ಭಯೋತ್ಪಾದನೆಯು ಮನುಕುಲ ಮತ್ತು ಮಾನವೀಯತೆಗೆ ದೊಡ್ಡ ಆತಂಕ

ಒಸಾಕಾ, ಜೂ.28-ಭಯೋತ್ಪಾದನೆಯು ಮನುಕುಲ ಮತ್ತು ಮಾನವೀಯತೆಗೆ ದೊಡ್ಡ ಆತಂಕ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಪಿಡುಗು ಮುಗ್ಧರನ್ನು ಬಲಿ ತೆಗೆದುಕೊಳ್ಳುವ ಜೊತೆಗೆ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸ್ಥಿರತೆಗೆ ಗಂಭೀರ ದುಷ್ಪರಿಣಾಮ ಸಹ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಉದಯರ ನಾಡು ಜಪಾನ್‍ನ ಒಸಾಕಾದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ದೇಶಗಳ ನಾಯಕರ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಮೋದಿ ಭಯೋತ್ಪಾದನೆ ಮತ್ತು ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಎಲ್ಲ ವಿಧಾನಗಳಿಗೂ ತಡೆ ಹಾಕುವ ಅಗತವ್ಯಿದೆ ಎಂದು ಪ್ರತಿಪಾದಿಸಿದ್ದಾರೆ.

ಇಂದು ನಾನು ಮೂರು ಪ್ರಮುಖ ಸವಾಲುಗಳ ಬಗ್ಗೆ ಗಮನ ಕೇಂದ್ರೀಕರಿಸುತ್ತೇನೆ. ಮೊದಲನೆಯದು ಅಸ್ಥಿರತೆ ಮತ್ತು ಜಾಗತಿಕ ಆರ್ಥಿಕತೆ ಕುಂಠಿತ. ಏಕಪಕ್ಷೀಯತೆ ಮತ್ತು ಅಪಾಯಕಾರಿ ಸ್ಪರ್ಧಾತ್ಮಕತೆಯು ಬಹು ಪಕ್ಷೀಯ ಜಾಗತಿಕ ವ್ಯಾಪಾರ ವ್ಯವಸ್ಥೆ ಮೇಲೆ ಕರಾಳ ಛಾಯೆ ಬೀರಿದಿದೆ ಎಂದು ಮೋದಿ ವ್ಯಾಖ್ಯಾನಿಸಿದರು.

ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯುಟಿಒ)ಯನ್ನು ಬಲಗೊಳಿಸುವ ಅಗತ್ಯ ಬಗ್ಗೆ ಒತ್ತಿ ಹೇಳಿದ ಮೋದಿ, ಉಗ್ರಗಾಮಿಗಳ ರಕ್ಷಣಾವಾದದ ವಿರುದ್ಧ ಹೋರಾಡಬೇಕು. ಭಯೋತ್ಪಾದನೆ ನಿಗ್ರಹಕ್ಕೆ ಎಲ್ಲರೂ ಒಗ್ಗೂಡಿ ಸಮರ ತೀವ್ರಗೊಳಿಸಬೇಕು ಎಂದು ಕರೆ ನೀಡಿದರು.

ಸಂಪನ್ಮೂಲಗಳ ಕೊರತೆುಂದ ಮೂಲಸೌಕರ್ಯಾಭಿವೃದ್ದಿ ಕ್ಷೇತ್ರದಲ್ಲಿ 1.3 ಲಕ್ಷ ಕೋಟಿ ಡಾಲರ್ ಹೂಡಿಕೆ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಪ್ರಧಾನಿ ಹೇಳಿದರು.

ಎರಡನೇ ಸವಾಲು ಎಂದರೆ ಅಭಿವೃದ್ದಿ ಸುಸ್ಥಿತರೆ.ಡಿಜಿಟೈಸೇಷನ್‍ನಂಥ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳು ಮತ್ತು ವಾತಾವರಣ ಬದಲಾವಣೆಯು ಈಗಿನ ಮತ್ತು ಮುಂದಿನ ಜನಾಂಗಕ್ಕೆ ದೊಡ್ಡ ಸವಾಲಾಗಿದೆ ಎಂದು ಮೋದಿ ಶ್ಲೇಸಿದರು.

ಅಸಮಾನತೆಯನ್ನು ನಿವಾರಿಸಿ ಸಬಲೀಕರಣಕ್ಕೆ ಒತ್ತು ನೀಡಿದಾಗ ಅಭಿವೃದ್ದಿ ಸಾಧ್ಯ ಎಂದು ಅವರು ಹೇಳಿದರು.

ಬ್ರೆಜಿಲ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿಯರ್ ಬೊಸೋನಾರೋ ಅವರಿಗೆ ಅಭಿನಂದನೆ ಸಲ್ಲಿಸಿ ಬ್ರಿಕ್ಸ್ ಕುಟುಂಬಕ್ಕೆ ಸ್ವಾಗತಿಸಿದರು.

ಬ್ರಿಕ್ಸ್ ಸಮಾವೇಶದಲ್ಲಿ ದಕ್ಷಿಣ ಆಫ್ರಿಕಾದ ನೂತನ ಅಧ್ಯಕ್ಷ ಸಿರಿಲ್ ರಾಮಪೋನಾ ಅವರನ್ನೂ ಸಹ ಮೋದಿ ಅಭಿನಂದಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ