ಸೋನಾಲಿಕಾ ಟೈಗರ್ ಟ್ರ್ಯಾಕ್ಟರ್ ಮಾರುಕಟ್ಟೆಗೆ

ಬೆಂಗಳೂರು,ಜು.7- ಸೋನಾಲಿಕಾ ಕಂಪನಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಟೈಗರ್ ಸೀರಿಸ್‍ನ ಟ್ರ್ಯಾಕ್ಟರ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ನಗರದಲ್ಲಿ ನಡೆದ ಹೊಸ ವಿನ್ಯಾಸದಿಂದ ಕೂಡಿದ ಟ್ರಾಕ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸೋನಾಲಿಕಾ ಗ್ರೂಪ್‍ನ ಕಾರ್ಯ ನಿರ್ವಾಹಕ ನಿರ್ದೇಶಕ ರಾಮನ್ ಮಿಟ್ಟಲ್ ಯೂರೋಪಿನಲ್ಲಿ ಭಾರತೀಯ ರೈತರಿಗೆ ಅಗತ್ಯತೆಗೆ ಅನುಗುಣವಾಗಿ ವಿನ್ಯಾಸಗೊಂಡ 28 ಎಚ್‍ಪಿಯಿಂದ 65 ಎಚ್‍ಪಿ ವಿಭಾಗದ ಟ್ರಾಕ್ಟರ್‍ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.

ಆಧುನಿಕ ತಂತ್ರಜ್ಞಾನ ವಿಶ್ವಮಟ್ಟದ ಅರ್ಹತೆಗೆ ಸಮಾನವಾಗಿದೆ.ಟೈಗರ್ ಟ್ರ್ಯಾಕ್ಟರ್ ಕೊಳ್ಳುವ ರೈತರು ಇದರ ಅನುಭವ ಪಡೆಯಬಹುದು. ಅತಿಭಾರ, ಬ್ಯಾಟರಿ ಲೋ, ಕಳವಾದರೆ, ಮೀಟರ್ ರೀಡಿಂಗ್ ಹೀಗೆ ಹಲವು ರೀತಿಯ ಸಮಸ್ಯೆಗಳನ್ನು ಸುಲಭವಾಗಿ ಗೋಚರಿಸುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ