ಭ್ರಷ್ಟಚಾರ, ಕ್ರಿಮಿನಲ್ ದುರ್ನಡತೆ ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆ ಪ್ರಕರಣ-ರಾಷ್ಟ್ರಾದ್ಯಂತ ಸಿಬಿಐನಿಂದ ಬಿರುಸಿನ ಕ್ರಮ

ನವದೆಹಲಿ, ಜು.9-ಭ್ರಷ್ಟಾಚಾರ, ಕ್ರಿಮಿನಲ್ ದುರ್ನಡತೆ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಕರಣಗಳ ವಿರುದ್ಧ ಉಗ್ರ ಕೇಂದ್ರೀಯ ತನಿಖಾ ದಳ(ಸಿಬಿಐ) ರಾಷ್ಟ್ರಾದ್ಯಂತ ಬಿರುಸಿನ ಕ್ರಮ ಕೈಗೊಂಡಿದೆ.

ಹೊಸ ಪ್ರಕರಣಗಳ ಸಂಬಂಧ ಸಿಬಿಐ ಅಧಿಕಾರಿಗಳು 19 ರಾಜ್ಯಗಳ 110 ಸ್ಥಳಗಳ ಮೇಲೆ ಇಂದು ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸಿದೆ. ಈ ಸಂಬಂದ ಕೆಲವರನ್ನು ಬಂಧಿಸಿ ಅಕ್ರಮ ಶಸ್ತಾಸ್ತ್ರಗಳನ್ನು ವಶಪಡಿಸಿಕೊಂಡಿದ್ಧಾರೆ.

ಸಿಬಿಐ ಈ ಸಂಬಂದ ಹೊಸ 30 ಪ್ರಕರಣಗಳನ್ನು ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಿದೆ ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಇಂದು ಮುಂಜಾನೆಯಿಂದ ಆರಂಭವಾದ ರಾಷ್ಟ್ರಾದ್ಯಂತ ಶೋಧ ಕಾರ್ಯಾಚರಣೆ ರಾತ್ರಿವರೆಗೂ ಮುಂದುವರಿಯಲಿದೆ. ಕಾರ್ಯಾಚರಣೆ ಪೂರ್ಣಗೊಂಡ ನಂತರವಷ್ಟೇ ಈ ಬಗ್ಗೆ ಪರಿಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ಧಾರೆ.

ಸಿಬಿಐ ಈ ವಾರದಲ್ಲಿ ನಡೆಸಿದ ಎರಡನೇ ಬೃಹತ್ ಕಾರ್ಯಾಚರಣೆ ಇದಾಗಿದೆ. ಕಳೆದ ಮಂಗಳವಾರ ಸಿಬಿಐ ಅಧಿಕಾರಿಗಳು ಬ್ಯಾಂಕಿಂಗ್ ವಂಚನೆ ವಿರುದ್ಧ ಚಾಟಿ ಬಿಸಿ ದೇಶಾದ್ಯಂತ ದಾಳಿ ಮತ್ತು ಶೋಧ ನಡೆಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ