ಕಾರ್ಮಿಕ ಹೋರಾಟಗಾರರ ಮೇಲೆ ಪೊಲೀಸರ ಮೊಕದ್ದಮೆ-ಖಂಡಿಸಿ ಅನಿರ್ದಿಷ್ಟಾವಧಿ ಧರಣಿ

ಬೆಂಗಳೂರು, ಜು.2-ತುಂಗಭದ್ರಾ ನೀರು ನಿರ್ವಹಣಾ ಕಾರ್ಮಿಕರ 14 ತಿಂಗಳ ವೇತನ ಪಾವತಿ ಹಾಗೂ ಯರಮರಸ್ ಥರ್ಮಲ್ ಪವರ್ ಸ್ಟೇಷನ್‍ನಿಂದ ಹೊರ ಹಾಕಿದ 500 ಮಂದಿ ಕಾರ್ಮಿಕರಿಗೆ ಕೆಲಸ ಕೊಡಿ ಎಂದು ಕೇಳಿದ್ದಕ್ಕೆ ಟಿಯುಸಿಐ ಮುಖಂಡರು ಸೇರಿದಂತೆ 50 ಮಂದಿ ಕಾರ್ಮಿಕ ಹೋರಾಟಗಾರರ ಮೇಲೆ ರಾಯಚೂರು ಪೊಲೀಸರು ಮೊಕದ್ದಮೆ ಹೂಡಿರುವುದನ್ನು ಖಂಡಿಸಿ ನಾಳೆ (ಜು.3)ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ ತಿಳಿಸಿದೆ.

ಕರೇಗುಡ್ಡ ಗ್ರಾಮ ವಾಸ್ತವ್ಯದ ದಿನ ಮುಖ್ಯಮಂತ್ರಿ ಬಸ್ ಅಡ್ಡಗಟ್ಟಿ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಕೇಳಿದ್ದಕ್ಕೆ ಕಾರ್ಮಿಕರ ಮೇಲೆ ರಾಯಚೂರು ಪೊಲೀಸರು ಮೊಕದ್ದಮೆ ಹೂಡಿದ್ದಾರೆ. ಇದನ್ನು ವಿರೋಧಿಸಿ ನಾಳೆ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಸಂಘದ ಅಧ್ಯಕ್ಷ ಆರ್.ಮಾನಸಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ