ಜು.1ರಂದು ತಹಶೀಲ್ದಾರ್ ಕಚೇರಿ ಬಳಿ ಕರಾಳ ದಿನ ಆಚರಣೆ-ವಾಟಾಳ್ ನಾಗರಾಜ್

ಬೆಂಗಳೂರು, ಜೂ.29 -ಜಿಂದಾಲ್ ಕಂಪನಿ ವಿರುದ್ಧ ಹೋರಾಟ ನಡೆಸುತ್ತಿದ್ದ ನಮ್ಮ ಕಾರ್ಯಕರ್ತರ ಮೇಲೆ ತಹಶೀಲ್ದಾರ್ ಮೊಕದ್ದಮೆ ಹೂಡಿರುವುದನ್ನು ವಿರೋಧಿಸಿ ಜು.1 ರಂದು ಸಂಡೂರಿನ ತಹಶೀಲ್ದಾರ್ ಕಚೇರಿ ಬಳಿ ಕರಾಳ ದಿನ ಆಚರಿಸುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಜಿಂದಾಲ್ ಕಂಪನಿ ವಿರುದ್ಧ ಹೋರಾಟ ನಡೆಸದೆ ಸುಮ್ಮನಿದೆ. ಬಿಜೆಪಿ ಕೇವಲ 2 ದಿನ ನಾಟಕವಾಡಿ ಪ್ರತಿಭಟನೆ ನಡೆಸಿ ಸುಮ್ಮನಾದರು. ಇನ್ನು ಜೆಡಿಎಸ್‍ನವರು ಈ ಸಂಬಂಧ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಆದರೆ ಇದೊಂದು ಬೋಗಸ್ ಸಮಿತಿಯಾಗಲಿದೆ ಎಂದು ವಾಗ್ದಾಳಿ ನಡೆಸಿದರು.

ಹಾಗಾಗಿ ಈ ಪ್ರಕರಣ ತನಿಖೆಯನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಅಥವಾ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ ಅವರು, 1995ರಿಂದ ಇಲ್ಲಿಯವರೆಗೆ 11,500 ಎಕರೆ ಜಮೀನನ್ನು ಜಿಂದಾಲ್ ಕಂಪನಿಗೆ ನೀಡಲಾಗಿದೆ. ಈ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಈ ಕಂಪನಿ 1,500 ಕೋಟಿ ರೂ.ತೆರಿಗೆ ವಂಚಿಸಿದೆ. ಹಾಗಾಗಿ ಈ ಸಂಬಂಧ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸುವಂತೆ ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ