ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಎಸ್‍ಐಟಿ

ಬೆಂಗಳೂರು, ಜೂ.27- ಬಹು ಕೋಟಿ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್‍ಐಟಿ ಇಂದೂ ಸಹ ಶೋಧ ಮುಂದುವರೆಸಿದ್ದು ಐಎಂಎ ಕಂಪೆನಿಗೆ ಸೇರಿದ ಫ್ರಂಟ್ ಲೈನ್ ಫಾರ್ಮಸಿ ಮತ್ತು ಸೂಪರ್ ಮಾರ್ಕೆಟ್‍ಗಳ ಮೇಲೆ ದಾಳಿ ನಡೆಸಿದೆ.

ನಗರದ 22 ಕಡೆ ಫ್ರಂಟ್‍ಲೈನ್ ಫಾರ್ಮಸಿ ಮತ್ತು ಎರಡು ಕಡೆ ಸೂಪರ್ ಮಾರ್ಕೆಟ್ ಇರುವ ಬಗ್ಗೆ ಮಾಹಿತಿ ಪಡೆದ ಎಸ್‍ಐಟಿ ಅಧಿಕಾರಿಗಳ ತಂಡ ಈ ಮಳಿಗೆಗಳನ್ನು ಪರಿಶೀಲನೆ ನಡೆಸಿತು.

ಇಂದು ಬೆಳಗ್ಗೆಯೇ ಎಸ್‍ಐಟಿ ತಂಡದ ಅಧಿಕಾರಿಗಳು ಫಾರ್ಮಸಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿರುವುದಲ್ಲದೆ ಎರಡು ಸೂಪರ್ ಮಾರ್ಕೆಟ್‍ಗಳ ಮೇಲೂ ದಾಳಿ ಮಾಡಿ ವಿವಿಧ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ ಎಂದು ಡಿಸಿಪಿ ಗಿರೀಶ್ ಈ ಸಂಜೆಗೆ ತಿಳಿಸಿದ್ದಾರೆ.

ಇತ್ತೀಚೆಗೆ ಐಎಂಎ ಜ್ಯುವೆಲರ್ಸ್ ಕಂಪೆನಿಗೆ ಸೇರಿದ ಐದು ಮಳಿಗೆಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಚಿನ್ನಾಭರಣ, ವಜ್ರಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ವಶಪಡಿಸಿಕೊಂಡು ತನಿಖೆಯನ್ನು ಮುಂದುವರೆಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ