ಭಾರತ ಭೂ ಸೇನೆಯು ಆಗಾದ ಶಕ್ತಿ ಸಾಮಥ್ರ್ಯ ಹೊಂದಿದೆ

ನಾಸಿಕ್, ಜೂ. 29- ಯೋಧರು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಕೊರತೆಯ ನಡುವೆಯು ಭಾರತ ಭೂ ಸೇನೆಯ ಅಗಾಧ ಶಕ್ತಿ ಸಾಮಥ್ರ್ಯ ಅನಾವರಣಗೊಂಡಿದ್ದು, ವೈರಿರಾಷ್ಟ್ರಗಳು ಆತಂಕಗೊಳ್ಳುವಂತಾಗಿದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಡಿಯೋಲಲಿ ಪ್ರದೇಶದಲ್ಲಿ ನಡೆದ ದ್ವೈವಾರ್ಷಿಕ ಸೇನಾ ಸಮರಾಭ್ಯಾಸದಲ್ಲಿ ಬಿಎಂ-21ಗ್ರಾಡ್ ಫಿರಂಗಿಗಳ ಮೂಲಕ ಕೇವಲ 60 ಸೆಕೆಂಡುಗಳಲ್ಲಿ 240 ರಾಕೆಟ್‍ಗಳನ್ನು ಉಡಾಯಿಸುವ ಮೂಲಕ ಭಾರತ ಸೇನೆಯ ಸಾಮಥ್ರ್ಯ ಸಾಬೀತಾಯಿತು.

ಬಿಎಂ-21 ಫಿರಂಗಿಗಳ ರಾಕೆಟ್ ಸುರಿಮಳೆಗಳ ಆರ್ಭಟ ಕಂಡು ಪಾಕಿಸ್ತಾನ ಬೆಚ್ಚಿಬೀಳುವಂತಾಗಿದೆ. ಈ ಫಿರಂಗಿಗಳು ಸುಮಾರು 45ಕಿ.ಮೀ ದೂರದಲ್ಲಿರುವ ವೈರಿ ಗುರಿಗಳನ್ನು ನಿಖರವಾಗಿ ತಲುಪಿ ಧ್ವಂಸ ಮಾಡುವ ಅಗಾಧ ಸಾಮಥ್ರ್ಯ ಹೊಂದಿದೆ.

ಡಿಯೋಲಲಿಯಲ್ಲಿ ನಡೆದ ಈ ತಾಲೀಮು ವೇಳೆ ಬಿಎಂ -21ಗ್ರಾಡ್ ಆರ್ಟಿಲರಿ ಗನ್‍ಗಳ ಮೂಲಕ ಟ್ಯೂಬ್ ವ್ಯವಸ್ಥೆಯಲ್ಲಿ ಕೇವಲ 1ನಿಮಿಷದಲ್ಲಿ 240 ರಾಕೆಟ್‍ಗಳು ಬೆಂಕಿಕಾರುತ್ತಾ ಅಗ್ನಿಚೆಂಡುಗಳಂತೆ ನಿರಂತರವಾಗಿ ಆರ್ಭಟಿಸಿದವು. ರಾಕೆಟ್‍ಗಳ ಸುರಿಮಳೆಗಳ ದೃಶ್ಯವನ್ನು ಭಾರತೀಯ ಭೂ ಸೇನೆಯ ಮೂಲಕ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಎಂ-21 ಗ್ರಾಡ್ ಫಿರಂಗಿಗಳು ರಷ್ಯಾ ನಿರ್ಮಿತ ಬಹು ಉದ್ದೇಶದ ಅತ್ಯಾಧುನಿಕ ಫಿರಂಗಿಗಳಾಗಿವೆ. ಅಧಿಕ ಕಾರ್ಯಕ್ಷಮತೆ ಮತ್ತು ಎಲ್ಲ ಪರಸ್ಥಿತಿ ಮತ್ತು ವಾತಾವರಣಗಳಲ್ಲೂ ಬಳಸಬಹುದಾದ ಸಾಮಥ್ರ್ಯ ಇದಕ್ಕೆ ಇದೆ.

ರಷ್ಯಾ-ಭಾರತ ಸೇರಿದಂತೆ ಬೆರಳೆಣಿಕೆಯಷ್ಟು ದೇಶಗಳು ಮಾತ್ರ ಈ ಫಿರಂಗಿಗಳನ್ನು ಹೊಂದಿವೆ. ಎರಡು ದೇಶಗಳ ನಡುವೆ ಸದೃಢ ರಕ್ಷಣಾ ಸಹಕಾರ ಒಪ್ಪಂದಕ್ಕೆ ಬಿಎಂ-21 ಸಾಕ್ಷಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ