾಖಲೆ ಕೇನ್ ವಿಲಿಯಮ್ಸನ್ ಪಾಲಾಗಿದೆ. ಈ ಮೊದಲು 2007ರಲ್ಲಿ ಶ್ರೀಲಂಕಾ ನಾಯಕ ಮಹೇಲಾ ಜಯವರ್ಧನೆ 458 ರನ್ ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಕೇನ್ ವಿಲಿಯಮ್ಸನ್ 9 ಇನಿಂಗ್ಸ್’ಗಳಲ್ಲಿ 578 ರನ್ ಬಾರಿಸುವ ಮೂಲಕ ತಮ್ಮ ದಾಖಲೆಯನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ